Nepal Earthquake: ನೇಪಾಳದಲ್ಲಿ ಅವಳಿ ಭೂಕಂಪ: ಹಿಮಾಲಯದಲ್ಲಿ ಕಂಪನದ ಅನುಭವ

ಭಾರತದ ನೆರೆ ರಾಷ್ಟ್ರ ನೇಪಾಳ(Nepal)ದಲ್ಲಿ ಅವಳಿ ಭೂಕಂಪ(Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.8 ಹಾಗೂ 5.9 ತೀವ್ರತೆ ದಾಖಲಾಗಿದೆ.

Nepal Earthquake: ನೇಪಾಳದಲ್ಲಿ ಅವಳಿ ಭೂಕಂಪ: ಹಿಮಾಲಯದಲ್ಲಿ ಕಂಪನದ ಅನುಭವ
ಭೂಕಂಪ

Updated on: Apr 28, 2023 | 9:30 AM

ಭಾರತದ ನೆರೆ ರಾಷ್ಟ್ರ ನೇಪಾಳ(Nepal)ದಲ್ಲಿ ಅವಳಿ ಭೂಕಂಪ(Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.8 ಹಾಗೂ 5.9 ತೀವ್ರತೆ ದಾಖಲಾಗಿದೆ. ನೇಪಾಳ ರಾಜಧಾನಿ ಕಠ್ಮಂಡುವಿನ ವಾಯುವ್ಯದಲ್ಲಿ 800 ಕಿಮೀ ದೂರದಲ್ಲಿ ಇರುವ ಬಜೂರಾ ಜಿಲ್ಲೆಯ ದಹಾಕೋಟ್‌ದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ. ಮೊದಲ ಭೂಕಂಪವು ರಾತ್ರಿ 11.58ಕ್ಕೆ ಅಪ್ಪಳಿಸಿತ್ತು, ಮತ್ತೊಂದು ಮಧ್ಯರಾತ್ರಿ 1.30ರ ವೇಳೆಗೆ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಬಜೂರಾದ ಜಿಲ್ಲಾ ಪೊಲೀಸ್ ಕಚೇರಿ ಪ್ರಕಾರ, ಭೂಕಂಪನದ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ನಡುಗಿದ್ದು, ಸ್ಥಳೀಯರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಪಶ್ಚಿಮ ನೇಪಾಳದಲ್ಲಿನ ಬಜೂರಾ ನೆರೆಹೊರೆಯ ಜಿಲ್ಲೆಗಳಲ್ಲೂ ಭೂಮಿ ನಡುಗಿದ ಅನುಭವ ಜನರಿಗೆ ಆಗಿದೆ. ನಾವು ಭೂಕಂಪದ ಪರಿಣಾಮವನ್ನು ಖಚಿತಪಡಿಸುತ್ತಿದ್ದೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ಓದಿ: Fiji Earthquake: ಫಿಜಿಯಲ್ಲಿ ಕಂಪಿಸಿದ ಭೂಮಿ: 6.3 ತೀವ್ರತೆ ದಾಖಲು

2015ರಲ್ಲಿ ವಿನಾಶಕಾರಿ ಅವಳಿ ಭೂಕಂಪ
ಭೂಕಂಪ ಸೂಕ್ಷ್ಮ ಪ್ರದೇಶವೆಂದು ನೇಪಾಳವನ್ನು ಗುರುತಿಸಲಾಗಿದೆ. ಏಪ್ರಿಲ್ 2015ರಲ್ಲಿ ನೇಪಾಳದಲ್ಲಿ ಇದೇ ರೀತಿ 7.8 ಮತ್ತು 8.1 ತೀವ್ರತೆಯ ಅವಳಿ ಭೂಕಂಪಗಳು ಸಂಭವಿಸಿದ್ದವು. ದಶಕಗಳಲ್ಲಿಯೇ ಅತ್ಯಂತ ವಿನಾಶಕಾರಿ ದುರಂತವಾಗಿದ್ದ ಅದರಲ್ಲಿ 8,964 ಜನರು ಸಾವನ್ನಪ್ಪಿದ್ದರೆ, 21,952 ಜನರು ಗಾಯಗೊಂಡಿದ್ದರು. ಪ್ರಬಲ ಭೂಕಂಪಗಳಿಂದ ನೇಪಾಳದ ಹಲವು ಜಿಲ್ಲೆಗಳಲ್ಲಿ ಸಾವಿರಾರು ಮನೆಗಳು ನೆಲಸಮವಾಗಿದ್ದವು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:30 am, Fri, 28 April 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us