AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅ. 7ರ ದಾಳಿಗಿಂತ ಭೀಕರ ಪ್ರಹಾರಕ್ಕೆ ಇರಾನ್ ಸಜ್ಜು; ಇಸ್ರೇಲ್ ಮೇಲೆ ನಾಲ್ಕೂ ಕಡೆಗಳಿಂದ ಸುತ್ತುವರಿದು ದಾಳಿ ಎಸಗಲು ಸಜ್ಜು

Iran to co-ordinate multi-front attack on Israel: ಮೂರು ವರ್ಷಗಳ ಹಿಂದೆ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ಭೀಕರ ದಾಳಿ ಎಸಗಿದ್ದು ಇಡೀ ವಿಶ್ವವೇ ತಿರುಗಿನೋಡುವಂತಾಗಿತ್ತು. ಇದೀಗ, ಇರಾನ್ ಬೇರೆ ಬೇರೆ ದೇಶಗಳಲ್ಲಿರುವ ತನ್ನ ಪ್ರಾಕ್ಸಿ ಸಂಘಟನೆಗಳನ್ನು ಬಳಸಿ ಇಸ್ರೇಲ್ ಮೇಲೆ ಇನ್ನೂ ಮಾರಕ ದಾಳಿ ಎಸಗಲು ಯೋಜಿಸಿರುವುದು ತಿಳಿದುಬಂದಿದೆ. ಹಮಾಸ್, ಹೆಜ್ಬುಲ್ಲಾ, ಹೂತಿ, ಇರಾಕೀ ಶಿಯಾ ಸಂಘಟನೆಗಳು ಇರಾನ್ ಸಮನ್ವಯತೆಯಲ್ಲಿ ವ್ಯವಸ್ಥಿತ ದಾಳಿ ನಡೆಸಲಿವೆ ಎಂದು ಇಸ್ರೇಲಿ ಗುಪ್ತಚರರು ಹೇಳಿದ್ದಾರೆ.

ಅ. 7ರ ದಾಳಿಗಿಂತ ಭೀಕರ ಪ್ರಹಾರಕ್ಕೆ ಇರಾನ್ ಸಜ್ಜು; ಇಸ್ರೇಲ್ ಮೇಲೆ ನಾಲ್ಕೂ ಕಡೆಗಳಿಂದ ಸುತ್ತುವರಿದು ದಾಳಿ ಎಸಗಲು ಸಜ್ಜು
ಇರಾನ್​ನ ಸರ್ವೋಚ್ಚ ನಾಯಕರಾಗಿದ್ದ ಖಮನೇನಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮದ ದೃಶ್ಯImage Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 06, 2026 | 7:52 PM

Share

ಟೆಲ್ ಅವೀವ್, ಸೆಪ್ಟೆಂಬರ್ 6: 2023ರ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ್ದ ಭೀಕರ ದಾಳಿಯ ಮಾದರಿಯಲ್ಲೇ, ಇನ್ನೂ ಭೀಕರ ದಾಳಿ ನಡೆಸಲು ಇರಾನ್ ಸಂಚು ರೂಪಿಸುತ್ತಿದೆ ಎಂದು ಇಸ್ರೇಲಿ ಗುಪ್ತಚರ ಸಂಸ್ಥೆಗಳ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಇರಾನ್ ತನ್ನ ಪ್ರಾಕ್ಸಿ (Proxy) ಸಂಘಟನೆಗಳನ್ನು ಒಟ್ಟುಗೂಡಿಸಿ ಇಸ್ರೇಲ್ ವಿರುದ್ಧ ಬೃಹತ್ ಪ್ರಮಾಣದ ‘ಬಹು-ರಂಗಗಳ’ (Multi-front) ದಾಳಿ ನಡೆಸಲು ಹೊರಟಿದೆ ಎಂದು ಈ ವರದಿ ಹೇಳುತ್ತಿದೆ. ಹಮಾಸ್, ಹೆಜ್ಬುಲ್ಲಾ, ಹೂತಿ ಬಂಡುಕೋರರು ಇರಾನ್ ಬೆಂಬಲಿತ ಸಂಘಟನೆಗಳಾಗಿದ್ದು, ಇವುಗಳನ್ನು ಬಳಸಿ, ಯಹೂದಿ ಹಬ್ಬಗಳ ಸಂದರ್ಭದಲ್ಲಿ ಈ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಭದ್ರತಾ ಪಡೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಏಕಕಾಲಕ್ಕೆ ದಾಳಿಯ ತಂತ್ರ: 2023ರ ದಾಳಿಯ ವೇಳೆ ಹಮಾಸ್ ಮಾತ್ರ ಮುಂಚೂಣಿಯಲ್ಲಿತ್ತು. ಆದರೆ ಈ ಬಾರಿ ಲೆಬನಾನಿನ ಹೆಜ್ಬುಲ್ಲಾ, ಗಾಜಾದ ಹಮಾಸ್, ಯೆಮೆನ್‌ನ ಹೂತಿ ಬಂಡುಕೋರರು ಹಾಗೂ ಇರಾಕ್‌ನ ಶಿಯಾ ಉಗ್ರಗಾಮಿ ಸಂಘಟನೆಗಳನ್ನು ಒಂದೇ ವೇದಿಕೆಗೆ ತಂದು ಇಸ್ರೇಲ್ ಮೇಲೆ ನಾಲ್ಕೂ ದಿಕ್ಕುಗಳಿಂದ ಏಕಕಾಲಕ್ಕೆ ದಾಳಿ ನಡೆಸುವುದು ಟೆಹ್ರಾನ್‌ನ ಯೋಜನೆಯಾಗಿದೆ.

