ಎಫ್‌ಬಿಐ ಟಾಪ್-10 ಮೋಸ್ಟ್ ವಾಂಟೆಡ್ ಪಟ್ಟಿಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್: ಸುಳಿವು ಕೊಟ್ಟರೆ 1 ಮಿಲಿಯನ್ ಡಾಲರ್ ಬಹುಮಾನ

ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಈಗ ಎಫ್‌ಬಿಐ ಟಾಪ್-10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. ಸಿಧು ಮೂಸೆವಾಲಾ ಹತ್ಯೆ, ಸುಲಿಗೆ, ಮತ್ತು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಕಳ್ಳಸಾಗಣೆ ಆರೋಪಗಳನ್ನು ಎದುರಿಸುತ್ತಿರುವ ಈತನ ಸುಳಿವು ನೀಡಿದವರಿಗೆ $1 ಮಿಲಿಯನ್ ಬಹುಮಾನ ಘೋಷಿಸಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ ಬ್ರಾರ್, ಭಾರತ, ಕೆನಡಾ, ಅಮೆರಿಕಾದಲ್ಲಿ ಅನೇಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಈತನ ಬಂಧನಕ್ಕೆ ಎಫ್‌ಬಿಐ ಬಲೆ ಬೀಸಿದೆ.

ಎಫ್‌ಬಿಐ ಟಾಪ್-10 ಮೋಸ್ಟ್ ವಾಂಟೆಡ್ ಪಟ್ಟಿಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್: ಸುಳಿವು ಕೊಟ್ಟರೆ 1 ಮಿಲಿಯನ್ ಡಾಲರ್ ಬಹುಮಾನ
ಗೋಲ್ಡಿ ಬ್ರಾರ್
Image Credit source: ANI

Updated on: Sep 29, 2026 | 7:34 AM

ವಾಷಿಂಗ್ಟನ್, ಸೆಪ್ಟೆಂಬರ್ 29: ಕುಖ್ಯಾತ ಗ್ಯಾಂಗ್​ಸ್ಟರ್ ಸತೀಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್‌ನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಟಾಪ್ 10 ವಾಟೆಂಡ್ ಫ್ಯುಗಿಟಿವ್ಸ್​​ ಲಿಸ್ಟ್​ನಲ್ಲಿ ಸೇರಿಸಿದೆ. ಇತ್ತೀಚಿಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಪ್ರಮುಖ ತನಿಖಾ ಸಂಸ್ಥೆ ಎಫ್​ಬಿಐ ಆತನ ಬಂಧನಕ್ಕೆ ಕಾರಣವಾಗುವ ನಿಖರ ಮಾಹಿತಿ ನೀಡಿದವರಿಗೆ ಬರೋಬ್ಬರಿ 1 ಮಿಲಿಯನ್ ಯುಎಸ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ ಅಂದರೆ ಅದರ ಮೊತ್ತ ಸುಮಾರು 8.3 ಕೋಟಿ ರೂ.ಗಳಷ್ಟಾಗಿರುತ್ತದೆ.

ಎಫ್‌ಬಿಐ ನೋಟಿಸ್‌ನಲ್ಲಿ ಏನಿದೆ?

ಎಫ್​ಯಬಿಐ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ನೇತೃತ್ವದ ಸಂಘಟಿತ ಅಪರಾಧ ಸಿಂಡಿಕೇಟ್ ಉತ್ತರ ಅಮೆರಿಕದ ಮುಖ್ಯಸ್ಥನಾಗಿ ಗೋಲ್ಡಿ ಬ್ರಾರ್ ಕೆಲಸ ಮಾಡುತ್ತಿದ್ದ, ಯುನೈಟೆಡ್ ಸ್ಟೇಟ್ಸ್​ ಮತ್ತು ಕೆನಡಾದಾದ್ಯಂತ ಹರಡಿರುವ ಹಲವು ಭೀಕರ ಅಪರಾಧ ಕೃತ್ಯಗಳ ಹಿಂದೆ ಈತನ ಕೈವಾಡವಿದೆ.

ಗಂಭೀರ ಅಪರಾಧಗಳು: ರಾಜಕೀಯ ಮತ್ತು ಧಾರ್ಮಿಕ ಮುಖಂಡರ ಟಾರ್ಗೆಟ್ ಕಿಲ್ಲಿಂಗ್, ಸುಪಾರಿ ಹತ್ಯೆಗಳು, ಗುಂಡಿನ ದಾಳಿ, ಅಪಹರಣ, ಉದ್ಯಮಿಗಳಿಂದ ಕೋಟ್ಯಂತರ ರೂಪಾಯಿ ಸುಲಿಗೆ, ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳ ಅಂತರರಾಷ್ಟ್ರೀಯ ಕಳ್ಳಸಾಗಣೆಯಲ್ಲಿ ಈ ಸಿಂಡಿಕೇಟ್ ತೊಡಗಿಸಿಕೊಂಡಿದೆ.

ಫೆಡರಲ್ ವಾರಂಟ್ ಜಾರಿ: ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್ ಈತನ ವಿರುದ್ಧ ಫೆಡರಲ್ ಬಂಧನ ವಾರಂಟ್ ಹೊರಡಿಸಿದೆ. ಕಠಿಣವಾದ ‘ರಿಕೋದರೋಡೆಕೋರರ ಪ್ರಭಾವಿತ ಮತ್ತು ಭ್ರಷ್ಟ ಸಂಸ್ಥೆಗಳ ಕಾಯ್ದೆ’ ಪಿತೂರಿ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಆರೋಪಗಳನ್ನು ಈತನ ಮೇಲೆ ಹೊರಿಸಲಾಗಿದೆ.

