
ಕಠ್ಮಂಡು, ಆಗಸ್ಟ್ 30: ಪ್ರಕೃತಿಯ ಮುನಿಸಿಗೆ ಇಡೀ ಊರಿಗೆ ಊರೇ ಕೊಚ್ಚಿಹೋಗಿ, ಸಾವಿರಾರು ಜೀವಗಳು ಕಣ್ಮರೆಯಾಗಿರುವ ಕರಾಳ ಪ್ರವಾಹ(Flood)ದ ನಡುವೆ ಆ 97 ವರ್ಷದ ಮಹಿಳೆಯ ಮುಖ ಇಡೀ ಜಗತ್ತಿಗೆ ಅಚ್ಚರಿ ಮತ್ತು ಭರವಸೆಯ ಸಂಕೇತವಾಗಿ ಕಾಣಿಸುತ್ತಿದೆ. ಕುಸಿದುಬಿದ್ದ ವೃದ್ಧಾಶ್ರಮದ ಕಲ್ಲು-ಮಣ್ಣುಗಳ ರಾಶಿಯಡಿ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಸಾವಿನೊಂದಿಗೆ ಕಾದಾಡಿದ ಗುಣ ಮಾಯಾ ಬೊಹರಾ, ಕೊನೆಗೆ ಜೆಸಿಬಿ ಯಂತ್ರದ ಕಬ್ಬಿಣದ ಬಕೆಟ್‌ನಲ್ಲಿ ರಕ್ಷಣಾ ಸಿಬ್ಬಂದಿಯ ಆಸರೆಯೊಂದಿಗೆ ಹೊರಬಂದ ಕ್ಷಣ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿತ್ತು.
ಮೈತುಂಬಾ ಮೆತ್ತಿಕೊಂಡಿದ್ದ ಮಣ್ಣು, ಸುಸ್ತಾಗಿದ್ದರೂ ಮುಖದಲ್ಲಿದ್ದ ಆ ಗಟ್ಟಿತನ ಯುದ್ಧ ಗೆದ್ದು ಬಂದ ಅಪ್ಪಟ ಯೋಧನಂತೆಯೇ ಇತ್ತು. ಈ ವಯಸ್ಸಿನಲ್ಲೂ ಆ ಭೀಕರ ಅವಶೇಷಗಳ ಮಧ್ಯೆ ಜೀವ ಉಳಿಸಿಕೊಂಡು ಆಸ್ಪತ್ರೆಯ ಹಾಸಿಗೆಯ ಮೇಲೆ ಚೇತರಿಸಿಕೊಳ್ಳುತ್ತಿರುವ ಗುಣ ಮಾಯಾ ಅವರ ಕಥೆ, ವಿಪತ್ತಿನ ಕತ್ತಲೆಯಲ್ಲೂ ಮನುಷ್ಯನ ಬದುಕುವ ಅದಮ್ಯ ಇಚ್ಛಾಶಕ್ತಿಯನ್ನು ಸಾಬೀತುಪಡಿಸಿದೆ.
ನೇಪಾಳದಲ್ಲಿ ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಹಠಾತ್ ಪ್ರವಾಹವು ನೂರಾರು ಗ್ರಾಮಗಳನ್ನು ಧ್ವಂಸಗೊಳಿಸಿರುವ ನಡುವೆ, 97 ವರ್ಷದ ವೃದ್ಧೆಯೊಬ್ಬರ ಪವಾಡಸದೃಶ ಬದುಕುಳಿಯುವಿಕೆ ಇಡೀ ವಿಶ್ವದ ಗಮನ ಸೆಳೆದಿದ್ದು, ದುರಂತದ ನಡುವೆ ಅಚಲ ಭರವಸೆಯ ಸಂಕೇತವಾಗಿ ಹೊರಹೊಮ್ಮಿದೆ.
