Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನಿಯ ಉಪ ಪ್ರಧಾನಿ ಭೇಟಿಯಾದ ಪ್ರಲ್ಹಾದ್​ ಜೋಶಿ: ಇಂಧನ ವಲಯದ ಬಗ್ಗೆ ಮಹತ್ವದ ಚರ್ಚೆ

ಜರ್ಮನಿಯ ಉಪ ಪ್ರಧಾನಿ ಹಾಗೂ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆ ಸಚಿವ ಡಾ. ರಾಬರ್ಟ್ ಹಾಬೆಕ್ ಅವರನ್ನು ಇಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಭೇಟಿ ಮಾಡಿ ಸಭೆ ಮಾಡಿದ್ದಾರೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಉಭಯ ದೇಶಗಳ ನಾಯಕರು ಫಲಪ್ರದ ಚರ್ಚೆಯನ್ನು ಮಾಡಿದ್ದಾರೆ.

ಗಂಗಾಧರ​ ಬ. ಸಾಬೋಜಿ
|

Updated on: Oct 09, 2024 | 6:29 PM

ಜರ್ಮನ್ ಪ್ರವಾಸದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ಇಂದು ಜರ್ಮನಿಯ ಉಪ ಪ್ರಧಾನಿ ಹಾಗೂ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆ ಸಚಿವ ಡಾ. ರಾಬರ್ಟ್ ಹಾಬೆಕ್​ ಅವರನ್ನು ಭೇಟಿ ಮಾಡಿದ್ದಾರೆ.

1 / 9
ನವೀನ ಮತ್ತು ನವೀಕರಣೀಯ ಊರ್ಜಾ, ಶಕ್ತಿ ಕ್ಷೇತ್ರದಲ್ಲಿ ಉಭಯ ದೇಶಗಳ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ  ಡಾ. ರಾಬರ್ಟ್ ಹಾಬೆಕ್‌ ಅವರು ಜೋಶಿಯವರಿಗೆ ಆತಿಥ್ಯ ನೀಡಿದರು. ಅದರಲ್ಲೂ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗೊತ್ತಿ ತಾವೇ ಸ್ವತಃ ಪ್ರವೇಶ ದ್ವಾರದವರೆಗೆ ಆಗಮಿಸಿ ಜೋಶಿ ಅವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

2 / 9
ಡಾ. ರಾಬರ್ಟ್ ಹಾಬೆಕ್ ಮತ್ತು ಪ್ರಲ್ಹಾದ್​ ಜೋಶಿ ಉಭಯ ದೇಶಗಳ ನಡುವಣ ಭೇಟಿಗೆ ಆತ್ಮೀಯತೆಯ ಸ್ಪರ್ಶ ನೀಡಿದೆ. ಈ ವೇಳೆ ಸಭೆ ಮಾಡಿದ್ದು, ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗಿದೆ.

3 / 9
ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಅವರು ಫಲಪ್ರದ ಚರ್ಚೆ ಮಾಡಿದ್ದು, ಇದೇ ವೇಳೆ ಹಸಿರು ಜಲಜನಕ, ಕಡಲಾಚೆಯ ಪವನ ಶಕ್ತಿ, ಜೈವಿಕ ಅನಿಲ ಮತ್ತು ಸೌರ ತ್ಯಾಜ್ಯದ ಮರುಬಳಕೆಯ ಅವಕಾಶಗಳ ಕುರಿತು ಕೂಡ ಚರ್ಚೆ ಮಾಡಲಾಗಿದೆ.

4 / 9
ಇಂಧನ ಪರಿವರ್ತನೆಯಲ್ಲಿ ಭಾರತ ಮತ್ತು ಜರ್ಮನಿಯ ಸಹಕಾರವು ಉತ್ತಮವಾಗಿ ಪ್ರಗತಿಯಲ್ಲಿರುವುದು ಸಂತಸದ ವಿಷಯ. ಮುಂಬರುವ ವರ್ಷಗಳಲ್ಲಿ ಭಾರತವು ಜರ್ಮನಿಗೆ ಹಸಿರು ಜಲಜನಕ ವಿಶ್ವಾಸಾರ್ಹ ಮೂಲವಾಗಿ ಹೊರಹೊಮ್ಮಲಿದೆ ಎಂದು  ಪ್ರಲ್ಹಾದ್​ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

5 / 9
ಕಳೆದ 10 ವರ್ಷಗಳಲ್ಲಿ ಭಾರತವು ನವೀಕರಣೀಯ ಊರ್ಜಾ ಕ್ಷೇತ್ರದಲ್ಲಿ ಮಾಡಿರುವ ಅಮೋಘ ಬೆಳವಣಿಗೆಯನ್ನು ಶ್ಲಾಘಿಸಿದ ಹಾಬೆಕ್‌ ಅವರು ಮುಂಬರಲಿರುವ ದಿನಗಳಲ್ಲಿ 500 ಗಿಗಾ ವಾಟ್‌ ಗುರಿಯನ್ನು ತಲುಪುವ ದಿಶೆಯಲ್ಲಿ ಭಾರತವು ಜರ್ಮನಿಗೆ ನೀಡಿದ ಅವಕಾಶಗಳ ಬಗ್ಗೆ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

6 / 9
ನವೀಕರಣೀಯ ಶಕ್ತಿ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಉಭಯ ದೇಶಗಳ ನಾಯಕರುಗಳು ಫಲಪ್ರದವಾದ ಸಭೆ ನಡೆಸಿದರು. ಹಸಿರು ಜಲಜನಕ (ಗ್ರೀನ್‌ ಹೈಡ್ರೋಜನ್‌), ಕಡಲ ತೀರದ ಪವನ ಶಕ್ತಿ, ಜೈವಿಕ ಅನಿಲ ಮತ್ತು ಸೌರ ತ್ಯಾಜ್ಯಗಳ ಪುನರ್ಬಳಕೆಗಳ ವಿಷಯದಲ್ಲಿ ಇರುವ ಅವಕಾಶಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

7 / 9
ಹ್ಯಾಮ್‌ಬರ್ಗ್‌ ಸಸ್ಟೇನೆಬಿಲಿಟಿ ಶೃಂಗಸಭೆಯ ಸಂದರ್ಭದಲ್ಲಿ ಪ್ರಲ್ಹಾದ್​ ಜೋಶಿ ಮತ್ತು ಡಾ. ರಾಬರ್ಟ್ ಹಾಬೆಕ್‌ ಅವರು ಪರಸ್ಪರ ವ್ಯಕ್ತಪಡಿಸಿದ ಸೌಹಾರ್ದಪೂರ್ಣ ಸ್ನೇಹವು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಗೌರವಕ್ಕೆ ಸಾಕ್ಷಿಯಾಗಿದೆ.

8 / 9
ಆತಿಥ್ಯಕ್ಕೆ ಪ್ರತಿಯಾಗಿ ಜೋಶಿಯವರು ಹಾಬೆಕ್‌ ಅವರಿಗೆ ಶ್ರೀಗಂಧದ ಮರದ ಸುಂದರ ಆನೆಯ ಕಲಾಕೃತಿಯನ್ನು ನೆನಪಿನ ಉಡುಗೊರೆಯಾಗಿ ನೀಡಿ ಧನ್ಯವಾದ ಹೇಳಿದ್ದಾರೆ.

9 / 9
Follow us
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್

ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ

ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು

ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ

ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ

ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ

‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ

ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ

ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ

ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!