ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮುಖ್ಯಸ್ಥರನ್ನು ಹತ್ಯೆ ಮಾಡಲು ಇಸ್ರೇಲ್ ಯಾವ ರೀತಿ ಕಾರ್ಯಾಚರಣೆ ನಡೆಸಿತು?

ಶುಕ್ರವಾರ ಇಸ್ರೇಲ್ ಲೆಬನಾನ್‌ನ ಬೈರುತ್‌ನಲ್ಲಿರುವ ಹಿಜ್ಬುಲ್ಲಾದ ಪ್ರಧಾನ ಕಚೇರಿಯ ಮೇಲೆ ಗುಂಪಿನ ನಾಯಕ ಹಸನ್ ನಸ್ರಲ್ಲಾ ಅವರನ್ನು ಗುರಿಯಾಗಿಸಿಕೊಂಡು ಪ್ರಮುಖ ಮಿಲಿಟರಿ ದಾಳಿ ಪ್ರಾರಂಭಿಸಿತು, ವೈಮಾನಿಕ ದಾಳಿಗಳು ದಕ್ಷಿಣ ಉಪನಗರಗಳಲ್ಲಿ ಬಹುಮಹಡಿ ಕಟ್ಟಡಗಳನ್ನು ನಾಶಪಡಿಸಿದವು, ಈ ಪ್ರದೇಶವು ವರ್ಷಗಳಿಂದ ಹಿಜ್ಬುಲ್ಲಾದ ಭದ್ರಕೋಟೆಯಾಗಿದೆ.

ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮುಖ್ಯಸ್ಥರನ್ನು ಹತ್ಯೆ ಮಾಡಲು ಇಸ್ರೇಲ್  ಯಾವ ರೀತಿ ಕಾರ್ಯಾಚರಣೆ ನಡೆಸಿತು?
ನ್ಯೂ ಆರ್ಡರ್ ವಿಡಿಯೊ
Follow us
|

Updated on: Sep 28, 2024 | 5:02 PM

ಬೈರುತ್ ಸೆಪ್ಟೆಂಬರ್ 28: ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಆಪರೇಷನ್ “ನ್ಯೂ ಆರ್ಡರ್” ಎಂದು ಕರೆಯುವ ಕಾರ್ಯಾಚರಣೆ ಮೂಲಕ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಶನಿವಾರ ಹೇಳಿದೆ, ಇದು ತಿಂಗಳ ಹೋರಾಟದ ನಂತರ ಲೆಬನಾನಿನ ಉಗ್ರಗಾಮಿ ಗುಂಪಿಗೆ ಅತ್ಯಂತ ಮಹತ್ವದ ಹೊಡೆತವನ್ನು ನೀಡಿದೆ. ಅದಾಗ್ಯೂ ಹಿಜ್ಬುಲ್ಲಾ ಸಾವಿನ ಸುದ್ದಿಯನ್ನು ದೃಢೀಕರಿಸಿಲ್ಲ

ಇಸ್ರೇಲ್ ಆಪರೇಷನ್ ‘ನ್ಯೂ ಆರ್ಡರ್’ ಅನ್ನು ಕಾರ್ಯಗತಗೊಳಿಸಿದ್ದು ಹೇಗೆ?

ಶುಕ್ರವಾರ ಇಸ್ರೇಲ್ ಲೆಬನಾನ್‌ನ ಬೈರುತ್‌ನಲ್ಲಿರುವ ಹಿಜ್ಬುಲ್ಲಾದ ಪ್ರಧಾನ ಕಚೇರಿಯ ಮೇಲೆ ಗುಂಪಿನ ನಾಯಕ ಹಸನ್ ನಸ್ರಲ್ಲಾ ಅವರನ್ನು ಗುರಿಯಾಗಿಸಿಕೊಂಡು ಪ್ರಮುಖ ಮಿಲಿಟರಿ ದಾಳಿ ಪ್ರಾರಂಭಿಸಿತು, ವೈಮಾನಿಕ ದಾಳಿಗಳು ದಕ್ಷಿಣ ಉಪನಗರಗಳಲ್ಲಿ ಬಹುಮಹಡಿ ಕಟ್ಟಡಗಳನ್ನು ನಾಶಪಡಿಸಿದವು, ಈ ಪ್ರದೇಶವು ವರ್ಷಗಳಿಂದ ಹಿಜ್ಬುಲ್ಲಾದ ಭದ್ರಕೋಟೆಯಾಗಿದೆ.

