ಯುನೈಟೆಡ್ ಕಿಂಗ್ಡಮ್ನ ಸಂಪೂರ್ಣ ಉದ್ದವನ್ನು ಈಜಿದ ಮೊದಲ ಮಹಿಳೆಯೆಂಬ ಖ್ಯಾತಿಯನ್ನು ಜಾಸ್ಮಿನ್ ಹ್ಯಾರಿಸನ್ ತಮ್ಮದಾಗಿಸಿಕೊಂಡಿದ್ದಾರೆ
ಜುಲೈ ತಿಂಗಳಲ್ಲಿ ತಮ್ಮ ಈಜುವ ಸಾಹಸವನ್ನು ಆರಂಭಿಸಿದ ಹ್ಯಾರಿಸನ್ ತಾನು ಅತಿಹೆಚ್ಚು ಈಜಿದ ಸಮಯ 12 ಗಂಟೆ ಮತ್ತು ಕ್ರಮಿಸಿದ ಗರಿಷ್ಟ ಅಂತರ 12 ನಾಟಿಕಲ್ ಮೈಲಿ ಆಗಿತ್ತು ಎಂದು ಹೇಳಿದ್ದಾರೆ.
ಯುನೈಟೆಡ್ ಕಿಂಗ್ಡಮ್ನ ಇಡೀ ಉದ್ದವನ್ನು ಈಜಿದ ವಿಶ್ವದ ಮೊಟ್ಟ ಮೊದಲ ಮಹಿಳೆ ಎಂಬ ಹಿರಿಮೆಗೆ 23-ವರ್ಷ ವಯಸ್ಸಿನ ಜಾಸ್ಮಿನ್ ಹ್ಯಾರಿಸನ್ ಪಾತ್ರರಾಗಿದ್ದಾರೆ. ಅಕ್ಟೋಬರ್ 18 ರಂದು, ಬ್ರಿಟನ್ನಿನ ಲ್ಯಾಂಡ್ಡ್ ಎಂಡ್ ನಿಂದ ಜಾನ್ ಓ ಗೋಟ್ಸ್ ವರೆಗಿನ 900-ಮೈಲಿಗಳಷ್ಟು (1,448 ಕಿಮೀ) ಅಂತರವನ್ನು 3 ತಿಂಗಳಿಗಿಂತ ಕೊಂಚ ಜಾಸ್ತಿ ಸಮಯದಲ್ಲಿ ಈಜಿ ಪೂರ್ತಿಗೊಳಿಸುವ ಮೂಲಕ ಹ್ಯಾರಿಸನ್ ದಾಖಲೆ ನಿರ್ಮಿಸಿದ್ದಾರೆ. ಎಂದು ಬಿಬಿಸಿ ವರದಿ ಮಾಡಿದೆ.
ಅವರು ಕ್ರಮಿಸಿದ ದೂರವು 25-ಮೀಟರ್ ಉದ್ದದ ಈಜುಕೊಳವನ್ನು 58,000 ಬಾರಿ ಒಂದು ತುದಿಯಿಂದ ಮತ್ತೊಂದು ತುದಿಗೆ ಈಜುವುದಕ್ಕೆ ಸಮನಾಗಿದೆ. ಸದರಿ ಅಂತರವನ್ನು ಎರಡನೇ ಅತ್ಯಂತ ಕಡಿಮೆ ಸಮಯದಲ್ಲಿ ಈಜಿದ ಖ್ಯಾತಿಯನ್ನೂ ಹ್ಯಾರಿಸನ್ ಮುಡಿಗೇರಿಸಿಕೊಂಡಿದ್ದಾರೆ. ರಾಸ್ ಎಡ್ಲೀ ಕೇವಲ 62 ದಿನಗಳಲ್ಲಿ ಅಷ್ಟು ದೂರವನ್ನು ಈಜಿ ಕ್ರಮಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ.
ಜುಲೈ ತಿಂಗಳಲ್ಲಿ ತಮ್ಮ ಈಜುವ ಸಾಹಸವನ್ನು ಆರಂಭಿಸಿದ ಹ್ಯಾರಿಸನ್ ತಾನು ಅತಿಹೆಚ್ಚು ಈಜಿದ ಸಮಯ 12 ಗಂಟೆ ಮತ್ತು ಕ್ರಮಿಸಿದ ಗರಿಷ್ಟ ಅಂತರ 12 ನಾಟಿಕಲ್ ಮೈಲಿ ಆಗಿತ್ತು ಎಂದು ಹೇಳಿದ್ದಾರೆ.
ಉತ್ತರ ಯಾರ್ಕ್ ಶೈರ್ ನಿವಾಸಿಯಾಗಿರುವ ಹ್ಯಾರಿಸನ್ ವೇಲ್ಸ್ ಅನ್ಲೈನ್ ಗೆ ನೀಡಿದ ಹೇಳಿಕೆಯೊಂದರಲ್ಲಿ, ‘5 ಗಂಟೆಗಳ ಕಾಲ ಈಜಿದ ನಂತರ 2 ಗಂಟೆಗಳ ಕಾಲ ನಿದ್ರಿಸುವುದು ಪುನಃ ಸಾಯಂಕಾಲ ಎರಡು ಗಂಟೆಗಳ ಕಾಲ ಈಜುವುದು ಸವಾಲಿನ ಕೆಲಸವಾಗಿತ್ತು,’ ಎಂದು ಹೇಳಿದ್ದಾರೆ.
