ಕಂಪಾಟಿಮರ್ ಶಂಕರಿಯಾ ಒಂದು ವರ್ಷದಲ್ಲಿ 70 ಕೊಲೆಗಳನ್ನು ಮಾಡಿದರೂ ಅವು ಪತ್ರಿಕೆಗಳಲ್ಲಿ ವರದಿಯಾಗದೆ ಕತ್ತಲಲ್ಲಿ ಉಳಿದುಬಿಟ್ಟಿದ್ದವು!

ಮೇ 16, 1979 ರಂದು ಗಲ್ಲಿಗೇರುವ ಮುನ್ನ ಅವನಾಡಿದ ಕೊನೆ ಮಾತು ಏನು ಗೊತ್ತಾ? ‘ನಾನು ಕೊಲೆಗಳನ್ನು ಮಾಡಿದ್ದು ಹುಚ್ಚುತನ, ಯಾರೂ ನನ್ನಂತಾಗಬಾರದು.’

ಕಂಪಾಟಿಮರ್ ಶಂಕರಿಯಾ ಒಂದು ವರ್ಷದಲ್ಲಿ 70 ಕೊಲೆಗಳನ್ನು ಮಾಡಿದರೂ ಅವು ಪತ್ರಿಕೆಗಳಲ್ಲಿ ವರದಿಯಾಗದೆ ಕತ್ತಲಲ್ಲಿ ಉಳಿದುಬಿಟ್ಟಿದ್ದವು!
ಕಂಪಾಟಿಮರ್ ಶಂಕರಿಯಾ, ಸರಣಿ ಹಂತಕ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 04, 2023 | 7:58 AM

ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ಭಾರತೀಯ ಸರಣಿ ಹಂತಕನ (serial killer) ಕತೆ ಹೇಳುತ್ತಿದ್ದೇವೆ. ನಮ್ಮ ದೇಶ ಅನೇಕ ಮಹಾಪುರುಷರಿಗೆ ಜನ್ಮ ನೀಡಿದೆ, ಹಾಗೆಯೇ ಕೆಲ ಪಾತಕಿಗಳು (criminals) ನಮ್ಮ ದೇಶದಲ್ಲಿ ಹುಟ್ಟಿದ್ದಾರೆ ಅನ್ನೋದು ಅಷ್ಟೇ ಸತ್ಯ. ಈ ಪಾತಕಿಗಳಲ್ಲಿ ನರಹಂತಕರು, ಭಯೋತ್ಪಾದಕರು, ಆತ್ಯಾಚಾರಿಗಳು, ಶಿಶುಕಾಮಿಗಳು, ಸರಣಿ ಹಂತಕರು ಸಹ ಸೇರಿದ್ದಾರೆ. ಪಾತಕಿಗಳಲ್ಲಿ ಕೆಲವರು ನಮ್ಮ ನೆರರೆಹೊರೆಯಾವರಾಗಿದ್ದರೆ ಆಶ್ಚರ್ಯಪಡಬೇಕಿಲ್ಲ. ಮೇಲೆ ಹೇಳಿದ ಹಾಗೆ ಇವತ್ತು ಕುಖ್ಯಾತ ಸರಣಿ ಹಂತಕ ಕಂಪಾಟಿಮರ್ ಶಂಕರಿಯಾನ (Kampatimar Shankariya) ಕತೆ ಹೇಳುತ್ತೇವೆ. ಅಧಿಕೃತ ದಾಖಲೆಗಳ ಪ್ರಕಾರ ಅವನು ಮಾಡಿದ ಕೊಲೆಗಳ ಸಂಖ್ಯೆ 66. ಆದರೆ ಅವನೇ ಹೇಳಿಕೊಂಡ ಹಾಗೆ 72 ಜನರನ್ನಿ ಅವನು ಬಲಿಪಡೆದಿದ್ದ.

