ಹೆಂಡತಿಗೆ ಸುಳ್ಳು ಹೇಳಿ ಥೈಲ್ಯಾಂಡ್​​ಗೆ ಹೋದ ಗಂಡನ ಕಳ್ಳಾಟ ಬಯಲಾಗಿದ್ದೇ ರೋಚಕ!

ಮಲೇಷಿಯಾದ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಗೆ ತಾನು ಕೆಲಸದ ಪ್ರವಾಸಕ್ಕಾಗಿ ಥೈಲ್ಯಾಂಡ್​​ಗೆ ತೆರಳುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದ. ಅದನ್ನು ನಂಬಿದ ಹೆಂಡತಿ ಆತನನ್ನು ಥೈಲ್ಯಾಂಡ್​​ಗೆ ಕಳುಹಿಸಿಕೊಟ್ಟಿದ್ದಳು. ಆದರೆ, ಥೈಲ್ಯಾಂಡ್​​ನಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದರಿಂದ ಭಯಗೊಂಡು ಗಂಡನಿಗೆ ಫೋನ್ ಮಾಡಿದಾಗ ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಆಕೆ ಪ್ರವಾಹದಿಂದ ತನ್ನ ಗಂಡನನ್ನು ರಕ್ಷಿಸಲು ಗೆಳೆಯನಿಗೆ ಫೋನ್ ಮಾಡಿದಳು. ಆಗ ಬಯಲಾಯಿತು ಗಂಡನ ರಹಸ್ಯ.

ಹೆಂಡತಿಗೆ ಸುಳ್ಳು ಹೇಳಿ ಥೈಲ್ಯಾಂಡ್​​ಗೆ ಹೋದ ಗಂಡನ ಕಳ್ಳಾಟ ಬಯಲಾಗಿದ್ದೇ ರೋಚಕ!
Representative Image

Updated on: Dec 11, 2025 | 8:59 PM

ನವದೆಹಲಿ, ಡಿಸೆಂಬರ್ 11: ಕೆಲವೊಮ್ಮೆ ನಮ್ಮ ಅದೃಷ್ಟ ಎಷ್ಟು ಕೈಕೊಟ್ಟಿರುತ್ತದೆ ಎಂದರೆ ‘ಪಾಪಿ ಸಮುದ್ರಕ್ಕಿಳಿದರೂ ಮೊಣಕಾಲುದ್ದ ನೀರು’ ಅಂತಾರಲ್ಲ ಹಾಗೆ. ಮಲೇಷ್ಯಾದ ವ್ಯಕ್ತಿಯೊಬ್ಬನ ಹೆಂಡತಿ ಗರ್ಭಿಣಿಯಾಗಿದ್ದಳು. ಆತ ಥೈಲ್ಯಾಂಡ್​​ಗೆ ಹೋಗಿಬರಲು ಪ್ಲಾನ್ ಮಾಡಿದ್ದ. ಆಗ ಹೆಂಡತಿ ನಾನು ಕೂಡ ಬರುತ್ತೇನೆ ಎಂದಳು. ಆದರೆ, ಆಕೆ ಗರ್ಭಿಣಿಯಾದ್ದರಿಂದ ವಿಮಾನ ಸಂಚಾರ ಮಾಡುವುದು ಬೇಡವೆಂದ ಗಂಡ ತಾನು ಆಫೀಸ್ ಕೆಲಸದ ಮೇಲೆ ಥೈಲ್ಯಾಂಡ್​​ಗೆ (Thailand) ಹೋಗುತ್ತಿದ್ದೇನೆ ಎಂದು ಆಕೆಗೆ ಹೇಳಿದ್ದ. ತನ್ನಿಂದ ಗಂಡನ ಕೆಲಸಕ್ಕೆ ತೊಂದರೆಯಾಗುವುದು ಬೇಡವೆಂದು ಆಕೆ ಆತನೊಬ್ಬನನ್ನೇ ಥೈಲ್ಯಾಂಡ್​​ಗೆ ಕಳಿಸಿದ್ದಳು.

ಆದರೆ, ಆತ ಥೈಲ್ಯಾಂಡ್​​ಗೆ ತನ್ನ ಪ್ರೇಯಸಿ ಜೊತೆ ಮಜಾ ಮಾಡಲು ಹೋಗಿದ್ದ. ಹೆಂಡತಿಗೆ ಸುಳ್ಳು ಹೇಳಿ ಹೋಗಿದ್ದ ಆತ ಈ ವಿಷಯ ಆಕೆಗೆ ಗೊತ್ತಾಗಲು ಚಾನ್ಸೇ ಇಲ್ಲ ಎಂದುಕೊಂಡಿದ್ದ. ಆದರೆ, ಎಲ್ಲವೂ ನಾವಂದುಕೊಂಡ ಹಾಗೇ ಆಗುವುದಿಲ್ಲವಲ್ಲ. ಲವರ್ ಜೊತೆ 4 ದಿನಗಳಿಂದ ಥೈಲ್ಯಾಂಡ್​ನ ರೆಸಾರ್ಟ್​​ನಲ್ಲಿ ಜಾಲಿ ಮೂಡಲ್ಲಿದ್ದ ಆತನ ಹಣೆಬರಹ ಕೆಟ್ಟಿತ್ತು. ಥೈಲ್ಯಾಂಡ್​​ನಲ್ಲಿ ಪ್ರವಾಹ ಶುರುವಾಯಿತು.

