AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

H1B Visa Fee: ಅಮೆರಿಕದಲ್ಲಿ ಉದ್ಯೋಗ ಬಯಸುವ ಭಾರತೀಯ ಐಟಿ ವೃತ್ತಿಪರರಿಗೆ ಗುಡ್​ ನ್ಯೂಸ್, ಡೊನಾಲ್ಡ್​ ಟ್ರಂಪ್ ವಿಧಿಸಿದ್ದ ಎಚ್​1ಬಿ ವೀಸಾ ಹೆಚ್ಚುವರಿ ಶುಲ್ಕ ರದ್ದು

ಅಮೆರಿಕದ H1B ವೀಸಾ ಅರ್ಜಿದಾರರ ಮೇಲೆ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿದ್ದ $1,00,000 ಹೆಚ್ಚುವರಿ ಶುಲ್ಕವನ್ನು ಅಮೆರಿಕದ ಫೆಡರಲ್ ನ್ಯಾಯಾಲಯ ರದ್ದುಗೊಳಿಸಿದೆ. ಇದು ಅಸಂವಿಧಾನಿಕ ತೆರಿಗೆ ಎಂದು ಕೋರ್ಟ್ ಹೇಳಿದೆ. ಈ ತೀರ್ಪು ಭಾರತೀಯ ಐಟಿ ವೃತ್ತಿಪರರಿಗೆ ಮತ್ತು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಿಗೆ ಭಾರಿ ಪರಿಹಾರ ತಂದಿದ್ದು, ಅಮೆರಿಕದಲ್ಲಿ ಉದ್ಯೋಗದ ಕನಸು ಕಂಡವರಿಗೆ ದೊಡ್ಡ ಗೆಲುವು ತಂದುಕೊಟ್ಟಿದೆ.

H1B Visa Fee: ಅಮೆರಿಕದಲ್ಲಿ ಉದ್ಯೋಗ ಬಯಸುವ ಭಾರತೀಯ ಐಟಿ ವೃತ್ತಿಪರರಿಗೆ ಗುಡ್​ ನ್ಯೂಸ್, ಡೊನಾಲ್ಡ್​ ಟ್ರಂಪ್ ವಿಧಿಸಿದ್ದ ಎಚ್​1ಬಿ ವೀಸಾ ಹೆಚ್ಚುವರಿ ಶುಲ್ಕ ರದ್ದು
ಡೊನಾಲ್ಡ್​ ಟ್ರಂಪ್ Image Credit source: Foxnews
ನಯನಾ ರಾಜೀವ್
|

Updated on:Jun 09, 2026 | 8:12 AM

Share

ಬೋಸ್ಟನ್, ಜೂನ್ 09: ಅಮೆರಿಕ(America)ದಲ್ಲಿ  ಕೆಲಸ ಮಾಡುವ ಕನಸು ಕಾಣುತ್ತಿರುವ ಭಾರತೀಯ ಐಟಿ ವೃತ್ತಿಪರರು ಹಾಗೂ ಅಲ್ಲಿನ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಿಗೆ ಯುಎಸ್ ಫೆಡರಲ್ ನ್ಯಾಯಾಲಯ ದೊಡ್ಡ ಪರಿಹಾರ ನೀಡಿದೆ. ಹೊಸ ಎಚ್​-1ಬಿ ವೀಸಾ(H-1B) ಅರ್ಜಿಗಳ ಮೇಲೆ ವಾರ್ಷಿಕ ಬರೋಬ್ಬರಿ $1,00,000 ಅಂದರೆ ಸುಮಾರು 96 ಲಕ್ಷ ರೂ. ಹೆಚ್ಚುವರಿ ಶುಲ್ಕ ವಿಧಿಸುವ ಡೊನಾಲ್ಡ್​ ಟ್ರಂಪ್ ಆಡಳಿತ ವಿವಾದಾತ್ಮಕ ನಿರ್ಧಾರವನ್ನು ಬೋಸ್ಟನ್ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ಈ ಭಾರಿ ಶುಲ್ಕದ ನೀತಿ ಸಂಪೂರ್ಣವಾಗಿ ಕಾನೂನು ಬಾಹಿರ ಎಂದು ಹೇಳಿರುವ ನ್ಯಾಯಾಲಯ ತಕ್ಷಣದಿಂದಲೇ ಜಾರಿಗೆ ಬಾರದಂತೆ ರದ್ದುಗೊಳಿಸಿದೆ.

