ಜಪಾನ್​​ನ ನೂತನ ಪ್ರಧಾನಿಯಾಗಲಿದ್ದಾರೆ ಫ್ಯೂಮಿಯೊ ಕಿಶಿದಾ

Fumio Kishida: ಲಿಬರಲ್ ಡೆಮಾಕ್ರಟಿಕ್ ಪಕ್ಷದ ಹೊಸ ನಾಯಕನಾಗಿ, ಕಿಶಿದಾ ಮುಂದಿನ ಸಂಸತ್ತಿನಲ್ಲಿ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ.ಅಲ್ಲಿ ಅವರ ಪಕ್ಷ ಮತ್ತು ಸಮ್ಮಿಶ್ರ ಪಾಲುದಾರರು ಅಧಿಕಾರ ನಡೆಸಲಿದ್ದಾರೆ.

ಜಪಾನ್​​ನ ನೂತನ ಪ್ರಧಾನಿಯಾಗಲಿದ್ದಾರೆ ಫ್ಯೂಮಿಯೊ ಕಿಶಿದಾ
ಫ್ಯೂಮಿಯೊ ಕಿಶಿದಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 29, 2021 | 2:33 PM

ಟೊಕಿಯೊ: ಜಪಾನ್‌ನ ಮಾಜಿ ವಿದೇಶಾಂಗ ಸಚಿವ ಫ್ಯೂಮಿಯೊ ಕಿಶಿದಾ (Fumio Kishida) ಆಡಳಿತ ಪಕ್ಷದ ನಾಯಕತ್ವದ ಚುನಾವಣೆಯಲ್ಲಿ ಗೆದ್ದಿದ್ದಾರೆ ಮತ್ತು ಮುಂದಿನ ಪ್ರಧಾನಿಯಾಗಲಿದ್ದಾರೆ.  ಕಳೆದ ಸೆಪ್ಟೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕೇವಲ ಒಂದು ವರ್ಷ ಸೇವೆ ಸಲ್ಲಿಸಿ ಪ್ರಧಾನಿ ಯೋಶಿಹೈಡೆ ಸುಗಾ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಲಿಬರಲ್ ಡೆಮಾಕ್ರಟಿಕ್ ಪಕ್ಷದ ಹೊಸ ನಾಯಕನಾಗಿ, ಕಿಶಿದಾ ಮುಂದಿನ ಸಂಸತ್ತಿನಲ್ಲಿ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಅಲ್ಲಿ ಅವರ ಪಕ್ಷ ಮತ್ತು ಸಮ್ಮಿಶ್ರ ಪಾಲುದಾರರು ಅಧಿಕಾರ ನಡೆಸಲಿದ್ದಾರೆ.  ಕಿಶಿದಾ ಮೊದಲ ಸುತ್ತಿನಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಸಾನೆ ತಕೈಚಿ ಮತ್ತು ಸಿಕೊ ನೋಡಾ ಅವರಿಗಿಂತ ಮುನ್ನಡೆ ಸಾಧಿಸಿ ವ್ಯಾಕ್ಸಿನೇಷನ್ ಸಚಿವರಾದ ಟಾರೊ ಕೊನೊ ಅವರನ್ನು 257  ಮತಗಳಿಂದ ಪರಾಭವಗೊಳಿಸಿದರು.

ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್​​ಡಿಪಿ) ಹೊಸ ನಾಯಕನಾದ ಕಿಶಿದಾ  ಸಂಸತ್ತಿನಲ್ಲಿ ಸೋಮವಾರ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗುವುದು ನಿಶ್ಚಿತ. ಅವರು ನವೆಂಬರ್ 28 ರೊಳಗೆ ಸಾರ್ವತ್ರಿಕ ಚುನಾವಣೆಗೆ ಎಲ್​​ಡಿಪಿಯನ್ನು ಮುನ್ನಡೆಸಲಿದ್ದಾರೆ.

ಚೀನಾವನ್ನು ನಿಭಾಯಿಸಲು ಮತ್ತು ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಜಪಾನ್, ಪ್ರಯತ್ನಿಸುತ್ತಿರುವುದರಿಂದ ಕಿಶಿದಾ ಅವರ ಈ ಗೆಲುವು ನೀತಿಗಳಲ್ಲಿ ದೊಡ್ಡ ಬದಲಾವಣೆಯನ್ನು ಪ್ರಚೋದಿಸುವ ಸಾಧ್ಯತೆಯಿಲ್ಲ. ಮೃದು ಮಾತಿನ ಕಿಶಿದಾ ಆದಾಯದ ಅಸಮಾನತೆಯನ್ನು ಕಡಿಮೆ ಮಾಡುವತ್ತ ಗಮನಹರಿಸುವ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ.