ಮತ್ತಷ್ಟು ಓದಿ: ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ಕಠ್ಮಂಡುವಿನಿಂದ ಧಾವಿಸಿದ ಅವರ ಸೋದರಳಿಯ ದೀಪಕ್ ಬೊಹರಾ ಹಾಗೂ ಕುಟುಂಬಸ್ಥರು ಮರಗಳಿಗೆ ಹಗ್ಗ ಕಟ್ಟಿ ಕೆಸರಿನಲ್ಲಿ ಇಳಿದು ಶೋಧ ನಡೆಸಿದಾಗ ಅಜ್ಜಿ ಜೀವಂತವಾಗಿರುವುದು ಪತ್ತೆಯಾಯಿತು. ಜೆಸಿಬಿ ಯಂತ್ರದ ಮೂಲಕ ಹೊರತಂದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. “ಆ ಭೀಕರ ಅವಶೇಷಗಳಡಿಯಲ್ಲೂ ಅಜ್ಜಿ ಹೇಗೆ ಉಸಿರಾಡುತ್ತಿದ್ದರು ಎಂಬುದೇ ಪವಾಡ” ಎಂದು ವೈದ್ಯರು ತಿಳಿಸಿದ್ದಾರೆ.
ಟಿಬೆಟ್ ಗಡಿಯ ತಿಮುರೆ ಪಟ್ಟಣದಲ್ಲಿ ಬೆಟ್ಟ ನಡುಗಿದಾಗ ಭೂಕಂಪವೆಂದು ಭಾವಿಸಿ ಓಡಿದ ರಾಜು, ಕಣ್ಣೆದುರೇ ಇಡೀ ಮಾರುಕಟ್ಟೆ ಹಾಗೂ ಠಾಣೆ ನದಿಯ ಪಾಲಾಗುವುದನ್ನು ನೋಡಿದ್ದರು. 500 ಮೀಟರ್ ಎತ್ತರದ ಕಾಡಿನಲ್ಲಿ ರಾತ್ರಿ ಕಳೆದು, ಮರುದಿನ ಸೇನಾ ಹೆಲಿಕಾಪ್ಟರ್ ಮೂಲಕ ಮರುಜನ್ಮ ಪಡೆದರು.
ವಿಡಿಯೋ
RESCATAN CON VIDA A MUJER DE 97 AÑOS TRAS CASI 24 HORAS BAJO LOS ESCOMBROS 🥹🇳🇵
Contra todo pronóstico, Guna Maya Bohara, de 97 años, fue rescatada con vida después de permanecer cerca de 24 horas atrapada bajo lodo y escombros tras las devastadoras inundaciones en Nepal.
— EnBoga (@EnBogaMx) August 29, 2026
ತುಳಸಿ ಬಹದ್ದೂರ್ ಭಂಡಾರಿ: ಡೋಲಾಖಾ ನಿವಾಸಿ ಭಂಡಾರಿ ಓಡುತ್ತಿದ್ದಂತೆ ಅವರ ಹಿಂಬದಿಯಲ್ಲೇ ಕಪ್ಪು ಕೆಸರಿನ ರಾಶಿ ಬಂದು ಮನೆಗಳನ್ನು ಅಪ್ಪಳಿಸಿ ಪುಡಿಪುಡಿ ಮಾಡಿತು. ಇಂಚುಗಳ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾದರು. ಈವರೆಗೆ 676 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 300 ಕ್ಕೂ ಹೆಚ್ಚು ಭಾರತೀಯರು ಸೇರಿದಂತೆ ಸುಮಾರು 3 ಸಾವಿರ ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ನೇಪಾಳದ ಹಣಕಾಸು ಸಚಿವ ಸ್ವರ್ಣಿಮ್ ವ್ಯಾಗ್ಲೆ ಅವರ ಪ್ರಕಾರ, ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಸೇತುವೆ ಹಾಗೂ ಜಲವಿದ್ಯುತ್ ಯೋಜನೆಗಳ ಪುನರ್ನಿರ್ಮಾಣಕ್ಕೆ 4 ರಿಂದ 5 ಬಿಲಿಯನ್ ಡಾಲರ್ ಅಗತ್ಯವಿದ್ದು, ಇದು ದೇಶದ ಒಟ್ಟು ಆರ್ಥಿಕತೆಯ (GDP) ಶೇಕಡಾ 10 ರಷ್ಟಾಗಿದೆ.
ಪೋಸ್ಟ್
STORY | Swept away, buried and stranded: Nepal flood survivors recall desperate escapes
The images of a mud-covered elderly woman being carried to safety in the scoop of a digger have come to symbolise extraordinary accounts of survival in Nepal’s devastating flash floods.
The… pic.twitter.com/eigHeCRhU2
— Press Trust of India (@PTI_News) August 29, 2026
ಹಿಮಾಲಯದ ಕಣಿವೆಗಳಲ್ಲಿ ಮತ್ತೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಹೆಲಿಕಾಪ್ಟರ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಸವಾಲು ಸೃಷ್ಟಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