ಲೆಬನಾನ್ ಮೇಲೆ ಇಸ್ರೇಲ್ ಮತ್ತೆ ವೈಮಾನಿಕ ದಾಳಿ, 11 ಮಂದಿ ಸಾವು, 48 ಜನರಿಗೆ ಗಾಯ

ಲೆಬನಾನ್‌ನ ದಕ್ಷಿಣ ಪ್ರದೇಶವಾದ ಟೈರ್‌ನಲ್ಲಿ ಇಸ್ರೇಲ್‌ನ ಪ್ರಮುಖ ದಾಳಿ ನಡೆದಿದೆ. ವೈಮಾನಿಕ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 48 ಜನರು ಗಾಯಗೊಂಡಿದ್ದಾರೆ. ಲೆಬನಾನಿನ ಸಚಿವಾಲಯವು AFP ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದೆ. ಈ ಪ್ರದೇಶವು ಇರಾನ್ ಬೆಂಬಲಿತ ಹಿಜ್ಬುಲ್ಲಾದ ಭದ್ರಕೋಟೆಯಾಗಿದೆ. ಇದಲ್ಲದೇ ಲೆಬನಾನ್ ರಾಜಧಾನಿ ಬೈರುತ್ ಮೇಲೂ ಭಾನುವಾರ ದಾಳಿ ನಡೆದಿದೆ.

ಲೆಬನಾನ್ ಮೇಲೆ ಇಸ್ರೇಲ್ ಮತ್ತೆ ವೈಮಾನಿಕ ದಾಳಿ, 11 ಮಂದಿ ಸಾವು, 48 ಜನರಿಗೆ ಗಾಯ
ವೈಮಾನಿಕ ದಾಳಿ
Image Credit source: The New Arab

Updated on: Nov 18, 2024 | 12:06 PM

ಲೆಬನಾನ್‌ನ ದಕ್ಷಿಣ ಪ್ರದೇಶವಾದ ಟೈರ್‌ನಲ್ಲಿ ಇಸ್ರೇಲ್‌ನ ಪ್ರಮುಖ ದಾಳಿ ನಡೆದಿದೆ. ವೈಮಾನಿಕ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 48 ಜನರು ಗಾಯಗೊಂಡಿದ್ದಾರೆ. ಲೆಬನಾನಿನ ಸಚಿವಾಲಯವು AFP ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದೆ. ಈ ಪ್ರದೇಶವು ಇರಾನ್ ಬೆಂಬಲಿತ ಹಿಜ್ಬುಲ್ಲಾದ ಭದ್ರಕೋಟೆಯಾಗಿದೆ. ಇದಲ್ಲದೇ ಲೆಬನಾನ್ ರಾಜಧಾನಿ ಬೈರುತ್ ಮೇಲೂ ಭಾನುವಾರ ದಾಳಿ ನಡೆದಿದೆ.

ಇಸ್ರೇಲಿ ಸೈನ್ಯವು ರಾಜಧಾನಿಯ ಹೊರವಲಯವನ್ನು ಗುರಿಯಾಗಿಸಿಕೊಂಡಿದೆ, ಈ ಕಾರಣದಿಂದಾಗಿ ಬೈರುತ್‌ನಲ್ಲಿ ಬಾಂಬ್ ಸ್ಫೋಟದ ಘಟನೆಯನ್ನು ಅತ್ಯಂತ ಅಸಾಮಾನ್ಯವೆಂದು ಪರಿಗಣಿಸಲಾಗಿದೆ. ಲೆಬನಾನ್ ಸರ್ಕಾರ ಹಾಗೂ ಹಿಜ್ಬುಲ್ಲಾ ಮೇಲೆ ಒತ್ತಡ ಬೀರುವುದು ಇಸ್ರೇಲ್​ನ ನಿರಂತರ ದಾಳಿಯ ಉದ್ದೇಶವಾಗಿದೆ.

ಕಳೆದ ಕೆಲವು ವಾರಗಳಲ್ಲಿ ಬೈರುತ್‌ನಲ್ಲಿ ನಡೆದ ಮೊದಲ ದಾಳಿ ಇದಾಗಿದೆ. ರಾಜಧಾನಿಯ ಮೇಲಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಮಾಧ್ಯಮ ಕಚೇರಿಯ ಮುಖ್ಯಸ್ಥ ಮೊಹಮ್ಮದ್ ಅಫೀಕ್ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 73 ಮಂದಿ ಸಾವು

ಬೈರುತ್ ಮೇಲೆ ನಡೆದ ದಾಳಿಯಲ್ಲಿ ರಾಸ್ ಅಲ್-ನಬಾ ಅಕ್ಕಪಕ್ಕದಲ್ಲಿರುವ ಏಳು ಅಂತಸ್ತಿನ ಕಟ್ಟಡವನ್ನು ನಾಶಪಡಿಸಿತು.
ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ತಂಡವು ಕಾರ್ಯನಿರ್ವಹಿಸುತ್ತಿದೆ. ಇಸ್ರೇಲ್ ಈ ಕಟ್ಟಡದ ಮೇಲೆ ದಾಳಿ ನಡೆಸಿದಾಗ, ಮೊಹಮ್ಮದ್ ಅಫೀಕ್ ಅದರೊಳಗೆ ಇದ್ದರು.

ಈ ಕಟ್ಟಡವು ಅರಬ್ ಸೋಷಿಯಲಿಸ್ಟ್ ಬಾತ್ ಪಾರ್ಟಿಯ ಪ್ರಧಾನ ಕಛೇರಿಯನ್ನು ಹೊಂದಿತ್ತು, ಇದು ಹಿಜ್ಬುಲ್ಲಾ ಜೊತೆಗಿನ ಸಣ್ಣ ರಾಜಕೀಯ ಬಣವಾಗಿದೆ. ದಾಳಿಯ ಸಂದರ್ಭದಲ್ಲಿ ಅದರ ನಾಯಕ ಅಲಿ ಹಿಜ್ಜಿ ಕಟ್ಟಡದಲ್ಲಿ ಇರಲಿಲ್ಲ ಎಂಬುದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us