Updated on:Jul 03, 2021 | 9:44 PM
Hottest Places on Earth these places recorded highest Temperature in World Details here
ಜುಲೈ 1ರಂದು ದೆಹಲಿಯಲ್ಲಿ ಅತಿ ಹೆಚ್ಚು ಉಷ್ಣಾಂಶ, ಅಂದರೆ 43.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ಉಷ್ಣಾಂಶ ಜುಲೈ 2012ರ ಬಳಿಕ ಕಂಡುಬಂದ ಅತಿ ಹೆಚ್ಚು ತಾಪಮಾನ ಆಗಿದೆ. ವಿಶ್ವದ ಅತಿ ಹೆಚ್ಚು ತಾಪಮಾನ ದಾಖಲಾದ ಪ್ರದೇಶದ ಪೈಕಿ ಹೇಳುವುದಿದ್ದರೆ, ಪಾಕಿಸ್ತಾನದ ಜಕೊಬಬಾದ್ನಲ್ಲಿ ಜುಲೈ 1ರಂದು 52 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಉಷ್ಣ ಗಾಳಿ ಕಾರಣದಿಂದ ತಾಪಮಾನ ಈ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಕುವೈಟ್ನ ನುವೈಸಿಬ್ ವಾನ್ಕೊವರ್, ಅಮೆರಿಕಾದ ಪೋರ್ಟ್ಲ್ಯಾಂಡ್, ಪಾಕಿಸ್ತಾನದ ಜಾಕೊಬಬಾದ್, ಭಾರತದ ದೆಹಲಿ, ಇರಾನ್ನ ಒಮಿಡ್ಯೆಹ್ ಹಾಗೂ ಮಧ್ಯಪೂರ್ವ ದೇಶಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದೆ.
ಕೆನಡಾದ ವಾನ್ಕೊವರ್ನಿಂದ ಸುಮಾರು 200 ಕಿಲೋ ಮೀಟರ್ ದೂರದಲ್ಲಿ ಇರುವ ಸಣ್ಣ ನಗರ ಲಿಟ್ಟನ್ನಲ್ಲಿ ಜೂನ್ 29ರಂದು 49.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಕೆನಡಾದಲ್ಲಿ ದಾಖಲಾಗಿರುವ ಅತಿ ಹೆಚ್ಚು ತಾಪಮಾನದ ಪ್ರದೇಶವಾಗಿದೆ. ಬ್ರಿಟೀಷ್ ಕೊಲಂಬಿಯಾದಲ್ಲಿ ಶಾಲೆ, ಕಾಲೇಜುಗಳು ತಾಪಮಾನದ ಕಾರಣದಿಂದ ಮುಚ್ಚಲ್ಪಟ್ಟಿದೆ.
ಯುಎಸ್ನ ಪೋರ್ಟ್ಲ್ಯಾಂಡ್ ನಗರದಲ್ಲಿ 46.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೊದಲು 1965ರಲ್ಲಿ 41.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಜೂನ್ 22ರಂದು ಇಡೀ ವಿಶ್ವದಅ ತಿ ಹೆಚ್ಚು ತಾಪಮಾನ, ಅಂದರೆ 53.2 ಡಿಗ್ರಿ ಸೆಲ್ಸಿಯಸ್ ಕುವೈಟ್ನ ನುವೈಸಿಬ್ ಎಂಬಲ್ಲಿ ದಾಖಲಾಗಿತ್ತು.
ಇರಾಕ್ನ ಒಮಿಡಿಯೆಹ್ ಎಂಬಲ್ಲಿ ಜುಲೈ 1ರಂದು 51.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿತ್ತು. ಇರಾನ್ನಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನ 51 ಡಿಗ್ರಿ ಸೆಲ್ಸಿಯಸ್ ಆಗಿದೆ. ಯುಎಇನ ಹಲವು ಕಡೆಗಳಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗಿದೆ.
ಇದಕ್ಕೂ ಮೊದಲು ಕೆಲವೆಡೆ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿರುವುದು ಇದೆ. ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯಲ್ಲಿ ಈ ಮೊದಲು 53.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅದೇ ವೇಳೆ, ಆಫ್ರಿಕಾದ ತುನಿಸಿಯಾದಲ್ಲಿ 1913ರಲ್ಲಿ 55 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
Published On - 9:36 pm, Sat, 3 July 21