ಕಾರ್ಯಾಚರಣೆಯು ಎರಡು ಸುತ್ತಿನ ವೈಮಾನಿಕ ದಾಳಿಯನ್ನು ಒಳಗೊಂಡಿತ್ತು, ಇದು ಬೃಹತ್ ಸ್ಫೋಟಗಳು ಮತ್ತು ಹರೆಟ್ ಹ್ರೀಕ್ ವಸತಿ ಜಿಲ್ಲೆಯಲ್ಲಿ ವ್ಯಾಪಕ ಭೀತಿಯನ್ನು ಉಂಟುಮಾಡಿತು. ವಸತಿ ಕಟ್ಟಡಗಳ ಕೆಳಗೆ ನೆಲೆಗೊಂಡಿರುವ ಹಿಜ್ಬುಲ್ಲಾದ ಮುಖ್ಯ ಭೂಗತ ಪ್ರಧಾನ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ದೃಢಪಡಿಸಿದೆ.

ಕಾರ್ಯಾಚರಣೆಯ ವಿಡಿಯೊ

ಗುಪ್ತಚರ ವಿಭಾಗ ಮತ್ತು ರಕ್ಷಣಾ ವ್ಯವಸ್ಥೆಯ ನಿಖರವಾದ ಗುಪ್ತಚರ ಮಾರ್ಗದರ್ಶನದಲ್ಲಿ ಇಸ್ರೇಲ್ ವಾಯುಪಡೆಯ ಫೈಟರ್ ಜೆಟ್‌ಗಳು, ಬೈರುತ್‌ನ ದಹಾ ಪ್ರದೇಶದ ವಸತಿ ಕಟ್ಟಡದ ಅಡಿಯಲ್ಲಿ ಭೂಗತವಾಗಿರುವ ಹಿಜ್ಬುಲ್ಲಾದ ಕೇಂದ್ರ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿತು, ”ಎಂದು ಇಸ್ರೇಲ್ ಹೇಳಿದೆ.

ಹೆಜ್ಬುಲ್ಲಾದ ಉನ್ನತ ಅಧಿಕಾರಿಗಳು ಪ್ರಧಾನ ಕಚೇರಿಯಲ್ಲಿದ್ದಾಗ ಮತ್ತು ಇಸ್ರೇಲ್ ನಾಗರಿಕರ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ತೊಡಗಿರುವಾಗ ದಾಳಿ ನಡೆಸಲಾಯಿತುಎಂದು ಅದು ಹೇಳಿಕೊಂಡಿದೆ.

ಇದನ್ನೂ ಓದಿ: Hassan Nasrallah: ಲೆಬನಾನ್: ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆ

ಕಟ್ಟಡಗಳು ಕುಸಿದಿರುವುದನ್ನು ವಿಡಿಯೊ ದೃಶ್ಯಗಳು ತೋರಿಸಿವೆ. ಅನೇಕ ನಿವಾಸಿಗಳು ತಮ್ಮ ವಸ್ತುಗಳನ್ನು ಹೊತ್ತುಕೊಂಡು ಆ ಪ್ರದೇಶದಿಂದ ಪಲಾಯನ ಮಾಡುತ್ತಿರುವುದು ಕಂಡುಬಂದಿದೆ. ಬದುಕುಳಿದವರ ಹುಡುಕಾಟದಲ್ಲಿ ರಕ್ಷಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಇಸ್ರೇಲ್ ನಿಯಂತ್ರಣ ಕೊಠಡಿಯಿಂದ ದೃಶ್ಯಗಳನ್ನು ಬಿಡುಗಡೆ ಮಾಡಿತು, ಸಾಮಾನ್ಯ ಸಿಬ್ಬಂದಿ ಮುಖ್ಯಸ್ಥರು ಹಸನ್ ನಸ್ರಲ್ಲಾ ಅವರನ್ನು ಗುರಿಯಾಗಿಸಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು ಎಂದು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