ಅವರು ಜಪಾನ್‌ನ ರಕ್ಷಣೆಯನ್ನು ಹೆಚ್ಚಿಸುವ ಮತ್ತು ಅಮೆರಿಕದೊಂದಿಗಿನ ಭದ್ರತಾ ಸಂಬಂಧಗಳನ್ನು ಬಲಪಡಿಸುವ ಮತ್ತು ಜಪಾನ್, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಭಾರತದ ಕ್ವಾಡ್ ಗ್ರೂಪಿಂಗ್ ಸೇರಿದಂತೆ ಇತರ ಪಾಲುದಾರರ ಜೊತೆಗಿನ ವ್ಯಾಪಕ ಒಮ್ಮತವನ್ನು ಹಂಚಿಕೊಳ್ಳುತ್ತಾರೆ. ಚೀನಾದೊಂದಿಗೆ ಪ್ರಮುಖ ಆರ್ಥಿಕ ಸಂಬಂಧಗಳನ್ನು ಉಳಿಸಿಕೊಂಡು ನಿಯಮಿತ ಶೃಂಗಸಭೆಗಳನ್ನು ನಡೆಸುತ್ತಾರೆ .

ನಿರ್ದಿಷ್ಟವಾಗಿ ಹೇಳುವುದಾದರೆ, ಕಿಶಿದಾ ಜಪಾನ್‌ನ ಕರಾವಳಿ ಕಾವಲುಗಾರರನ್ನು ಹೆಚ್ಚಿಸಲು ಬಯಸುತ್ತಾರೆ ಮತ್ತು ಉಯಿಘರ್ ಅಲ್ಪಸಂಖ್ಯಾತರ ಸದಸ್ಯರ ವಿರುದ್ಧ ಚೀನಾ ನಡೆಸುತ್ತಿರುವ ಕ್ರಮವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದರು. ಅವರ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಅವರು ಪ್ರಧಾನ ಮಂತ್ರಿಯ ಸಹಾಯಕರನ್ನು ನೇಮಿಸಲು ಬಯಸುತ್ತಾರೆ.

ಕಿಶಿದಾ ಹಿಂದೆ ಎಲ್‌ಡಿಪಿ ಪಾಲಿಸಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು ಮತ್ತು 2012-17ರ ನಡುವೆ ವಿದೇಶಾಂಗ ಸಚಿವರಾಗಿದ್ದರು. ಈ ಸಮಯದಲ್ಲಿ ಅವರು ರಷ್ಯಾ ಮತ್ತು ದಕ್ಷಿಣ ಕೊರಿಯಾದೊಂದಿಗೆ ಒಪ್ಪಂದ ಮಾಡಿಕೊಂಡರು.

ಕಿಶಿದಾ ಅವರು ಅಣ್ವಸ್ತ್ರಗಳನ್ನು ರದ್ದುಗೊಳಿಸುವುದನ್ನು “ನನ್ನ ಜೀವನದ ಕೆಲಸ” ಎಂದು ಕರೆದಿದ್ದಾರೆ ಮತ್ತು 2016 ರಲ್ಲಿ ಅಮೆರಿಕದ  ಆಗಿನ ಅಧ್ಯಕ್ಷ ಬರಾಕ್ ಒಬಾಮಾರನ್ನು ಐತಿಹಾಸಿಕ ಭೇಟಿಯಲ್ಲಿ ಹಿರೋಶಿಮಾಕ್ಕೆ ಕರೆತರಲು ಸಹಾಯ ಮಾಡಿದರು.

ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಒಂದು ವರ್ಷ; 35 ಕೃಷಿ ತಳಿ ಸೇರಿ ಮೋದಿ ಸರ್ಕಾರ ರೈತರಿಗೆ ಕೊಟ್ಟ ಕೊಡುಗೆಗಳೇನು? ಇಲ್ಲಿದೆ ಒಂದು ಅವಲೋಕನ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್