Chicago: ಚಿಕಾಗೋದ ವಸತಿ ಕಟ್ಟಡದಲ್ಲಿ ಭಾರೀ ಸ್ಫೋಟ, 8 ಜನರಿಗೆ ಗಾಯ
ಚಿಕಾಗೋದಲ್ಲಿ ಮಂಗಳವಾರ ವಸತಿ ಕಟ್ಟಡದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕಾಗೋ: ಚಿಕಾಗೋದಲ್ಲಿ ಮಂಗಳವಾರ ವಸತಿ ಕಟ್ಟಡದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಚಿಕಾಗೋ ಅಗ್ನಿಶಾಮಕ ಇಲಾಖೆಯು ಬೆಳಿಗ್ಗೆ 9:45ಕ್ಕೆ (ಸ್ಥಳೀಯ ಕಾಲಮಾನ) ಸ್ಫೋಟಗೊಂಡಿರುವ ಬಗ್ಗೆ ದೃಢಪಡಿಸಿದೆ ಮತ್ತು ನಗರದ ಪಶ್ಚಿಮ ಭಾಗದಲ್ಲಿರುವ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡದ ಮೇಲಿನ ಮಹಡಿಯನ್ನು ಸ್ಫೋಟದಿಂದ ಸಂಪೂರ್ಣವಾಗಿ ನಾಶಪಡಿಸಿದ ಚಿತ್ರಗಳನ್ನು ಟ್ವೀಟ್ ಮಾಡಿದೆ.
ವಾಷಿಂಗ್ಟನ್ ಬೌಲೆವರ್ಡ್ ಮತ್ತು ಸೆಂಟ್ರಲ್ ಅವೆನ್ಯೂ ಬಳಿ ಸ್ಫೋಟ ಸಂಭವಿಸಿದೆ ಎಂದು ಇಲಾಖೆ ತಿಳಿಸಿದೆ. ಸ್ಫೋಟದ ಹಿನ್ನೆಲೆ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಈ ಸ್ಫೋಟ ನಡೆದಿದೆ. ಈ ಕಟ್ಟಡ 35 ಘಟಕಗಳನ್ನು ಹೊಂದಿದೆ. ಇದೀಗ ಈ ಬಗ್ಗೆ ಸಿಎಫ್‌ಡಿ ಒಎಫ್‌ಐ ಮೂಲಕ ತನಿಖೆ ನಡೆಯುತ್ತಿದೆ. ಈ ಕಾರ್ಯಚರಣೆಗೆ ಎಟಿಎಫ್ ಮತ್ತು ಸಿಪಿಡಿಯಿಂದ ಸಹಾಯ ಮಾಡಲಾಗಿದೆ ಎಂದು ಚಿಕಾಗೋ ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ. ಸ್ಫೋಟ ಸಂಭವಿಸಿದ ಸ್ಥಳದ ಪಕ್ಕದಲ್ಲಿರುವ ಕಟ್ಟಡದಲ್ಲಿರುವ ಜನರನ್ನು ತೆರವು ಮಾಡಲಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡದಲ್ಲಿರುವ ಜನರನ್ನು ಸುರಕ್ಷಿತವಾಗಿ ಹೊರಹಾಕಿದ್ದೇವೆ ಎಂದು ಎಂದು ಫರ್ಮನ್ ಹೇಳಿದರು. ಕಟ್ಟಡದ ನಾಲ್ಕನೇ ಮಹಡಿ ಕುಸಿದಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಪ್ರಕಾರ ಇಬ್ಬರು ಮಹಿಳೆಯರು ಮತ್ತು ಪುರುಷರಿಗೆ ಗಾಯವಾಗಿದೆ. ಹತ್ತು ಆಂಬ್ಯುಲೆನ್ಸ್‌ಗಳು ಮತ್ತು 135 ಪ್ರಥಮ ಪ್ರತಿಸ್ಪಂದಕರನ್ನು ಘಟನಾ ಸ್ಥಳಕ್ಕೆ ಕರೆಸಲಾಯಿತು ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಟ್ಟಡದ ದೊಡ್ಡ ದೊಡ್ಡ ಗಾತ್ರದ ಅವಶೇಷಗಳು ಪಾದಚಾರಿ ಮಾರ್ಗ, ಬೀದಿಗಳು ಮತ್ತು ಹಲವಾರು ಕಾರುಗಳ ಮೇಲೆ ಬಿದ್ದಿದೆ.
ಸಿಬಿಎಸ್ ನ್ಯೂಸ್ ಪ್ರಕಾರ, ಕಟ್ಟಡವು ಕಳೆದ 12 ವರ್ಷಗಳಲ್ಲಿ ಪದೇ ಪದೇ ವಾರ್ಷಿಕ ತಪಾಸಣೆ ಮಾಡುವಲ್ಲಿ ವಿಫಲವಾಗಿದೆ. 2017 ಮತ್ತು 2018ರಲ್ಲಿ ಹೊಗೆ ಪತ್ತೆಕಾರಕಗಳನ್ನು ಸರಿಪಡಿಸಲು ಅಥವಾ ಬದಲಾಯಿಸಲು ವಿಫಲವಾಗಿದೆ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸಲು ಉಲ್ಲೇಖಗಳನ್ನು ಸ್ವೀಕರಿಸಿದೆ.
Published On - 10:12 am, Wed, 21 September 22