
ಟೆಹ್ರಾನ್, ಸೆಪ್ಟೆಂಬರ್ 06: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟ ಪೂರ್ಣ ಪ್ರಮಾಣದ ನೌಕಾ ಸಮರವಾಗಿ ಮಾರ್ಪಟ್ಟಿದೆ. ಇರಾನ್‌ಗೆ ಸೇರಿದ ಮೂರು ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಅಮೆರಿಕ ಹೊಡೆದುರುಳಿಸಿದ ಕೆಲವೇ ಗಂಟೆಗಳಲ್ಲಿ ಪ್ರತೀಕಾರ ತೀರಿಸಿಕೊಂಡಿರುವ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC), ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದೊಂದಿಗೆ ಸಂಪರ್ಕ ಹೊಂದಿದ್ದ ಆರು ವಾಣಿಜ್ಯ ಹಡಗುಗಳು ಹಾಗೂ ಯುಎಸ್ ವಿಮಾನವಾಹಕ ಯುದ್ಧನೌಕೆಯ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿದೆ.
ಇರಾನ್ ದಾಳಿಯ ವಿವರ
6 ಹಡಗುಗಳ ಮೇಲೆ ದಾಳಿ: ಹಾರ್ಮುಜ್ ಜಲಸಂಧಿಯ ‘ಅನಧಿಕೃತ ಮಾರ್ಗ’ದಲ್ಲಿ ಸಂಚರಿಸುತ್ತಿದ್ದ ಮೂರು ತೈಲ ಟ್ಯಾಂಕರ್‌ಗಳು ಹಾಗೂ ಬೇರೆಡೆ ಅಮೆರಿಕಕ್ಕೆ ಸೇರಿದ ಇತರ ಮೂರು ಹಡಗುಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಐಆರ್‌ಜಿಸಿ ಹೇಳಿದೆ.
ಅಮೆರಿಕ ಯುದ್ಧನೌಕೆಗಳ ಮೇಲೆ ಮಿಸೈಲ್ ಪ್ರಹಾರ: ಇರಾನ್ ಕರಾವಳಿಗೆ ನೌಕಾ ದಿಗ್ಬಂಧನ ವಿಧಿಸಲು ಯತ್ನಿಸುತ್ತಿದ್ದ ಅಮೆರಿಕದ ವಿಮಾನವಾಹಕ ನೌಕೆ ಮತ್ತು ವಿಧ್ವಂಸಕ ನೌಕೆಯ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಹಾನಿಗೊಳಗಾದ ಆ ನೌಕೆಗಳು ಯುದ್ಧ ವಲಯದಿಂದ ಪಲಾಯನ ಮಾಡಿವೆ ಎಂದು ಇರಾನ್ ಸರ್ಕಾರಿ ವಾಹಿನಿ ಐಆರ್‌ಐಬಿ ವರದಿ ಮಾಡಿದೆ.
ಕಠಿಣ ಎಚ್ಚರಿಕೆ ರವಾನೆ: ಕೊಲ್ಲಿ ಪ್ರದೇಶದಲ್ಲಿ ಸಂಚರಿಸುವ ಇತರ ದೇಶಗಳ ವಾಣಿಜ್ಯ ಹಡಗುಗಳು ಅಮೆರಿಕದ ಬೆಂಬಲಕ್ಕೆ ನಿಲ್ಲದೆ, ಇರಾನ್ ಸೂಚಿಸಿದ ಮಾರ್ಗಗಳಲ್ಲೇ ಸಾಗಬೇಕು, ಇಲ್ಲದಿದ್ದರೆ ಅಂತಹ ಹಡಗುಗಳನ್ನೂ ಗುರಿಯಾಗಿಸಲಾಗುವುದು ಎಂದು ಐಆರ್‌ಜಿಸಿ ಎಚ್ಚರಿಸಿದೆ.
