Nobel Prize 2024: ಮೈಕ್ರೊಆರ್‌ಎನ್‌ಎ ಆವಿಷ್ಕಾರಕ್ಕಾಗಿ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್​​ಗೆ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ

nobel prize 2024 in medicine: ಈ ವರ್ಷದ ಮೊದಲ ನೊಬೆಲ್ ಪ್ರಶಸ್ತಿಯನ್ನು ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್​​ ಪಡೆದುಕೊಂಡಿದ್ದಾರೆ. ಮೈಕ್ರೊಆರ್‌ಎನ್‌ಎ ಆವಿಷ್ಕಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇವರು ಮಾಡಿದ ಸಂಶೋಧನೆ ಏನು? ಇಲ್ಲಿದೆ ಮಾಹಿತಿ

Nobel Prize 2024: ಮೈಕ್ರೊಆರ್‌ಎನ್‌ಎ ಆವಿಷ್ಕಾರಕ್ಕಾಗಿ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್​​ಗೆ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ
ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 07, 2024 | 4:48 PM

ಮೈಕ್ರೊಆರ್‌ಎನ್‌ಎ ಮತ್ತು ಅದರ ನಂತರದ ಪ್ರತಿಲೇಖನ ಜೀನ್ ನಿಯಂತ್ರಣದಲ್ಲಿ ಮೈಕ್ರೊಆರ್‌ಎನ್‌ಎ ಪಾತ್ರದ ಅಧ್ಯಯನಕ್ಕಾಗಿ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರಕ್ಕೆ 2024ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ . ಈ ವರ್ಷದ ನೊಬೆಲ್ ಪ್ರಶಸ್ತಿಯು ಜೀನ್ ಚಟುವಟಿಕೆಯನ್ನು ಹೇಗೆ ನಿಯಂತ್ರಿಸುತ್ತದೆ ಹಾಗೂ ಆ ನಿಯಂತ್ರಣದ ಮೂಲಭೂತ ತತ್ವವನ್ನು ಕಂಡುಹಿಡಿದ ಸಾಧನೆಗಾಗಿ ಈ ಇಬ್ಬರು ವಿಜ್ಞಾನಿಗಳಿಗೆ ನೊವೆಲ್​​​​​ ಪ್ರಶಸ್ತಿ ನೀಡಿ ಗೌರವಿಸುತ್ತದೆ. ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ವಿವಿಧ ಕೋಶ ಪ್ರಕಾರಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಎಂಬುದರ ಬಗ್ಗೆ ಅಧ್ಯಯನವನ್ನು ಮಾಡಿದ್ದಾರೆ. ಇದು ವಂಶವಾಹಿ ನಿಯಂತ್ರಣದಲ್ಲಿ ಪಾತ್ರವನ್ನು ವಹಿಸುವ ಸಣ್ಣ ಆರ್‌ಎನ್‌ಎ ಅಣುಗಳ ಹೊಸ ವರ್ಗವಾದ ಮೈಕ್ರೋಆರ್‌ಎನ್‌ಎಯನ್ನು ಅವರು ಕಂಡುಹಿಡಿದ್ದಾರೆ.

ಈ ಸಂಶೋಧನೆ ಜೀನ್ ನಿಯಂತ್ರಣದ ಸಂಪೂರ್ಣ ಹೊಸ ರೂಪವನ್ನು ಪಡೆಯುತ್ತದೆ ಎಂಬುದು ಈ ವಿಜ್ಞಾನಿಗಳ ವಾದವಾಗಿದೆ. ಮಾನವರು ಸೇರಿದಂತೆ ಬಹುಕೋಶೀಯ ಜೀವಿಗಳಿಗೆ ಈ ಸಂಶೋಧನೆ ಉಪಯುಕ್ತ ಎಂದು ಹೇಳಿದೆ. ಒಂದು ಸಾವಿರಕ್ಕೂ ಹೆಚ್ಚು ಮೈಕ್ರೊಆರ್‌ಎನ್‌ಎಗಳಿಗೆ ಮಾನವ ಜೀನೋಮ್ ಸಂಕೇತಗಳು ಎಂದು ಈಗಾಗಲೇ ಈ ಸಂಶೋಧನೆಯಲ್ಲಿ ತಿಳಿಸಲಾಗಿದೆ.

ಈ ಮೂಲಕ ಇಬ್ಬರು ವಿಜ್ಞಾನಿಗಳು ಜೀನ್ ನಿಯಂತ್ರಣಕ್ಕೆ ಸಂಪೂರ್ಣವಾಗಿ ಹೊಸ ಆಯಾಮವನ್ನು ನೀಡಿದ್ದಾರೆ. ಜೀವಿಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಮತ್ತು ಕಾರ್ಯನಿರ್ವಹಿಸುತ್ತವೆ ಬಗ್ಗೆಯೂ ಈ ಮೈಕ್ರೊಆರ್‌ಎನ್‌ಎ ಹೇಳುತ್ತದೆ. ಅಕ್ಟೋಬರ್ 7 ರಿಂದ 14 ರವರೆಗೆ ಈ ನೊಬೆಲ್ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರಕ್ಕೆ ಸಂಬಂಧಸಿದಂತೆ ಮೊದಲ ಪ್ರಶಸ್ತಿಯನ್ನು ನೀಡಲಾಗಿದೆ. ನಂತರ ವಿಜ್ಞಾನ, ಸಾಹಿತ್ಯ ಮತ್ತು ಮಾನವೀಯ ಪ್ರಯತ್ನಕ್ಕೆ ನೀಡಲಾಗುತ್ತದೆ.

ಇದನ್ನೂ ಓದಿ: ನಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿ, ಜೈಶಂಕರ್​​​ಗೆ ಆಹ್ವಾನ ನೀಡಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಪ್ರತಿ ನೊಬೆಲ್ ಪ್ರಶಸ್ತಿಯನ್ನು ಮೂರು ವ್ಯಕ್ತಿಗಳಿಗೆ ನೀಡಬಹುದು, ಅದರಲ್ಲಿ ಬಂದ ಹಣವನ್ನು ಮೂರು ಜನ ಹಂಚಿಕೊಳ್ಳುತ್ತಾರೆ. ನೊಬೆಲ್ ಪ್ರಶಸ್ತಿಯನ್ನು ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಈ ಪ್ರಶಸ್ತಿಯನ್ನು ಪರಿಚಯಿಸಿದ್ದು. 2023 ರ ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕ್ಯಾಟಲಿನ್ ಕಾರಿಕೋ ಮತ್ತು ಡ್ರೂ ವೈಸ್ಮನ್ ಅವರಿಗೆ ನೀಡಲಾಯಿತು. COVID-19 ವಿರುದ್ಧ ಪರಿಣಾಮಕಾರಿ mRNA ಲಸಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡಲಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:08 pm, Mon, 7 October 24