ಯುಎಸ್ ನಲ್ಲಿ ನ್ಯಾಯಾಧೀಶರ ಹುದ್ದೆಯನ್ನಲಂಕರಿಸಿದ ಮೊದಲ ಸಿಖ್ ಮಹಿಳೆಯೆಂಬ ಖ್ಯಾತಿಗೆ ಪಾತ್ರರಾದ ಮನ್ಪ್ರೀತ್ ಮೊನಿಕಾ ಸಿಂಗ್

‘ನಾನು ಹೆಚ್-ಟೌನ್ ಅನ್ನು (ಹೌಸ್ಟನ್ ನಗರದ ಉಪನಾಮ) ಪ್ರತಿನಿಧಿಸುವುದರಿಂದ ನನಗಿದು ಅತೀವ ಗೌರವ ಮತ್ತು ಅಭಿಮಾನದ ಸಂಗತಿಯಾಗಿದೆ. ನಾನೀಗ ಸಂತೋಷದ ಅಲೆಯಲ್ಲಿ ತೇಲುತ್ತಿದ್ದೇನೆ,’ ಎಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊನಿಕಾ ಹೇಳಿದರು.

ಯುಎಸ್ ನಲ್ಲಿ ನ್ಯಾಯಾಧೀಶರ ಹುದ್ದೆಯನ್ನಲಂಕರಿಸಿದ ಮೊದಲ ಸಿಖ್ ಮಹಿಳೆಯೆಂಬ ಖ್ಯಾತಿಗೆ ಪಾತ್ರರಾದ ಮನ್ಪ್ರೀತ್ ಮೊನಿಕಾ ಸಿಂಗ್
ಮನ್ಪ್ರೀತ್ ಮೊನಿಕಾ ಸಿಂಗ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 10, 2023 | 2:35 PM

ಭಾರತೀಯ ಮೂಲದ ಮನ್ಪ್ರೀತ್ ಮೊನಿಕಾ ಸಿಂಗ್ (Manpreet Monica Singh) ಅಮೆರಿಕದ ಹ್ಯಾರಿಸ್ ಕೌಂಟಿಯ (Harris County) ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಹುದ್ದೆಯನ್ನು ಅಲಂಕರಿಸಿದ ದೇಶದ ಮೊದಲ ಸಿಖ್ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೊನಿಕಾ ಅವರು ಹೌಸ್ಟನ್ ನಲ್ಲಿ (Houston) ಹುಟ್ಟಿ ಬೆಳೆದಿದ್ದು ಬೆಲ್ಲೇರ್ ನಲ್ಲಿ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಹ್ಯಾರಿಸ್ ಸಿವಿಲ್ ಕೋರ್ಟ್ ಲಾ ನಂಬರ್ 4 ಟೆಕ್ಸಾಸ್ ನಲ್ಲಿ ಶುಕ್ರವಾರದಂದು ಅವರು ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು. ಮೂಲಗಳ ಪ್ರಕಾರ ಮೊನಿಕಾ ಅವರ ತಂದೆ 70 ರ ದಶಕದಲ್ಲಿ ಅಮೆರಿಕಾಗೆ ವಲಸೆ ಹೋದರಂತೆ. ಸುಮಾರು 20 ವರ್ಷಗಳ ಕಾಲ ವಿಚಾರಣಾ ವಕೀಲರಾಗಿ ಸೇವೆ ಸಲ್ಲಿಸಿದ ಮೊನಿಕಾ ಅವರು ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ನಾಗರಿಕ ಹಕ್ಕುಗಳ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ.

‘ನಾನು ಹೆಚ್-ಟೌನ್ ಅನ್ನು (ಹೌಸ್ಟನ್ ನಗರದ ಉಪನಾಮ) ಪ್ರತಿನಿಧಿಸುವುದರಿಂದ ನನಗಿದು ಅತೀವ ಗೌರವ ಮತ್ತು ಅಭಿಮಾನದ ಸಂಗತಿಯಾಗಿದೆ. ನಾನೀಗ ಸಂತೋಷದ ಅಲೆಯಲ್ಲಿ ತೇಲುತ್ತಿದ್ದೇನೆ,’ ಎಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊನಿಕಾ ಹೇಳಿದರು.

