AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿರಿಯಾದ ವಸತಿ ಕಟ್ಟಡದ ಮೇಲೆ ಇಸ್ರೇಲ್ ರಾಕೆಟ್ ದಾಳಿ, 7 ಮಂದಿ ಸಾವು

ಸಿರಿಯಾದ ರಾಜಧಾನಿ ಡಮಾಸ್ಕಸ್​ನಲ್ಲಿರುವ ಕಟ್ಟಡದ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ನಡೆಸಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಈ ಮಾಹಿತಿಯನ್ನು ನೀಡಿದೆ.

ಸಿರಿಯಾದ ವಸತಿ ಕಟ್ಟಡದ ಮೇಲೆ ಇಸ್ರೇಲ್ ರಾಕೆಟ್ ದಾಳಿ, 7 ಮಂದಿ ಸಾವು
ಸಿರಿಯಾ ಕಟ್ಟಡ
ನಯನಾ ರಾಜೀವ್
|

Updated on: Oct 09, 2024 | 11:31 AM

Share

ಸಿರಿಯಾದ ರಾಜಧಾನಿ ಡಮಾಸ್ಕಸ್​ನಲ್ಲಿರುವ ಕಟ್ಟಡದ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ನಡೆಸಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಈ ಮಾಹಿತಿಯನ್ನು ನೀಡಿದೆ.

ಈ ಕಟ್ಟಡಕ್ಕೆ ಇರಾನ್​ನ ರೆವಲ್ಯೂಷನರಿ ಗಾರ್ಡ್​ ಮತ್ತು ಹಿಜ್ಬುಲ್ಲಾ ನಾಯಕರು ಆಗಾಗ ಭೇಟಿ ನೀಡುತ್ತಿರುತ್ತಿದ್ದರು. ಇಸ್ರೇಲ್ ಡಮಾಸ್ಕಸ್‌ನ ಪಶ್ಚಿಮದಲ್ಲಿರುವ ಮೆಜಾಹ್ ಉಪನಗರದಲ್ಲಿರುವ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡಿದೆ. ಈ ದಾಳಿಯನ್ನು ಇಸ್ರೇಲ್ ನಡೆಸಿದೆ. ವರದಿಯ ಪ್ರಕಾರ, ಇಸ್ರೇಲ್‌ನಿಂದ ಮೂರು ರಾಕೆಟ್‌ಗಳನ್ನು ಹಾರಿಸಲಾಯಿತು.

ಅನೇಕ ಇಸ್ರೇಲಿ ಕ್ಷಿಪಣಿಗಳನ್ನು ಸಿರಿಯನ್ ರಕ್ಷಣಾ ವ್ಯವಸ್ಥೆಯು ತಡೆದಿದೆ, ಕ್ಟೋಬರ್ 7 ರಂದು ಹಮಾಸ್ ದಾಳಿಯ ನಂತರ, ಇಸ್ರೇಲ್ ಸಿರಿಯಾದಲ್ಲಿ ಇರಾನ್‌ಗೆ ಸಂಬಂಧಿಸಿದ ಗುರಿಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ.

ಮತ್ತಷ್ಟು ಓದಿ: ಗಾಜಾದ ಮಸೀದಿ, ಶಾಲೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 18 ಮಂದಿ ಸಾವು

ಇಸ್ರೇಲಿ ರಕ್ಷಣಾ ಪಡೆ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿಯನ್ನೂ ಕೊಂದಿದೆ. ಅಕ್ಟೋಬರ್ 3 ರ ರಾತ್ರಿ, ಸಫಿಯೆದ್ದೀನ್ ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಹಿಜ್ಬುಲ್ಲಾ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಇಸ್ರೇಲಿ ರಕ್ಷಣಾ ಪಡೆಗಳಿಂದ ವೈಮಾನಿಕ ದಾಳಿಗಳು ನಡೆದವು. ಆದರೆ, ಇಸ್ರೇಲ್ ರಕ್ಷಣಾ ಪಡೆ ಅಥವಾ ಹಿಜ್ಬುಲ್ಲಾ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಹಿಜ್ಬುಲ್ಲಾದಿಂದ ಇಸ್ರೇಲ್ ಮೇಲೆ ಮತ್ತೆ ರಾಕೆಟ್ಗಳನ್ನು ಹಾರಿಸಲಾಗಿದೆ, ಹೈಫಾದ ದಕ್ಷಿಣಕ್ಕೆ ಹಿಜ್ಬುಲ್ಲಾ ಸುಮಾರು 180 ರಾಕೆಟ್‌ಗಳನ್ನು ಹಾರಿಸಿತು. ಹೈಫಾ ಬಂದರಿನ ಸಮೀಪವಿರುವ ಪ್ರದೇಶಗಳನ್ನು ಹಿಜ್ಬುಲ್ಲಾ ಗುರಿಯಾಗಿರಿಸಿಕೊಂಡಿದೆ. ಇಸ್ರೇಲ್ ಸರ್ಕಾರವು ಹೆಚ್ಚು ಹೊರಗೆ ಹೋಗದಂತೆ ನಾಗರಿಕರಿಗೆ ಸಲಹೆ ನೀಡಿದೆ. ಅಲ್ಲದೆ ಗಡಿ ಭಾಗದ ಬಹುತೇಕ ಶಾಲೆಗಳನ್ನು ಮುಚ್ಚಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