ನ್ಯೂಯಾರ್ಕ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಂದ ಅಸ್ಥಿರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಸೋಮವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತುಸಭೆ ನಡೆಯಿತು. ವಿಶ್ವಸಂಸ್ಥೆಯಲ್ಲಿರುವ ಭಾರತದ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಭಯೋತ್ಪಾದನೆ ಮತ್ತು ಅದರ ಯಾವುದೇ ಮುಖದ ಬಗ್ಗೆ ಕಿಂಚಿತ್ತೂ ಸಹನೆ ಇರಿಸಿಕೊಳ್ಳುವುದಿಲ್ಲ ಎನ್ನುವುದು ನಿಜವೇ ಆಗಿದ್ದರೆ ಅಫ್ಘಾನಿಸ್ತಾನ ಭೂಪ್ರದೇಶವನ್ನು ಯಾವುದೇ ಭಯೋತ್ಪಾದಕ ಸಂಘಟನೆಯು ಬಳಸಿಕೊಳ್ಳಲು ಅವಕಾಶ ನೀಡಬಾರದು. ಇತರ ಯಾವುದೇ ದೇಶಗಳ ವಿರುದ್ಧ ಉಗ್ರಗಾಮಿ ಕಾರ್ಯಾಚರಣೆ ನಡೆಸಲು ಅಫ್ಘನ್ ನೆಲವನ್ನು ಬಳಸಿಕೊಳ್ಳಲು ಅವಕಾಶ ಕೊಡಬಾರದು. ಆಗ ಮಾತ್ರ ಅಫ್ಘಾನಿಸ್ತಾನದ ನೆರೆಹೊರೆಯ ದೇಶಗಳು ಸುರಕ್ಷಿತ ಭಾವನೆ ಹೊಂದುತ್ತವೆ ಎಂದು ತಿರುಮೂರ್ತಿ ಹೇಳಿದರು.
ಕಾಬೂಲ್ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಷಾದಕರ ದೃಶ್ಯಗಳು ಕಂಡುಬಂದವು. ಜನರಲ್ಲಿ ಭೀತಿ ಆವರಿಸಿಕೊಂಡಿದೆ. ಮಹಿಳೆಯರು ಮತ್ತು ಮಕ್ಕಳು ಹೆದರಿದ್ದಾರೆ. ಕಾಬೂಲ್ನ ವಿಮಾನ ನಿಲ್ದಾಣವೂ ಸೇರಿದಂತೆ ನಗರದ ಹಲವೆಡೆ ಗುಂಡು ಹಾರಾಟ ವರದಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಫ್ಘಾನಿಸ್ತಾನದ ನೆರೆಯ ದೇಶವಾಗಿ, ಅಲ್ಲಿನ ಜನರ ಗೆಳೆಯನಾಗಿ ಭಾರತಕ್ಕೆ ಅಲ್ಲಿನ ಪರಿಸ್ಥಿತಿ ಆತಂಕ ಉಂಟು ಮಾಡಿದೆ. ಅಫ್ಘಾನಿಸ್ತಾನದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸದಾ ಭಯದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನುಡಿದರು.
ಅಫ್ಘಾನಿಸ್ತಾನವು ಎಂದಿಗೂ ಉಗ್ರರಿಗೆ ವೇದಿಕೆಯಾಗಬಾರದು. ಉಗ್ರಗಾಮಿ ಚಟುವಟಿಕೆಗಳಿಗೆ ಸುರಕ್ಷಿತ ತಾಣ ಎನಿಸಿಕೊಳ್ಳಬಾರದು. ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನವು ಭಯೋತ್ಪಾದಕರ ನೆಲೆವೀಡಾಗುವ ಅಪಾಯವಿದೆ. ಇದರ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಒಂದಾಗಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಹೇಳಿದರು.
#WATCH | As a neighbour of #Afghanistan, as a friend of its people, the current situation prevailing in the country is of great concern to us in India. Afghan men, women, & children are living under a constant state of fear: India’s Ambassador to UN, TS Tirumurti at UNSC meeting pic.twitter.com/jl2MJeQDXm
— ANI (@ANI) August 16, 2021
(India Expresses its Concern over Horrifying Situation of Afghanistan)
ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ನೆರವು: ಸರ್ಕಾರದ ಭರವಸೆ
ಇದನ್ನೂ ಓದಿ: Impact on India: ತಾಲಿಬಾನ್ ವಶಕ್ಕೆ ಅಫ್ಘಾನಿಸ್ತಾನ, ಭಾರತದ ಭದ್ರತೆಗೆ ಹಲವು ಆತಂಕ