ನ್ಯಾಯಾಲಯದ ಈ ಐತಿಹಾಸಿಕ ತೀರ್ಪು ಸಿಲಿಕಾನ್ ವ್ಯಾಲಿ ಕಂಪನಿಗಳು, ವಿಶ್ವವಿದ್ಯಾಲಯಗಳು ಹಾಗೂ ಪ್ರತಿವರ್ಷ ಅಮೆರಿಕಕ್ಕೆ ವಲಸೆ ಹೋಗುವ ಸಾವಿರಾರು ವಿದೇಶಿ ತಜ್ಞರಿಗೆ, ವಿಶೇಷವಾಗಿ ಭಾರತೀಯರಿಗೆ ಅತ್ಯಂತ ದೊಡ್ಡ ಜಯ ತಂದುಕೊಟ್ಟಿದೆ.

ತೆರಿಗೆ ವಿಧಿಸುವ ಅಧಿಕಾರ ಅಧ್ಯಕ್ಷರಿಗಿಲ್ಲ: ನ್ಯಾಯಾಧೀಶ ಲಿಯೋ ಸೊರೊಕಿನ್ ತೀರ್ಪು ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೌಶಲ್ಯವಿರುವ ವಿದೇಶಿ ಕೆಲಸಗಾರರ ವೀಸಾಗೆ ಕಠಿಣ ಮಿತಿ ಹೇರಲು ಹಾಗೂ ಪ್ರಸ್ತುತ ಇದ್ದ ದರವನ್ನು 25 ರಿಂದ 50 ಪಟ್ಟು ಹೆಚ್ಚಿಸುವ ಪ್ರಸ್ತಾವನೆಗೆ ಸಹಿ ಹಾಕಿದ್ದರು. ಇದನ್ನು ವಿರೋಧಿಸಿ 20 ಡೆಮಾಕ್ರೆಟಿಕ್ ರಾಜ್ಯಗಳ ಅಟಾರ್ನಿ ಜನರಲ್‌ಗಳು (ಕ್ಯಾಲಿಫೋರ್ನಿಯಾ ನೇತೃತ್ವದಲ್ಲಿ) ನ್ಯಾಯಾಲಯದ ಮೊಕದ್ದಮೆ ಹೂಡಿದ್ದರು. ಈ ಜಂಟಿ ಅರ್ಜಿಯ ವಿಚಾರಣೆ ನಡೆಸಿದ ಫೆಡರಲ್ ನ್ಯಾಯಾಧೀಶ ಲಿಯೋ ಸೊರೊಕಿನ್ (Leo Sorokin) ಅವರು ಸೋಮವಾರ (ಜೂನ್ 8) 42 ಪುಟಗಳ ಸುದೀರ್ಘ ತೀರ್ಪನ್ನು ಪ್ರಕಟಿಸಿದ್ದಾರೆ:

ಟ್ರಂಪ್ ಆಡಳಿತವು ಇದನ್ನು ಕೇವಲ ಆಡಳಿತಾತ್ಮಕ ಶುಲ್ಕ ಅಥವಾ ದಂಡ ಎಂದು ಕರೆಯುತ್ತಿದ್ದರೂ, ಇದರ ಅನ್ವಯ ಹಾಗೂ ಸ್ವರೂಪವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗಿ ಒಂದು ಹೊಸ ‘ತೆರಿಗೆ’ಯಾಗಿದೆ. ಅಮೆರಿಕದ ಸಂವಿಧಾನದ ಪ್ರಕಾರ ದೇಶದ ನಾಗರಿಕರು ಅಥವಾ ಸಂಸ್ಥೆಗಳ ಮೇಲೆ ಹೊಸ ತೆರಿಗೆ ವಿಧಿಸುವ ಸಂಪೂರ್ಣ ಮತ್ತು ಅನನ್ಯ ಅಧಿಕಾರ ಇರುವುದು ಕೇವಲ ಅಮೆರಿಕದ ಸಂಸತ್ತಿಗೆ ಮಾತ್ರವೇ ಹೊರತು ದೇಶದ ಅಧ್ಯಕ್ಷರಿಗಲ್ಲ. ಆದ್ದರಿಂದ ಸಂಸತ್ತಿನ ಅನುಮೋದನೆ ಇಲ್ಲದೆ ಜಾರಿಗೆ ತರಲಾದ ಈ $1,00,000 ವೀಸಾ ನಿಯಮವು ಸಂಪೂರ್ಣವಾಗಿ ಅಸಂವಿಧಾನಿಕ ಮತ್ತು ಕಾನೂನುಬಾಹಿರ.