ಮತ್ತಷ್ಟು ಓದಿ: ಇರಾನ್-ಅಮೆರಿಕ ನೀ ಕೊಡೆ ನಾ ಬಿಡೆ ಜಗ್ಗಾಟ; ಹಾರ್ಮುಜ್ ಜಲಸಂಧಿ ಅಮೆರಿಕದ ಭೂಭಾಗ ಎಂದು ಟ್ರಂಪ್ ಘೋಷಣೆ
ಮೂರು ಇರಾನಿ ಟ್ಯಾಂಕರ್ ಧ್ವಂಸ: ಅಮೆರಿಕ ಸೆಂಟ್ರಲ್ ಕಮಾಂಡ್ ಖಾರ್ಗ್ ದ್ವೀಪ ಹಾಗೂ ಒಮಾನ್ ಕೊಲ್ಲಿ ಬಳಿ ಕಾರ್ಯಾಚರಣೆ ನಡೆಸಿ ಇರಾನ್‌ನ ಮೂರು ತೈಲ ಟ್ಯಾಂಕರ್‌ಗಳನ್ನು ನಿಷ್ಕ್ರಿಯಗೊಳಿಸಿ, ಸಂಪೂರ್ಣವಾಗಿ ನಾಶಪಡಿಸಿರುವುದಾಗಿ ತಿಳಿಸಿದೆ.
ಪೀಟ್ ಹೆಗ್ಸೆತ್ ನೇರ ಎಚ್ಚರಿಕೆ: ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಖಡಕ್ ಎಚ್ಚರಿಕೆ ನೀಡಿದ್ದು, “ಲೆಕ್ಕಾಚಾರ ತೀರಾ ಸರಳ, ಇರಾನ್ ಅಮೆರಿಕ ನೌಕಾಪಡೆಯ ಮೇಲೆ ಗುಂಡು ಹಾರಿಸಿದರೆ, ನಾವು ಅವರ ಎಲ್ಲಾ ತೈಲ ಟ್ಯಾಂಕರ್‌ಗಳನ್ನು ಮುಳುಗಿಸುತ್ತೇವೆ” ಎಂದು ಗುಡುಗಿದ್ದಾರೆ.
ಪೋಸ್ಟ್
It’s simple: if Iran shoots at U.S. ships, we will destroy (and sink) their oil tankers. All they have to do is not shoot at @USNavy.
Iran’s oil tanker fleet is defenseless — Iran has no navy or air force. Our planes, ships & subs can strike them all, in @CENTCOM & @USPACOM. https://t.co/lr5TaxloBw
— Pete Hegseth (@PeteHegseth) September 5, 2026
ಆರ್ಥಿಕ ಹೊಡೆತದ ಎಚ್ಚರಿಕೆ: ಅಮೆರಿಕ ನೌಕಾಪಡೆಗೆ ಅಡ್ಡಿಪಡಿಸಿದರೆ ಇರಾನ್ ಕಲ್ಪನೆಗೂ ಮೀರಿದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಸೆಂಟ್‌ಕಾಮ್ ಕಮಾಂಡರ್ ಬ್ರಾಡ್ ಕೂಪರ್ ಹೇಳಿದ್ದಾರೆ.
ವಿಶ್ವದ ತೈಲ ಜೀವನಾಡಿ ಹಾರ್ಮುಜ್: ಜಾಗತಿಕವಾಗಿ ಸಮುದ್ರ ಮಾರ್ಗದ ಮೂಲಕ ಸಾಗಣೆಯಾಗುವ ಒಟ್ಟು ಕಚ್ಚಾ ತೈಲದ ಸುಮಾರು ಶೇ.20ರಷ್ಟು ಕೇವಲ 39 ಕಿ.ಮೀ ಅಗಲವಿರುವ ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ. ಇಲ್ಲಿ ಯುದ್ಧ ತೀವ್ರಗೊಂಡರೆ ಜಾಗತಿಕ ತೈಲ ಬೆಲೆ ಗಗನಕ್ಕೇರಲಿದೆ.
ಕದನ ವಿರಾಮ ಸಂಪೂರ್ಣ ಅಂತ್ಯ: ಹಿಂದಿನ ಶಾಂತಿ ಒಪ್ಪಂದಗಳು ಮುರಿದುಬಿದ್ದ ನಂತರ, ಸಂಘರ್ಷವು ಕೇವಲ ಸೇನಾ ನೆಲೆಗಳಿಗೆ ಸೀಮಿತವಾಗದೆ, ವಾಣಿಜ್ಯ ತೈಲ ಹಡಗುಗಳು ಮತ್ತು ಆರ್ಥಿಕ ಮಾರ್ಗಗಳನ್ನು ನಾಶಮಾಡುವ ಆರ್ಥಿಕ ಸಮರವಾಗಿ ರೂಪಾಂತರಗೊಂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