ಫ್ರಾನ್ಸ್ ಅಧ್ಯಕ್ಷರ ಕಪಾಳಕ್ಕೆ ಬಾರಿಸಿದ ಜನಸಾಮಾನ್ಯ! ವಿಡಿಯೋ ವೈರಲ್

ಫ್ರಾನ್ಸ್ ಅಧ್ಯಕ್ಷರ ಕಪಾಳಕ್ಕೆ ಬಾರಿಸಿದ ಜನಸಾಮಾನ್ಯ! ವಿಡಿಯೋ ವೈರಲ್
ಫ್ರಾನ್ಸ್ ಅಧ್ಯಕ್ಷ

ಆತ ’ಡೌನ್ ವಿಥ್ ಮಾಕ್ರೋನಿಯಾ’ (ಅ ಬಸ್ ಲ ಮಾಕ್ರೋನಿಯಾ) ಎಂದು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದ್ದಾನೆ. ಬಳಿಕ, ಕೆನ್ನೆಗೆ ಹೊಡೆದಿದ್ದಾನೆ. ಆತನ ಹೆಸರು ಮತ್ತಿತರ ವಿವರಗಳು ಸದ್ಯಕ್ಕೆ ಲಭ್ಯವಾಗಿಲ್ಲ. 

TV9kannada Web Team

| Edited By: ganapathi bhat

Jun 08, 2021 | 11:38 PM

ಫ್ರಾನ್ಸ್: ಜನರ ಭೇಟಿಯ ವೇಳೆ, ಜನಸಂದಣಿಯ ನಡುವೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೊನ್ ಕೆನ್ನೆಗೆ ಸಾರ್ವಜನಿಕನೊಬ್ಬ ಏಟು ಕೊಟ್ಟ ಘಟನೆ ಮಂಗಳವಾರ ನಡೆದಿದೆ. ಫ್ರಾನ್ಸ್ ಸೌತ್​ಈಸ್ಟ್​ನ ಡ್ರೋಮ್ ಪ್ರದೇಶದಲ್ಲಿ ಫ್ರಾನ್ಸ್ ಅಧ್ಯಕ್ಷ ಸಾರ್ವಜನಿಕರೊಂದಿಗೆ ಭೇಟಿ ಹಾಗೂ ಮಾತುಕತೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ನೆರೆದಿದ್ದ ಜನರಲ್ಲಿ ಒಬ್ಬಾತ ಅಧ್ಯಕ್ಷರಿಗೇ ಕೆನ್ನೆಗೆ ಬಾರಿಸಿದ್ದಾನೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಅಲ್ಲಿನ ಬಿಎಫ್​ಎಮ್ ಟಿವಿ ಮತ್ತು ಆರ್​ಎಮ್​ಸಿ, ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೊನ್ ಕೆನ್ನೆಗೆ ಸಾರ್ವಜನಿಕರ ನಡುವೆ ನೆರೆದಿದ್ದ ಒಬ್ಬಾತ ಏಟು ಕೊಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ಅದರಂತೆ, ಹಸಿರು ಬಣ್ಣದ ಅಂಗಿ ತೊಟ್ಟುಕೊಂಡಿದ್ದ, ಕನ್ನಡಕ ಧರಿಸಿದ್ದ ಹಾಗೂ ಮಾಸ್ಕ್ ಧರಿಸಿದ್ದ ವ್ಯಕ್ತಿ ಈ ಕೆಲಸ ಮಾಡಿದ್ದಾನೆ.

ಆತ ’ಡೌನ್ ವಿಥ್ ಮಾಕ್ರೋನಿಯಾ’ (ಅ ಬಸ್ ಲ ಮಾಕ್ರೋನಿಯಾ) ಎಂದು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದ್ದಾನೆ. ಬಳಿಕ, ಕೆನ್ನೆಗೆ ಹೊಡೆದಿದ್ದಾನೆ. ಆತನ ಹೆಸರು ಮತ್ತಿತರ ವಿವರಗಳು ಸದ್ಯಕ್ಕೆ ಲಭ್ಯವಾಗಿಲ್ಲ.

ವಿಡಿಯೋ ನೋಡಿ:

ಈ ಸಂದರ್ಭ ಮಾಕ್ರೋನ್​ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದ್ದಾರೆ. ಕಪಾಳಕ್ಕೆ ಏಟು ಕೊಟ್ಟವನನ್ನು ಎಳೆದು, ಅಧ್ಯಕ್ಷರನ್ನು ದೂರ ಮಾಡಿದ್ದಾರೆ. ಈ ಘಟನೆಯನ್ನು ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೊನ್ ಭದ್ರತಾ ಪಡೆ ಕೂಡ ಒಪ್ಪಿಕೊಂಡಿದೆ.

ಇದನ್ನೂ ಓದಿ: World Record: ಒಂದೇ ಬಾರಿಗೆ ಹತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಗಿನ್ನಿಸ್ ದಾಖಲೆ ನಿರ್ಮಿಸಿದ ಅಮ್ಮ!

Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!

Follow us on

Related Stories

Most Read Stories

Click on your DTH Provider to Add TV9 Kannada