ಮತ್ತಷ್ಟು ಓದಿ: ಎಚ್1ಬಿ ವೀಸಾ ವ್ಯವಸ್ಥೆಯೇ ಒಂದು ‘ಮೋಸ’; ಹೊಸ ವರಾತ ತೆಗೆದ ಅಮೆರಿಕ; ಭಾರತೀಯರಿಗೆ ಹೊಸ ತಲೆನೋವು

ಹಳೇ ದರದಲ್ಲೇ ವೀಸಾ ಸಲ್ಲಿಕೆ; ತಾಂತ್ರಿಕ ವಲಯಕ್ಕೆ ಬಿಡುಗಡೆ ಟ್ರಂಪ್ ಆಡಳಿತವು ತಂದಿದ್ದ ಈ ಕಠಿಣ ನೀತಿಯಿಂದಾಗಿ ಅಮೆರಿಕದ ತಂತ್ರಜ್ಞಾನ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿತ್ತು. ಅಮೆರಿಕದ ವಲಸೆ ಇಲಾಖೆಯ (USCIS) ಇತ್ತೀಚಿನ ವರದಿಯ ಪ್ರಕಾರ, ಈ ಭಾರಿ ಶುಲ್ಕದ ಭೀತಿಯಿಂದಾಗಿ ಇಡೀ ದೇಶದಲ್ಲಿ ಕೇವಲ 85 ಕಂಪನಿಗಳು ಮಾತ್ರ ಹೊಸ ವೀಸಾ ಶುಲ್ಕ ಪಾವತಿಸಲು ಮುಂದೆ ಬಂದಿದ್ದವು.

ಭಾರತೀಯರಿಗೆ ಅತಿ ದೊಡ್ಡ ಲಾಭ: ಅಮೆರಿಕವು ಪ್ರತಿವರ್ಷ ಲಾಟರಿ ವ್ಯವಸ್ಥೆಯ ಮೂಲಕ ನೀಡುವ 65,000 ಸಾಮಾನ್ಯ ವೀಸಾ ಹಾಗೂ ಉನ್ನತ ಶಿಕ್ಷಣ ಪಡೆದವರಿಗಾಗಿ ನೀಡುವ 20,000 ಹೆಚ್ಚುವರಿ ವೀಸಾಗಳ ಪೈಕಿ ಸರಿಸುಮಾರು ಶೇಕಡಾ 70 ಕ್ಕಿಂತಲೂ ಹೆಚ್ಚಿನ ಪಾಲನ್ನು ಭಾರತೀಯ ಐಟಿ ತಜ್ಞರೇ ಪಡೆದುಕೊಳ್ಳುತ್ತಾರೆ. ಈ ಶುಲ್ಕ ರದ್ದತಿಯಿಂದಾಗಿ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಆರೋಗ್ಯ ಕ್ಷೇತ್ರದ ಸಿಬ್ಬಂದಿಮತ್ತು ಸಂಶೋಧಕರ ಅಮೆರಿಕದ ಕನಸು ಸುಲಭವಾಗಿ ಮುಂದುವರೆಯಲಿದೆ.

ಅಪೀಲು ಹೋಗಲು ಟ್ರಂಪ್ ಆಡಳಿತದ ಸಿದ್ಧತೆ ನ್ಯಾಯಾಲಯದ ಈ ಆದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕದ ಗೃಹ ಭದ್ರತಾ ಇಲಾಖೆ  ಮತ್ತು ವೈಟ್ ಹೌಸ್ ವಕ್ತಾರರು, ಇದು ನ್ಯಾಯಾಂಗದ ಅತಿಯಾದ ಹಸ್ತಕ್ಷೇಪವಾಗಿದೆ. ಅಮೆರಿಕದ ಸ್ಥಳೀಯ ಕಾರ್ಮಿಕರ ಹಿತರಕ್ಷಣೆ ಮತ್ತು ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡುವ ಉದ್ದೇಶದಿಂದ ಈ ಸುಧಾರಣೆ ತರಲಾಗಿತ್ತು. ನಾವು ಖಂಡಿತವಾಗಿಯೂ ಈ ತೀರ್ಪಿನ ವಿರುದ್ಧ ಮೇಲ್ಮನವಿ  ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಆದಾಗ್ಯೂ, ಇತ್ತೀಚೆಗಷ್ಟೇ ಅಮೆರಿಕದ ಸುಪ್ರೀಂ ಕೋರ್ಟ್ ಕೂಡ ಟ್ರಂಪ್ ಆಡಳಿತದ ತುರ್ತು ಸುಂಕದ ನೀತಿಗಳನ್ನು ಸಂಸತ್ತಿನ ಅನುಮೋದನೆ ಇಲ್ಲದ ಕಾರಣಕ್ಕೆ ರದ್ದುಗೊಳಿಸಿತ್ತು. ಅದೇ ತಾರ್ಕಿಕ ಆಧಾರದ ಮೇಲೆ ಈ ತೀರ್ಪು ಬಂದಿರುವುದರಿಂದ, ಸದ್ಯಕ್ಕಂತೂ ವೀಸಾ ನಿಯಮಗಳು ಹಳೆಯ ಸರಳ ಸ್ಥಿತಿಗೆ ಮರಳಿದ್ದು ಭಾರತೀಯ ಐಟಿ ವಲಯದಲ್ಲಿ ಹರ್ಷದ ವಾತಾವರಣ ಮೂಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:25 am, Tue, 9 June 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು
ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ?
ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ?