ನಿಮ್ಮ ಮೊಬೈಲ್ನಂತೆ ಮಾಸ್ಕ್ನ ಕೂಡ Recharge ಮಾಡಿ ಮತ್ತೆ Use ಮಾಡಿ!
ಜೆರುಸಲೆಮ್: ಕೊರೊನಾ ಬಂದು ಜನ ಮಾಸ್ಕ್ ಧರಿಸದೇ ಹೊರಗೆ ಕಾಲಿಡುವಂತಿಲ್ಲ. ಕೊರೊನಾದ ಆರಂಭಿಕ ದಿನಗಳಂತೂ ಹೇಳೋದೂ ಕಷ್ಟ ಯಾಕಂದ್ರೆ ಆಗೆಲ್ಲಾ ಮಾಸ್ಕ್ ಸಿಗ್ತಾನೇ ಇರಲಿಲ್ಲ. ಈಗ ಮಾಸ್ಕ್ ಸಿಕ್ಕಿದ್ರೂ ಮಾಸ್ಕ್ ಬಗ್ಗೆ ಗೊಂದಲವಂತೂ ಹಾಗೇ ಇದೆ. ಇಂತಹ ಗೊಂದಲದ ಸಮಯದಲ್ಲಿ ಒಮ್ಮೆ ಬಳಸಿದ ಮಾಸ್ಕ್ ಮತ್ತೆ ಬಳಸುವಂತಾದ್ರೆ ಚೆನ್ನಾಗಿರುತ್ತೆ ಅಂತ ಎಲ್ಲರೂ ಬಯಸ್ತಾರೆ. ಆದ್ರೆ ಈಗ ನೀವು ಆ ಬಗ್ಗೆ ಚಿಂತೆ ಪಡಬೇಕಿಲ್ಲ. ಖಂಡಿತಾ ಒಗೆಯದೇ ಕೂಡಾ ಅದೊಂದು ಮಾಸ್ಕನ್ನು ಬಳಸಬಹುದು. ಅದೆಷ್ಟು ಬಾರಿ ಬಳಸಿದ್ರೂ ಅದನ್ನು […]
ಜೆರುಸಲೆಮ್: ಕೊರೊನಾ ಬಂದು ಜನ ಮಾಸ್ಕ್ ಧರಿಸದೇ ಹೊರಗೆ ಕಾಲಿಡುವಂತಿಲ್ಲ. ಕೊರೊನಾದ ಆರಂಭಿಕ ದಿನಗಳಂತೂ ಹೇಳೋದೂ ಕಷ್ಟ ಯಾಕಂದ್ರೆ ಆಗೆಲ್ಲಾ ಮಾಸ್ಕ್ ಸಿಗ್ತಾನೇ ಇರಲಿಲ್ಲ. ಈಗ ಮಾಸ್ಕ್ ಸಿಕ್ಕಿದ್ರೂ ಮಾಸ್ಕ್ ಬಗ್ಗೆ ಗೊಂದಲವಂತೂ ಹಾಗೇ ಇದೆ.
ಇಂತಹ ಗೊಂದಲದ ಸಮಯದಲ್ಲಿ ಒಮ್ಮೆ ಬಳಸಿದ ಮಾಸ್ಕ್ ಮತ್ತೆ ಬಳಸುವಂತಾದ್ರೆ ಚೆನ್ನಾಗಿರುತ್ತೆ ಅಂತ ಎಲ್ಲರೂ ಬಯಸ್ತಾರೆ. ಆದ್ರೆ ಈಗ ನೀವು ಆ ಬಗ್ಗೆ ಚಿಂತೆ ಪಡಬೇಕಿಲ್ಲ. ಖಂಡಿತಾ ಒಗೆಯದೇ ಕೂಡಾ ಅದೊಂದು ಮಾಸ್ಕನ್ನು ಬಳಸಬಹುದು. ಅದೆಷ್ಟು ಬಾರಿ ಬಳಸಿದ್ರೂ ಅದನ್ನು ಒಗೆಯಬೇಕಾಗಿಯೇ ಇಲ್ಲ. ಮತ್ತೆ ಮತ್ತೆ ಬಳಸಬಹುದು.
ನಿಜ ಕಣ್ರೀ. ಇಂತಹದ್ದೊಂದು ಮಾಸ್ಕ್ ಈಗ ಮಾರುಕಟ್ಟೆಗೆ ದಾಂಗುಡಿಯಿಡಲಿದೆ. ಅಂದ ಹಾಗೆ ಈ ಸ್ಪೆಷಲ್ ಮಾಸ್ಕನ್ನು ಕಂಡು ಹಿಡಿದವರು ಇಸ್ರೇಲಿನ ತಂತ್ರಜ್ಞರು. ಅವರು ಒಗೆಯದೇ ಬಳಸುವ ಮಾಸ್ಕನ್ನೇನೋ ಕಂಡು ಹಿಡಿದ್ರು ಆದ್ರೆ ಒಗೆಯದೆ ಬಳಸೋದು ಹೇಗೆ ಅಂತ ಆಲೋಚಿಸ್ತೀರಾ? ತುಂಬಾ ಸಿಂಪಲ್.. ಅದು ಚಾರ್ಜ್ ಮಾಡಬಲ್ಲಂತಹ ಮಾಸ್ಕ್. ನಾವು ಮೊಬೈಲನ್ನು ಹೇಗೆ ಚಾರ್ಜ್ ಮಾಡ್ತೀವೋ ಹಾಗೆ ಈ ಮಾಸ್ಕ್ನ್ನು ಕೂಡಾ ಚಾರ್ಜ್ ಮಾಡಬಹುದು. ಅದಕ್ಕೆ ಯು.ಎಸ್.ಬಿ.ಪಿ ಪಿನ್ ಹೊಂದಿರುವ ಚಾರ್ಜರ್ ಒಂದಿರುತ್ತೆ ಇದರಿಂದ ಚಾರ್ಜ್ ಮಾಡಿದ್ರೆ ಸಾಕು.
ಕೊರೊನಾ ಕಾಲಕ್ಕೆ ಅನುಕೂಲವಾಗುವಂತೆ ಇಸ್ರೇಲಿನಲ್ಲಿ ಕಂಡು ಹಿಡಿದ ಹೊಸ ತರಹದ ಮಾಸ್ಕ್ ಎಲ್ಲರ ಗಮನ ಸೆಳೆದಿದೆ. ಇದು ಮತ್ತೆ ಬಳಸಬಹುದಾದ ಮಾಸ್ಕ್ ಆಗಿದ್ದು, ಸೋಂಕು ನಿವಾರಣೆಗಾಗಿ ಮಾಸ್ಕ್ನಲ್ಲಿ ವಿಶೇಷವಾದ ಅನುಕೂಲತೆಗಳನ್ನು ಹೊಂದಿದೆ.
ಮಾಸ್ಕ್ ಬಳಸುವವರು ಮೊಬೈಲ್ ಚಾರ್ಜರ್ ಬಳಸಿ ಈ ಮಾಸ್ಕನ್ನು ಸೋಂಕು ಮುಕ್ತಗೊಳಿಸಬಹುದಂತೆ. ಆ ಬಳಿಕ ಸೇಫ್ ಆಗಿ ಬಳಸಬಹುದಂತೆ. ಹಾಗಾದ್ರೆ ನಿಮ್ಮ ಮುಂದಿದ್ದ ಮಾಸ್ಕ್ ಒಗೆಯುವ ಸಮಸ್ಯೆಯೊಂದು ನಿರಾಳವಾಗಿ ಮುಗಿದೋಯ್ತು. ಆದ್ರೆ ಈ ಮಾಸ್ಕ್ ಇಂಡಿಯನ್ ಮಾರ್ಕೆಟ್ಗೆ ಯಾವಾಗ ಬರುತ್ತೆ ಅನ್ನೋದೇ ಪ್ರಶ್ನೆ. ಅಲ್ಲಿಯವರೆಗೆ ನಮ್ಮ ಮಾಸ್ಕ್ ಇರುತ್ತೆ, ಮಾಮೂಲಿ ಬಳಕೆ ಇರುತ್ತೆ. -ರಾಜೇಶ್ ಶೆಟ್ಟಿ
Published On - 1:05 pm, Sun, 21 June 20