Nobel Prize 2024: ಜಾನ್ ಜೆ. ಹಾಪ್‌ಫೀಲ್ಡ್ ಮತ್ತು ಜೆಫ್ರಿ ಇ. ಹಿಂಟನ್​​ಗೆ 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

Nobel Prize 2024 in Physics: ಜಾನ್ J. ಹಾಪ್‌ಫೀಲ್ಡ್ ಮತ್ತು ಜೆಫ್ರಿ E. ಹಿಂಟನ್ ಅವರಿಗೆ ಈ ಬಾರಿಯ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ನರಗಳ ಜಾಲದಲ್ಲಿ ಕೃತಕ ಯಂತ್ರಗಳನ್ನು ಸಕ್ರಿಯಗೊಳಿಸುವ ಬಗ್ಗೆ ನಡೆಸಿದ ಸಂಶೋಧನೆಗಳು ಮತ್ತು ಆವಿಷ್ಕಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Nobel Prize 2024: ಜಾನ್ ಜೆ. ಹಾಪ್‌ಫೀಲ್ಡ್ ಮತ್ತು ಜೆಫ್ರಿ ಇ. ಹಿಂಟನ್​​ಗೆ 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 08, 2024 | 3:58 PM

ಜಾನ್ J. ಹಾಪ್‌ಫೀಲ್ಡ್ ಮತ್ತು ಜೆಫ್ರಿ E. ಹಿಂಟನ್ ಅವರ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್​​ ನಡೆಸಿದ ಅಧ್ಯಯನಕ್ಕಾಗಿ 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸಿಕ್ಕಿದೆ. ನರಗಳ ಜಾಲದಲ್ಲಿ ಕೃತಕ ಯಂತ್ರಗಳನ್ನು ಸಕ್ರಿಯಗೊಳಿಸುವ ಬಗ್ಗೆ ನಡೆಸಿದ ಸಂಶೋಧನೆಗಳು ಮತ್ತು ಆವಿಷ್ಕಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇಬ್ಬರಿಗೂ ಕೂಡ ನೊಬೆಲ್​​ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಸ್ತುತ ಕಾಲಮಾನದಲ್ಲಿ ದೇಹದ ನರಗಳಲ್ಲಿ ಶಕ್ತಿಶಾಲಿ ಯಂತ್ರ ಕಲಿಕೆಗೆ ಇದು ಅಡಿಪಾಯವಾಗಲಿದೆ.

ಈ ಸಂಶೋಧನೆಗೆ ಸಂಬಂಧಿಸಿದಂತೆ ಜಾನ್ ಹಾಪ್‌ಫೆಲ್ಡ್ ಅವರು ಡೇಟಾ, ಅದರ ಚಿತ್ರ, ಇತರ ರೀತಿಯ ಮಾದರಿಗಳನ್ನು ಸಂಗ್ರಹಿಸಲು ಮತ್ತು ಮರುನಿರ್ಮಾಣ ಮಾಡಲು ಸಹಾಯಕ ತಂತ್ರಗಳನ್ನು ಬಳಸಿದ್ದಾರೆ. ಜೆಫ್ರಿ ಹಿಂಟನ್ ಅವರು ಜಾನ್ ಹಾಪ್‌ಫೆಲ್ಡ್ ಅವರು ನೀಡಿದ ಡೇಟಾಗಳ ಆಧಾರದ ಮೇಲೆ ಅವುಗಳ ಗುಣಲಕ್ಷಣಗಳನ್ನು ಸ್ವಾಯತ್ತವಾಗಿ ಕಂಡುಹಿಡಿಯುತ್ತಾರೆ.

ಇನ್ನು ನೆನ್ನೆ (ಅ.7) ಮೈಕ್ರೊಆರ್‌ಎನ್‌ಎ ಆವಿಷ್ಕಾರಕ್ಕಾಗಿ ಯುಎಸ್‌ನ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ವೈದ್ಯಕೀಯದಲ್ಲಿ ನೊಬೆಲ್​​​ ಪ್ರಶಸ್ತಿಯನ್ನು ನೀಡಲಾಗಿದೆ. ಇದೀಗ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಕೃತಕ ಬುದ್ಧಿಮತ್ತೆಯ ರೀತಿಯಲ್ಲೇ ಕೃತಕ ನರ ಜಾಲಗಳನ್ನು ಬಳಸಿಕೊಂಡು ಯಂತ್ರ ಕಲಿಕೆ ಮಾಡುವುದು ಎಂದರ್ಥವಾಗಿದೆ. ಈ ತಂತ್ರಜ್ಞಾನವು ಮೆದುಳಿನ ರಚನೆಯಿಂದ ಪ್ರೇರಿತವಾಗಿದೆ.

ಇದನ್ನೂ ಓದಿ: ಮೈಕ್ರೊಆರ್‌ಎನ್‌ಎ ಆವಿಷ್ಕಾರಕ್ಕಾಗಿ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್​​ಗೆ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ

ಕೃತಕ ನರಮಂಡಲದಲ್ಲಿ, ಮೆದುಳಿನ ನ್ಯೂರಾನ್‌ಗಳು ವಿಭಿನ್ನ ಮೌಲ್ಯಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಇನ್ನು ಈ ಅಧ್ಯಯನಕ್ಕೆ 1980 ರ ದಶಕದಿಂದ ಕೃತಕ ನರಗಳ ಜಾಲದ ಮಾದರಿಯನ್ನು ಬಳಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