ಇದನ್ನೂ ಓದಿ:   Pravasi Bharatiya Divas: ವಿದೇಶದಲ್ಲಿರುವ ಭಾರತೀಯರ ಸಾಧನೆಗೆ ಇದು ವೇದಿಕೆ, ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ

ಕಿಕ್ಕಿರಿದು ತುಂಬಿದ ಕೋರ್ಟ್ ರೂಮಿನಲ್ಲಿ ನಡೆದ ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ-ಅಮೆರಿಕನ್ ಹಾಗೂ ಅಮೆರಿಕದಲ್ಲಿ ನ್ಯಾಯಾಧೀಶರ ಹುದ್ದೆಯೊಂದನ್ನು ಅಲಂಕರಿಸಿದ ದಕ್ಷಿಣ ಏಶ್ಯಾದ ಪ್ರಪ್ರಥಮ ವ್ಯಕ್ತಿ ರವಿ ಸ್ಯಾಂಡಿಲ್ ವಹಿಸಿದ್ದರು.

‘ಸಿಖ್ ಸಮುದಾಯಕ್ಕೆ ಇದೊಂದು ಅವಿಸ್ಮರಣೀಯ ಘಟನೆ’ ಎಂದು ಸ್ಯಾಂಡಿಲ್ ಹೇಳಿದರು.

‘ಬಿಳಿಯರಲ್ಲದ ಅಥವಾ ಕೊಂಚ ಭಿನ್ನವಾಗಿರುವ ವ್ಯಕ್ತಿಯೊಬ್ಬರು ಇಷ್ಟು ದೊಡ್ಡ ಹುದ್ದೆಯನ್ನು ಅಲಂಕರಿಸಿದಾಗ ನಮಗೂ ಅಂಥ ಅವಕಾಶವಿದೆ ಅನ್ನೋದು ಇತರರಿಗೆ ಗೊತ್ತಾಗುತ್ತದೆ. ಮನ್ಪ್ರೀತ್ ಅವರು ಕೇವಲ ಸಿಖ್ ಸಮುದಾಯದ ಮಾತ್ರ ರಾಯಭಾರಿಯಾಗಿರದೆ ಬಿಳಿಯರಲ್ಲದ ಎಲ್ಲ ಮಹಿಳೆಯರ ರಾಯಭಾರಿಯಾಗಿದ್ದಾರೆ,’ ಎಂದು ಸ್ಯಾಂಡಿಲ್ ಹೇಳಿದ್ದಾರೆ.

ಇದನ್ನೂ ಓದಿ: ‘ಬೀಡಿ ಜಲೈಲೆ ಜಿಗರ್ ಸೆ ಪಿಯಾ’ ಹಾಡಿಗೆ ನರ್ತಿಸಿದ ಪಾಕಿಸ್ತಾನಿ ದಂಪತಿಯ ವಿಡಿಯೋ ವೈರಲ್

ಒಂದು ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಸಿಖ್ ಸಮುದಾಯದ ಸುಮಾರು 500,000 ಜನ ವಾಸವಾಗಿದ್ದು ಅವರ ಪೈಕಿ 20,000 ಸಾವಿರದಷ್ಟು ಜನ ಹೌಸ್ಟನ್ ಪ್ರದೇಶದಲ್ಲಿ ನೆಲೆಸಿದ್ದ್ದಾರೆ.

‘ಸಿಖ್ ಸಮುದಾಯಕ್ಕೆ ಅದೊಂದು ಹೆಮ್ಮೆಯ ಕ್ಷಣವಾಗಿತ್ತು ನಿಜ ಆದರೆ, ಹೌಸ್ಟನ್ ನಗರದಲ್ಲಿ ವೈವಿಧ್ಯತೆಯನ್ನು ನೋಡುವ ಜನ ಇನ್ನು ಮುಂದೆ ಕೋರ್ಟ್ಗಳಲ್ಲೂ ವೈವಿಧ್ಯತೆಯನ್ನು ಕಾಣಲಿದ್ದಾರೆ,’ ಎಂದ ಹೌಸ್ಟನ್ ನಗರದ ಮೇಯರ್ ಸಿಲ್ವೆಸ್ಟರ್ ಟರ್ನರ್ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