ಹಾಗೆ ನೋಡಿದರೆ ಶಂಕರಿಯಾನ ಬಗ್ಗೆ ಅಂದರೆ ಅವನ ಕೌಟುಂಬಿಕ ಹಿನ್ನೆಲೆ ಬಗ್ಗೆ ಹೆಚ್ಚು ಮಾಹಿತಿಯೇ ಇಲ್ಲ. ಮಾಧ್ಯಮಗಳು ಅವನ ಕ್ರಿಮಿನಲ್ ಇತಿಹಾಸವನ್ನು ವರದಿ ಮಾಡಿಲ್ಲ. ಲಭ್ಯವಿರುವ ಅಲ್ಪಸ್ವಲ್ಪ ಮಾಹಿತಿಯ ಪ್ರಕಾರ ಶಂಕರಿಯಾನ ಹೆಸರು ಕೇಳಿಸಲಾರಂಭಿಸಿದ್ದು 1952, ರಾಜಸ್ತಾನದಲ್ಲಿ. ನಿಮಗೆ ನೆನಪಿರಬಹುದು, ಭಾರತ ರತ್ನ ಮದರ್ ತೆರೆಸಾ ಅದೇ ವರ್ಷ ಭಾರತದಲ್ಲಿ ‘ಹೋಮ್ ಫಾರ್ ಡೈಯಿಂಗ್’ ಹೆಸರಲ್ಲಿ ಸಂಸ್ಥೆಯೊಂದನ್ನು ಆರಂಭಿಸಿದರು. ಎಂಥ ಭಯಾನಕ ಕಾಕತಾಳೀಯ ಅಲ್ಲವೇ?

1973 ರಲ್ಲಿ ಅವನು ಕೊಲೆ ಮಾಡಲಾರಂಭಿಸಿದ!

1973 ರವರೆಗೆ ಅವನೇನು ಮಾಡಿದ ಅಂತ ಯಾರಿಗೂ ಗೊತ್ತಿಲ್ಲ. ಆದರೆ ಅದೇ ವರ್ಷ ರಾಜಸ್ತಾನ, ಪಂಜಾಬ್, ಹರಿಯಾಣ ಮೊದಲಾದ ರಾಜ್ಯಗಳಲ್ಲಿ ಹಲವಾರು ಜನರ ಮೃತದೇಹಗಳು ಪತ್ತೆಯಾದವು. ಗಮನಿಸಬೇಕಾದ ಸಂಗತಿಯೇನೆಂದರೆ, ಅವರೆಲ್ಲರ ಕುತ್ತಿಗೆ ಮುರಿದಿತ್ತು. 70 ದಶಕದ ಬಾಲಿವುಡ್ ಸಿನಿಮಾಗಳ ವಿಲನ್ ಗಳ ಹಾಗೆ ಶಂಕರಿಯಾ ತನ್ನ ಬೇಟೆಗಳ ಕಿವಿ ಕೆಳಭಾಗದಲ್ಲಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡುತ್ತಿದ್ದ.

ಇದನ್ನೂ ಓದಿ:  Sports Calendar 2023: ಕ್ರಿಕೆಟ್ ಹೊರತುಪಡಿಸಿ ಈ ವರ್ಷ ನಡೆಯಲ್ಲಿರುವ ಪ್ರಮುಖ ಕ್ರೀಡಾಕೂಟ​ಗಳಿವು

ಮೂಲವೊಂದರ ಪ್ರಕಾರ ಅವನು ರಾತ್ರಿ ಸಮಯ ಜನನಿಬಿಡವಿರದ ಮತ್ತು ಕತ್ತಲು ಆವರಿಸಿದ ಓಣಿಗಳಲ್ಲಿ ಮೈ ತುಂಬಾ ಬ್ಲ್ಯಾಂಕೆಟ್ ಹೊದ್ದು ತನ್ನ ಬೇಟೆಗಾಗಿ ಹೊಂಚು ಹಾಕುತ್ತಾ ಕುಳಿತಿರುತ್ತಿದ್ದ. ತಮ್ಮ ಪಾಡಿಗೆ ತಾವು ನಡೆದು ಹೋಗುತ್ತಿದ್ದ ಪುರುಷ/ಮಹಿಳೆ ಮೇಲೆ ಎರಗಿ ಕಿವಿಯ ಅವರ ಕಿವಿ ಕೆಳಭಾಗದಲ್ಲಿ ಜೋರಾಗಿ ಸುತ್ತಿಗೆಯಿಂದ ಹೊಡೆದು ಕೊಲ್ಲುತ್ತಿದ್ದ. ಶಂಕರಿಯಾನ ಕೊಲೆ ಸರಣಿ 1973 ರಿಂದ 1974 ರವರೆಗೆ ಅವ್ಯಾಹತವಾಗಿ ನಡೆಯಿತು. ಆದರೆ ಅಂತಿಮವಾಗಿ, 1974 ರಲ್ಲಿ ಅವನ ಸೆರೆಹಿಡಿದು ಗಲ್ಲಿಗೇರಿಸಲಾಯಿತು.