ಇದನ್ನೂ ಓದಿ: Video: ಹಿಮಾಲಯ ಟ್ರೆಕ್ಕಿಂಗ್ ವೇಳೆ ಪ್ರವಾಸಿಗರಿಗೆ ಸ್ವಚ್ಛತೆಯ ಪಾಠ ಮಾಡಿದ ರಷ್ಯನ್ ಮಹಿಳೆ

ಇತ್ತ ಆತನ ಹೆಂಡತಿ ಥೈಲ್ಯಾಂಡ್​​​ನಲ್ಲಿ ಪ್ರವಾಹ ಉಂಟಾಗಿದ್ದರಿಂದ ತನ್ನ ಗಂಡ ಸುರಕ್ಷಿತವಾಗಿ ವಾಪಾಸ್ ಬರಲಿ ಎಂದು ಪ್ರಾರ್ಥಿಸುತ್ತಾ ಟಿವಿ ಆನ್ ಮಾಡಿದಳು. ಅದರಲ್ಲಿ ಪ್ರವಾಹಪೀಡಿತರ ರಕ್ಷಣಾ ಕಾರ್ಯಾಚರಣೆಯ ವಿಡಿಯೋಗಳು ಬರುತ್ತಿದ್ದವು. ಇದರಿಂದ ಆಕೆಯ ಆತಂಕ ಇನ್ನಷ್ಟು ಹೆಚ್ಚಾಯಿತು. ಥೈಲ್ಯಾಂಡ್​​ನಲ್ಲಿದ್ದ ತನ್ನ ಗೆಳೆಯನೊಬ್ಬನಿಗೆ ಫೋನ್ ಮಾಡಿ ಥೈಲ್ಯಾಂಡ್‌ನ ಹ್ಯಾಟ್ ಯಾಯ್‌ನಲ್ಲಿನ ಹೋಟೆಲ್​​ನಲ್ಲಿ ಉಳಿದುಕೊಂಡಿದ್ದ ಆಕೆಯ ಗಂಡನನ್ನು ರಕ್ಷಣೆ ಮಾಡುವಂತೆ ಆಕೆ ಮನವಿ ಮಾಡಿದಳು.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಪಾಕಿಸ್ತಾನದ ಖ್ಯಾತ ಕಂಟೆಂಟ್​ ಕ್ರಿಯೆಟರ್

ಆಕೆಯ ಆನ್‌ಲೈನ್ ಸ್ನೇಹಿತ ಆಕೆಯ ಗಂಡನ ರಕ್ಷಣಾ ಪ್ರಯತ್ನಕ್ಕೆ ವ್ಯವಸ್ಥೆ ಮಾಡಿದಾಗ ಅಸಲಿ ಸಂಗತಿ ಬಹಿರಂಗವಾಯಿತು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಆ ವ್ಯಕ್ತಿ ಕೆಲಸಕ್ಕಾಗಿ ಹ್ಯಾಟ್ ಯಾಯ್‌ನಲ್ಲಿ ಇದ್ದೇನೆ ಎಂದು ಹೆಂಡತಿಗೆ ತಿಳಿಸಿದ್ದ. ತನ್ನ ಗಂಡನೂ ಪ್ರವಾಹದಲ್ಲಿ ಸಿಲುಕಿದ್ದಾನೆ ಅದರಿಂದಲೇ ಆತ ಫೋನಿಗೂ ಸಿಗುತ್ತಿಲ್ಲ ಎಂದು ಆತಂಕಿತಳಾದ ಆಕೆ ತನ್ನ ಗೆಳೆಯನಿಗೆ ಫೋನ್ ಮಾಡಿ ಆ ರೆಸಾರ್ಟ್​​ನ ವಿಳಾಸ ಹೇಳಿ ತನ್ನ ಗಂಡನಿಗೆ ಸಹಾಯ ಮಾಡಲು ಮನವಿ ಮಾಡಿದಳು. ಆಗ ಆತ ಆಫೀಸ್ ಸಹೋದ್ಯೋಗಿ ಜೊತೆ 4 ದಿನಗಳಿಂದ ಅದೇ ಹೋಟೆಲ್​​ನಲ್ಲಿ ವಾಸವಾಗಿದ್ದ. ಇಬ್ಬರೂ ಒಂದೇ ರೂಂನಲ್ಲಿದ್ದರು ಎಂಬುದು ಆತನ ಹೆಂಡತಿಗೆ ಗೊತ್ತಾಗಿದೆ. ಥೈಲ್ಯಾಂಡ್​​ನಲ್ಲಿ ಉಂಟಾದ ಪ್ರವಾಹ ಆಕೆಯ ಗಂಡನ ಅಸಲಿ ಮುಖವನ್ನು ಬಹಿರಂಗ ಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:58 pm, Thu, 11 December 25