AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್‌ ಆರೋಗ್ಯ ಕಾರ್ಯದರ್ಶಿಯಾಗಿ ರಾಬರ್ಟ್ ಕೆನಡಿ ಆಯ್ಕೆ ಖಂಡಿಸಿ ಪತ್ರ ಬರೆದ 77 ನೊಬೆಲ್ ಪುರಸ್ಕೃತರು

ಡೊನಾಲ್ಡ್​ ಟ್ರಂಪ್ ಅವರು ರಾಬರ್ಟ್​ ಎಫ್‌. ಕೆನಡಿ ಜೂನಿಯರ್ ಅವರನ್ನು ವಿರೋಧಿಸುವ 77 ನೊಬೆಲ್ ಪ್ರಶಸ್ತಿ ವಿಜೇತರು ಪತ್ರಕ್ಕೆ ಸಹಿ ಹಾಕಿದ್ದಾರೆ. ಡಿಸೆಂಬರ್ 9ರಂದು 77 ನೊಬೆಲ್ ಪ್ರಶಸ್ತಿ ವಿಜೇತರು, ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಸ್ಥಾನಕ್ಕೆ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರ ಆಯ್ಕೆಯಾದ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರ ನಾಮನಿರ್ದೇಶನವನ್ನು ವಿರೋಧಿಸಿ ಯುಎಸ್​ ಸೆನೆಟ್‌ಗೆ ಬಹಿರಂಗ ಪತ್ರವನ್ನು ಕಳುಹಿಸಿದ್ದಾರೆ.

ಟ್ರಂಪ್‌ ಆರೋಗ್ಯ ಕಾರ್ಯದರ್ಶಿಯಾಗಿ ರಾಬರ್ಟ್ ಕೆನಡಿ ಆಯ್ಕೆ ಖಂಡಿಸಿ ಪತ್ರ ಬರೆದ 77 ನೊಬೆಲ್ ಪುರಸ್ಕೃತರು
ರಾಬರ್ಟ್ ಕೆನಡಿ
ಸುಷ್ಮಾ ಚಕ್ರೆ
|

Updated on: Dec 10, 2024 | 3:30 PM

Share

ನವದೆಹಲಿ: ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಕಾರ್ಯದರ್ಶಿಯಾಗಿ ಆರ್​ಎಫ್​ಕೆ ಜೂನಿಯರ್ ಆಯ್ಕೆಯನ್ನು ಖಂಡಿಸುವ ಪತ್ರಕ್ಕೆ 77 ನೊಬೆಲ್ ಪುರಸ್ಕೃತರು ಸಹಿ ಹಾಕಿದ್ದಾರೆ. ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ರಾಬರ್ಟ್ ಕೆನಡಿ ಜೂನಿಯರ್ ಅವರನ್ನು ಆಯ್ಕೆ ಮಾಡುವ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಖಂಡಿಸಿ ನೊಬೆಲ್ ಪ್ರಶಸ್ತಿ ಪುರಸ್ಕೃತರು ಪತ್ರ ಬರೆದಿದ್ದಾರೆ.

77 ನೊಬೆಲ್ ಪ್ರಶಸ್ತಿ ವಿಜೇತರು ಸೋಮವಾರ ಯುಎಸ್ ಸೆನೆಟ್‌ಗೆ ಬಹಿರಂಗ ಪತ್ರವನ್ನು ಕಳುಹಿಸಿದ್ದಾರೆ. ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ (HHS)ಗೆ ಅಧ್ಯಕ್ಷರಾಗಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿರುವ ರಾಬರ್ಟ್ ಎಫ್. ಕೆನಡಿ ಜೂನಿಯರ್ ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಬಿಸಿನೆಸ್ ಪಾರ್ಟ್ನರ್

ರಾಬರ್ಟ್ ಕೆನಡಿ ಅವರಿಗೆ DHHSನ ಉಸ್ತುವಾರಿ ವಹಿಸುವುದು ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ವೈದ್ಯಕೀಯ, ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ 77 ಪುರಸ್ಕೃತರು ಸಹಿ ಮಾಡಿದ ಪತ್ರದಲ್ಲಿ ತಿಳಿಸಿದ್ದಾರೆ. ಸಹಿ ಮಾಡಿದವರಲ್ಲಿ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕಾಗಿ 2023ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಪಡೆದ ಡ್ರೂ ವೈಸ್‌ಮನ್ ಕೂಡ ಒಬ್ಬರು. mRNA ಲಸಿಕೆ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಪ್ರಗತಿಯಾಗಿದೆ.

ಹತ್ಯೆಗೀಡಾದ ಯುಎಸ್ ಅಧ್ಯಕ್ಷ ಜಾನ್ ಎಫ್ ಕೆನಡಿ ಜೂನಿಯರ್ ಅವರ ಸೋದರಳಿಯನಾಗಿರುವ ರಾಬರ್ಟ್ ಕೆನಡಿ ವಿರೋಧಿ ಅಲೆ ಅಮೆರಿಕದಲ್ಲಿದೆ. ಯಾವುದೇ ವೈದ್ಯಕೀಯ ಹಿನ್ನೆಲೆಯಿಲ್ಲದ ರಾಬರ್ಟ್ ಕೆನಡಿ ಅವರಿಗೆ ಈ ಹುದ್ದೆ ನೀಡುವುದು ಸರಿಯಲ್ಲ ಎಂದು ನೊಬೆಲ್ ಪುರಸ್ಕೃತರು ಅಭಿಪ್ರಾಯಪಟ್ಟಿದ್ದಾರೆ. ಅವರು ಇತ್ತೀಚೆಗೆ ಕೋವಿಡ್ -19 ಲಸಿಕೆಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಅಕ್ರಮ ವಲಸಿಗರ ವಿರುದ್ಧ ಟ್ರಂಪ್ ಕಠಿಣ ನಿಲುವು

ಔಷಧ, ವಿಜ್ಞಾನ, ಸಾರ್ವಜನಿಕ ಆರೋಗ್ಯ, ಅಥವಾ ಆಡಳಿತದಲ್ಲಿ ಅವರ ಅನುಭವದ ಕೊರತೆಯ ಜೊತೆಗೆ ರಾಬರ್ಟ್ ಕೆನಡಿ ಅವರು ಅನೇಕ ಆರೋಗ್ಯ ರಕ್ಷಿಸುವ ಮತ್ತು ಜೀವ ಉಳಿಸುವ ಲಸಿಕೆಗಳ ವಿರೋಧಿಯಾಗಿದ್ದಾರೆ. ದಡಾರ ಮತ್ತು ಪೋಲಿಯೊ ತಡೆಗಟ್ಟಲು ಬಳಸುವ ಲಸಿಕೆಗಳನ್ನು ಅವರು ವಿರೋಧಿಸಿದ್ದಾರೆ. ಹೀಗಾಗಿ ಅವರನ್ನು ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡುವುದು ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅವರ ನೇಮಕಾತಿಯ ದೃಢೀಕರಣದ ವಿರುದ್ಧ ಮತ ಚಲಾಯಿಸುವಂತೆ ನಾವು ಬಲವಾಗಿ ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