ಅವನ್ಯಾಕೆ ಜನರನ್ನು ಕೊಲ್ಲುತ್ತಿದ್ದ?

ಜನರನ್ನು ಕೊಲ್ಲುವದರಿಂದ ತನಗೆ ವಿಪರೀತ ಖುಷಿಯಾಗುತಿತ್ತು ಅಂತ ಅವನು ಹೇಳಿದ್ದ! ಕೊಲ್ಲುವುದು ಅವನ ಹವ್ಯಾಸವಾಗಿತ್ತು.

ಮೇ 16, 1979 ರಂದು ಗಲ್ಲಿಗೇರುವ ಮುನ್ನ ಅವನಾಡಿದ ಕೊನೆ ಮಾತು ಏನು ಗೊತ್ತಾ? ‘ನಾನು ಕೊಲೆಗಳನ್ನು ಮಾಡಿದ್ದು ಹುಚ್ಚುತನ, ಯಾರೂ ನನ್ನಂತಾಗಬಾರದು.’

ಇದನ್ನೂಓದಿ:  ಸೆನ್ಸೇಷನಲ್ ಕ್ರೈಮ್ ಕತೆಗಳು: ಮ್ಯಾನ್ಷನ್ ಫ್ಯಾಮಿಲಿ ಹಂತಕರಿಂದ ಟಿವಿ ನಟಿ ಶಾರೋನ್ ಟೇಟ್ ಭೀಕರವಾಗಿ ಹತ್ಯೆಯಾದಾಗ 8-ತಿಂಗಳು ಗರ್ಭಿಣಿಯಾಗಿದ್ದರು!

ನಮ್ಮ ಆಧುನಿಕ ರಾಜಕಾರಣಿಗಳಿಗೂ ಶಂಕರಿಯಾನ ಹಾಗೆ ಪಾಪಪ್ರಜ್ಞೆ ಕಾಡಿದ್ದರೆ ಚೆನ್ನಾಗಿರುತಿತ್ತು ಅಂತ ನಿಮಗನಿಸುತ್ತಿದೆಯೇ? ಶಂಕರಿಯಾಗಂತೂ ಆತ್ಮವೇ ಇರಲಿಲ್ಲ ಬಿಡಿ.

ವರದಿಯಾಗೇ ಇಲ್ಲ!

ಶಂಕರಿಯಾ ಕೂಡ ನಮ್ಮಂತೆ ರಾಷ್ಟ್ರಗೀತೆ ಹಾಡಿರಬಹುದು, ಆದರೆ ನಮ್ಮಂತೆ ಭಾರತೀಯನಾಗಿದ್ದ ಅವನ ಮತ್ತು ನಡುವೆ ಅದೆಷ್ಟು ವ್ಯತ್ಯಾಸಗಳು? ಅವನ ಪಾತಕ ಲೋಕದ ಬಗ್ಗೆ ವರದಿಯಾಗದಿರುವುದು ನಿಜಕ್ಕೂ ದುರದೃಷ್ಟಕರ. ಜೈಪುರ ನಗರದಲ್ಲಿ ಅವನು ಮಾಡಿದ ಕೊಲೆಗಳ ಬಗ್ಗೆ ವರದಿಗಳು ಪ್ರಕಟವಾಗಿದ್ದರೆ ಬೇರೆ ಪ್ರದೇಶಗಳಲ್ಲಿ ಅವನಿಂದ ಕೊಲೆಗಳಾಗವುದನ್ನು ತಪ್ಪಿಸಬಹುದಿತ್ತು.

ಈ ಹಿನ್ನೆಲೆಯಿಂದ ನೋಡಿದರೆ, ನಮ್ಮ ದೇಶದ ಪಾತಕ ಇತಿಹಾಸ ಕುರಿತು ನಮ್ಮಲ್ಲಿ ಸರಿಯಾದ ಮಾಹಿತಿ ಇಲ್ಲ. ವರದಿಯಾಗದ ಕಾರಣ ಅದೆಷ್ಟು ಅಮಾಯಕರ ಕೊಲೆಗಳು ಬೆಳಕಿಗೆ ಬಾರದೆ ಹೋದವೋ?

ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