ಇದನ್ನೂ ಓದಿ: ರಷ್ಯಾದ ಮೇಲಿನ ಪ್ರೀತಿಗಲ್ಲ, ಭಾರತ ತನಗಾಗಿಯೇ ತೈಲ ಖರೀದಿಸುತ್ತಿದೆ, ರಷ್ಯಾ ರಾಯಭಾರಿ ತಿರುಗೇಟು

ಇರಾನ್​ಗೆ ಸಮನ್ವಯತೆಯ ಕೊರತೆ ಈ ಬಾರಿ ಇರೋದಿಲ್ಲ

ಅಕ್ಟೋಬರ್ 7ರ ದಾಳಿಯ ಮುನ್ಸೂಚನೆ ಇರಾನ್ ಹಾಗೂ ಹೆಜ್ಬುಲ್ಲಾಗೆ ಸಂಪೂರ್ಣವಾಗಿ ಇರಲಿಲ್ಲ ಎಂಬ ವರದಿಗಳಿದ್ದವು. ಈ ಬಾರಿಯ ಯೋಜನೆಯಲ್ಲಿ ಇರಾನ್‌ನ ‘ಕುದ್ಸ್ ಫೋರ್ಸ್’ (Quds Force) ಕಮಾಂಡರ್‌ಗಳು ನೇರವಾಗಿ ಈ ಎಲ್ಲಾ ಸಂಘಟನೆಗಳ ನಾಯಕರೊಂದಿಗೆ ಜಂಟಿ ಸಭೆಗಳನ್ನು ನಡೆಸಿ ಕಾರ್ಯಾಚರಣೆಯ ಸಮನ್ವಯತೆಯನ್ನು ಸಾಧಿಸುತ್ತಿದ್ದಾರೆ.

ಡ್ರೋನ್ ಮತ್ತು ಕ್ಷಿಪಣಿ ಬಲವರ್ಧನೆ: ಇತ್ತೀಚಿನ ತಿಂಗಳುಗಳಲ್ಲಿ ಇರಾನ್ ತನ್ನ ಕ್ಷಿಪಣಿಗಳು ಹಾಗೂ ಆತ್ಮಘಾತಿ ಡ್ರೋನ್‌ಗಳ ಉತ್ಪಾದನೆಯನ್ನು ವೇಗಗೊಳಿಸಿದ್ದು, ಪ್ರಾಕ್ಸಿ ಪಡೆಗಳಿಗೆ ಸುಧಾರಿತ ಆಯುಧಗಳನ್ನು ಪೂರೈಸುತ್ತಿದೆ.

ಇದನ್ನೂ ಓದಿ: ಅಮೆರಿಕನ್ ನೌಕಾಪಡೆಯ ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ; ಇರಾನ್‌ನ 3 ತೈಲ ಟ್ಯಾಂಕರ್‌ ಧ್ವಂಸ

ಇಸ್ರೇಲ್ ರಕ್ಷಣಾ ಪಡೆಗಳು (IDF) ಮತ್ತು ಮೊಸಾದ್ (Mossad) ಗಡಿ ಭಾಗಗಳಲ್ಲಿ ಕಣ್ಗಾವಲು ಹೆಚ್ಚಿಸಿದ್ದು, ಯಾವುದೇ ದಾಳಿ ಯತ್ನ ನಡೆದರೆ ಇರಾನ್ ಮೇಲೆಯೇ ನೇರ ಹಾಗೂ ಕಠಿಣ ತಿರುಗೇಟು ನೀಡಲಾಗುವುದು ಎಂದು ಬೆದರಿಕೆ ನೀಡಿದೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us