ಇರಾನ್​ನಿಂದ ಅಮೆರಿಕದ ಎರಡನೇ ಎಫ್-35 ಫೈಟರ್ ಜೆಟ್ ಪತನ; ಪೈಲಟ್ ಬದುಕುಳಿದ ಸಾಧ್ಯತೆ ಕಡಿಮೆ

2ನೇ ಯುಎಸ್ ಎಫ್-35 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದೆ ಎಂದು ಇರಾನ್ ಹೇಳಿಕೊಂಡಿದೆ. ಪೈಲಟ್ ಹೊರಹೋಗಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಅಮೆರಿಕ, ಇಸ್ರೇಲ್ ಜೊತೆಗಿನ ಸಂಘರ್ಷ ಪ್ರಾರಂಭವಾದಾಗಿನಿಂದ ಎರಡನೇ ಎಫ್-35 ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಗಂಭೀರ ಗಾಯಗಳಿಂದಾಗಿ ಪೈಲಟ್ ಬದುಕುಳಿದಿರುವ ಸಾಧ್ಯತೆಯಿಲ್ಲ ಎಂದು ಇರಾನ್‌ ಹೇಳಿಕೆ ನೀಡಿದೆ.

ಇರಾನ್​ನಿಂದ ಅಮೆರಿಕದ ಎರಡನೇ ಎಫ್-35 ಫೈಟರ್ ಜೆಟ್ ಪತನ; ಪೈಲಟ್ ಬದುಕುಳಿದ ಸಾಧ್ಯತೆ ಕಡಿಮೆ
Us F 35 Fighter Jet
Image Credit source: x

Updated on: Apr 03, 2026 | 4:29 PM

ಟೆಹ್ರಾನ್, ಏಪ್ರಿಲ್ 3: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಎರಡನೇ F-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ಇರಾನಿನ (Iran War) ರಾಜ್ಯ ಮಾಧ್ಯಮ ಇಂದು ತಿಳಿಸಿದೆ. ಅಮೆರಿಕದ ಮತ್ತೊಂದು ಯುದ್ಧ ವಿಮಾನ ಪತನವಾಗಿ ಸಂಪೂರ್ಣವಾಗಿ ನಾಶವಾಗಿದೆ. ವಿಮಾನಕ್ಕೆ ತೀವ್ರ ಹಾನಿಯಾಗಿದ್ದರಿಂದ ಪೈಲಟ್ ಬದುಕಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಐಆರ್‌ಜಿಸಿ ತಿಳಿಸಿದೆ.

ಆದರೆ, ಅಮೆರಿಕದಿಂದ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ದೃಢೀಕರಣ ಬಂದಿಲ್ಲ. F-35 ಯುಎಸ್‌ನ ಅತ್ಯಂತ ಮುಂದುವರಿದ ಸ್ಟೆಲ್ತ್ ಫೈಟರ್ ಜೆಟ್‌ಗಳಲ್ಲಿ ಒಂದಾಗಿದ್ದು, ರಾಡಾರ್ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಮತ್ತು ಹೆಚ್ಚು ರಕ್ಷಿಸಲ್ಪಟ್ಟ ವಾಯುಪ್ರದೇಶದೊಳಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಆ ಯುದ್ಧ ವಿಮಾನವನ್ನು ಕೂಡ ಪತನಗೊಳಿಸಿರುವುದಾಗಿ ಇರಾನ್ ಘೋಷಿಸಿದೆ.

ಇದನ್ನೂ ಓದಿ: ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ

ಇರಾನ್ ಅಮೆರಿಕದ ಅತ್ಯಂತ ಅಮೂಲ್ಯವಾದ ವಿಮಾನಗಳಲ್ಲಿ ಒಂದಾದ ಮತ್ತು ಅಮೆರಿಕದ ಐದನೇ ತಲೆಮಾರಿನ ಯುದ್ಧ ಹೋರಾಟದ ಸಾಮರ್ಥ್ಯದ ಬೆನ್ನೆಲುಬಾದ US F-35 ಲೈಟ್ನಿಂಗ್ 2 ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಸುಮಾರು 2 ವಾರಗಳ ನಂತರ ಈ ದಾಳಿ ಸಂಭವಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us