ಈಜುವಾಗ ಅವರು ಜೆಲ್ಲಿ ಮೀನುಗಳು ಒಡ್ಡುತ್ತಿದ್ದ ಅಪಾಯದೊಂದಿಗೆ ಏಗಬೇಕಿತ್ತು ಮತ್ತು ತಮ್ಮ ಮುಖವನ್ನು ಸಂರಕ್ಷಿಲು ಬಾಲಕ್ಲಾವ ವೆಟ್ ಸೂಟನ್ನು ಧರಿಸಬೇಕಿತ್ತು ಎಂದು ಅವರು ಹೇಳಿದ್ದಾರೆ. ‘ಮೀನುಗಳ ಕಡಿತದಿಂದ ದೇಹದಲ್ಲಿ ಹಬ್ಬುತ್ತಿದ್ದ ವಿಷದ ಬಗ್ಗೆ ನನ್ನಲ್ಲಿ ಹೆಚ್ಚು ಕಳವಳ ಉಂಟಾಗುತಿತ್ತು. 24 ಗಂಟೆಗಳ ಬಳಿಕ ಅದರ ತೊಂದರೆ ಜಾಸ್ತಿಯಾಗುತಿತ್ತು. ಕೈ ಕಾಲುಗಳಲ್ಲಿ ಹಬ್ಬುತ್ತಿದ್ದ ವಿಷದಿಂದಾಗಿ ಅಸಹನೀಯ ತುರಿಕೆ ಉಂಟಾಗಿ ನಿದ್ರೆ ಮಾಡೋದು ಸಾಧ್ಯವಾಗುತ್ತಿರಲಿಲ್ಲ,’ ಅಂತ ಆಕೆ ಹೇಳಿದ್ದಾರೆ.
ಮತ್ತೊಂದು ಸಂದರ್ಭದಲ್ಲಿ ಹ್ಯಾರಿಸನ್ ಗಿಂತ ಕೇವಲ ಒಂದು ಮೀಟರ್ ಆಳದಲ್ಲಿ ಶಾರ್ಕೊಂದು ಹೊಂಚು ಹಾಕುತ್ತಾ ಸಾಗಿತ್ತು. ಸ್ಕಾಟ್ಲೆಂಡಿನ ಕೊರ್ರಿರಕ್ಮನ್ ಕೊಲ್ಲಿಯಲ್ಲಿ ಒಂದು ಶಾರ್ಕ್ ಅವರನ್ನು ಹಿಂಬಾಲಿಸಿತ್ತು ಅಂತ ವೆಬ್ ಸೈಟ್ ವರದಿ ಮಾಡಿದೆ.
ಡಾಲ್ಫಿನ್, ಸೀಲ್ ಮತ್ತು ತಿಮಿಂಗಿಲಗಳ ಜೊತೆ ಈಜಬೇಕಾದ ಅಪಾಯದ ಜೊತೆಗೆ ನಿರಂತರವಾಗಿ ಚಲಿಸುತ್ತಿದ್ದ ಹಡಗು ಮಾರ್ಗಗಳಲ್ಲಿ ಈಜಬೇಕಾಗುತಿತ್ತು. ಆದರೆ, ಈ ತೊಂದರೆಗಳನ್ನು ಎದುರಿಸಬೇಕಾಗಿ ಬಂದರೂ, ಯುಕೆ ಯಲ್ಲಿನ ಎರಡು ಸಮುದ್ರ ಸಂರಕ್ಷಣಾ ದತ್ತಿ ಸಂಸ್ಥೆಗಳಾದ ಸೀ ಶೆಫರ್ಡ್ ಯುಕೆ ಮತ್ತು ಸರ್ಫರ್ಸ್ ಎಗೇನ್ಸ್ಟ್ ಸ್ವೇಜ್ ಗಳನ್ನು ಬೆಂಬಲಿಸಲು ಈ ಸವಾಲನ್ನು ಸ್ವೀಕರಿಸಿದೆ ಎಂದು ಹ್ಯಾರಿಸನ್ ಹೇಳಿರುವುದನ್ನು ವೇಲ್ಸ್ ಆನ್ಲೈನ್ ವರದಿ ಮಾಡಿದೆ.
ಸವಾಲನ್ನು ಪೂರ್ಣಗೊಳಿಸಿ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ನಂತರ ಹ್ಯಾರಿಸನ್ ತಾನು ಧರಿಸಿದ್ದ ವೆಟ್‌ಸೂಟ್‌ನಿಂದಾಗಿ ಸಾಲ್ಟ್ ಮೌತ್ ಕೊರೆತದ ನೋವಿನಿಂದ ಬಳಲಿದರು. ಸಾಲ್ಟ್ ಮೌತ್ ನಾಲಿಗೆ ಮತ್ತು ಗಂಟಲು ಮೇಲಿನ ತೆಳುವಾದ ಚರ್ಮವನ್ನು ಕಿತ್ತು ಹಾಕಿ, ಆಹಾರ ಆಗಿಯುವುದು ಮತ್ತು ನುಂಗುವುದು ಬಹಳ ಕಷ್ಟವಾಗುತ್ತದೆ.
ಈಜು ತರಬೇತುಗಾತಿ ಮತ್ತು ಮೋಟಿವೇಷನಲ್ ಸ್ಪೀಕರ್ ಆಗಿರುವ ಹ್ಯಾರಿಸನ್ ಫೆಬ್ರುವರಿ 2021 ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಏಕಾಂಗಿಯಾಗಿ ರೋಯಿಂಗ್ ಮಾಡಿದ ಅತ್ಯಂತ ಕಿರಿವಯಸ್ಸಿನ ಮಹಿಳೆ ಎಂಬ ದಾಖಲೆಯನ್ನೂ ನಿರ್ಮಿಸಿದ್ದರು.