26/11ರ ಮುಂಬೈ ದಾಳಿಯ ಯೋಜಕ ಜಕಿಯೂರ್ ರೆಹಮಾನ್ ಲಖ್ವಿ ಪಾಕ್ನಲ್ಲಿ ಅರೆಸ್ಟ್
ಡಿಸೆಂಬರ್ ಮೊದಲ ವಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ನಿರ್ಬಂಧಗಳ ಸಮಿತಿ, ಜಕಿಯೂರ್ ರೆಹಮಾನ್ ಲಖ್ವಿಗೆ ಮಾಸಿಕ 1.5 ಲಕ್ಷ ರೂಪಾಯಿಯನ್ನು ಮೂಲಭೂತ ವೆಚ್ಚಗಳಿಗಾಗಿ ನೀಡಲು ಪಾಕ್ ಸರ್ಕಾರಕ್ಕೆ ಅನುಮೋದನೆ ನೀಡಿತ್ತು
ನವದೆಹಲಿ: 26/11ರ ಮುಂಬೈ ದಾಳಿಯ ಯೋಜಕ, ಲಷ್ಕರ್ ಎ ತೊಯ್ಬಾದ ಕಮಾಂಡರ್ ಜಕಿಯೂರ್ ರೆಹಮಾನ್ ಲಖ್ವಿ ಪಾಕಿಸ್ತಾನದಲ್ಲಿ ಬಂಧಿತನಾಗಿದ್ದಾನೆ.
ಲಖ್ವಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದ. ಇದೇ ಹಣದಲ್ಲಿ ಆತ ಉಗ್ರರಿಗಾಗಿ ಔಷಧಾಲಯ ನಡೆಸುತ್ತಿದ್ದ. ಈ ಬಗ್ಗೆ ಪಂಜಾಬ್ ಕೌಂಟರ್ ಟೆರರ್ ಡಿಪಾರ್ಟ್ಮೆಂಟ್ ಲಾಹೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿತ್ತು. ಲಷ್ಕರ್ ಎ ತೊಯ್ಬಾದ ಕಾರ್ಯಾಚರಣೆಗಳ ಕಮಾಂಡರ್ ಆಗಿರುವ ಈತನನ್ನು ವಿಶ್ವಸಂಸ್ಥೆ, 2008ರಲ್ಲಿ ಮುಂಬೈ ದಾಳಿ ನಂತರ ಜಾಗತಿಕ ಉಗ್ರ ಎಂದು ಗುರುತಿಸಿದೆ. ಆರು ವರ್ಷ ಪಾಕಿಸ್ತಾನದ ಜೈಲಿನಲ್ಲಿ ಇದ್ದ ಈತ 2015ರ ಏಪ್ರಿಲ್ನಲ್ಲಿ ಬಿಡುಗಡೆಯಾಗಿದ್ದ.
ಡಿಸೆಂಬರ್ ಮೊದಲ ವಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ನಿರ್ಬಂಧಗಳ ಸಮಿತಿ, ಜಕಿಯೂರ್ ರೆಹಮಾನ್ ಲಖ್ವಿಗೆ ಮಾಸಿಕ 1.5 ಲಕ್ಷ ರೂಪಾಯಿಯನ್ನು ಮೂಲಭೂತ ವೆಚ್ಚಗಳಿಗಾಗಿ ನೀಡಲು ಪಾಕ್ ಸರ್ಕಾರಕ್ಕೆ ಅನುಮೋದನೆ ನೀಡಿತ್ತು. ಈ ಆದೇಶ ಹೊರಬಿದ್ದ ಕೆಲವೇ ದಿನಗಳಲ್ಲಿ ಲಖ್ವಿ ಬಂಧಿಸಲ್ಪಟ್ಟಿದ್ದಾನೆ.
ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ, ಆದರೆ ಜನರ ಮೇಲೆ ಬಿದ್ದು 7 ಮಂದಿಗೆ ಗಾಯ