ಮತ್ತಷ್ಟು ಓದಿ:

ಕೇವಲ 6 ಗಂಟೆಗಳ ಪೆರೋಲ್ ಮೇಲೆ ಮನೆಗೆ ಬಂದ ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತಿಸಿದ ಗ್ರಾಮಸ್ಥರು

 

ಅಮೆರಿಕ ನೆಲದಲ್ಲೇ ಅಡಗುತಾಣ

ಮೂಲತಃ ಪಂಜಾಬ್‌ನ ಮುಕ್ತಸರ್ ಮೂಲದವನಾದ ಸತೀಂದರ್‌ಜೀತ್ ಸಿಂಗ್, ಸದ್ಯ ಅಮೆರಿಕದಲ್ಲೇ ನೆಲೆಸಿದ್ದು ಅಲ್ಲಿಂದಲೇ ತನ್ನ ಜಾಲವನ್ನು ನಿಯಂತ್ರಿಸುತ್ತಿದ್ದಾನೆ. ಈತ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ, ಫ್ರೆಸ್ನೊ ಸೇರಿದಂತೆ ಕೆನಡಾ, ಭಾರತ ಮತ್ತು ಮೆಕ್ಸಿಕೊ ದೇಶಗಳಲ್ಲೂ ಸಕ್ರಿಯ ಕ್ರಿಮಿನಲ್ ನೆಟ್‌ವರ್ಕ್ ಹೊಂದಿದ್ದಾನೆ. ಈತ ಸದಾ ಶಸ್ತ್ರಸಜ್ಜಿತನಾಗಿದ್ದು ಅತ್ಯಂತ ಅಪಾಯಕಾರಿಯಾಗಿದ್ದಾನೆ ಎಂದು ಎಫ್‌ಬಿಐ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ಸೂತ್ರಧಾರ: 2022 ರ ಮೇ 29 ರಂದು ಪಂಜಾಬ್‌ನ ಮಾನ್ಸಾದಲ್ಲಿ ನಡೆದ ಖ್ಯಾತ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು (ಸಿಧು ಮೂಸೆವಾಲಾ) ಅವರ ಭೀಕರ ಹತ್ಯೆಯ ಸಂಪೂರ್ಣ ಜವಾಬ್ದಾರಿಯನ್ನು ಕೆನಡಾದಲ್ಲಿದ್ದ ಗೋಲ್ಡಿ ಬ್ರಾರ್ ಫೇಸ್‌ಬುಕ್ ಪೋಸ್ಟ್ ಮೂಲಕ ಬಹಿರಂಗವಾಗಿ ಒಪ್ಪಿಕೊಂಡಿದ್ದ.

ಭಾರತದ ಗೃಹ ಸಚಿವಾಲಯವು ಗೋಲ್ಡಿ ಬ್ರಾರ್‌ನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (UAPA) ಅಧಿಕೃತವಾಗಿ ‘ಘೋಷಿತ ಭಯೋತ್ಪಾದಕ’ ಎಂದು ಗುರುತಿಸಿದೆ. ಈತನ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಲ್ಲಿದೆ.

ಎಫ್‌ಬಿಐ ‘ಟಾಪ್ 10’ ಪಟ್ಟಿಯ ಮಹತ್ವ: ಎಫ್‌ಬಿಐ 1950 ರಿಂದ ಅತ್ಯಂತ ಅಪಾಯಕಾರಿ ಜಾಗತಿಕ ಕ್ರಿಮಿನಲ್‌ಗಳನ್ನು ಈ ಪಟ್ಟಿಯಲ್ಲಿ ಹೆಸರಿಸುತ್ತಾ ಬಂದಿದೆ. ಒಸಾಮಾ ಬಿನ್ ಲಾಡೆನ್ ಸೇರಿದಂತೆ ಹಲವು ಕುಖ್ಯಾತ ವ್ಯಕ್ತಿಗಳು ಈ ಪಟ್ಟಿಯಲ್ಲಿದ್ದರು. ಭಾರತೀಯ ಮೂಲದ ಗ್ಯಾಂಗ್‌ಸ್ಟರ್ ಒಬ್ಬನನ್ನು ಇಷ್ಟೊಂದು ಬೃಹತ್ ಮೊತ್ತದ ಬಹುಮಾನದೊಂದಿಗೆ ಈ ಪಟ್ಟಿಗೆ ಸೇರಿಸಿರುವುದು ಅಮೆರಿಕ ಹಾಗೂ ಕೆನಡಾದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಹಾವಳಿ ಎಷ್ಟು ಗಂಭೀರ ಹಂತ ತಲುಪಿದೆ ಎಂಬುದನ್ನು ತೋರಿಸುತ್ತದೆ.

ಫ್ಯುಗಿಟಿವ್ಸ್​ ಎಂದರೇನು?
ಫ್ಯುಗಿಟಿವ್ಸ್​ ಎಂದರೆ ತಲೆ ಮರೆಸಿಕೊಂಡವ ಎಂದರ್ಥ, ಆದರೆ ಅಪರಾಧಿ ಎಂದು ಸಾಬೀತಾಗಿದೆ ಎಂದರ್ಥವಲ್ಲ, ಪರಾರಿಯಾಗಿರುವ ಆರೋಪಿ ಎನ್ನಬಹುದು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us