ನ್ಯೂ ಇಯರ್ ಸೆಲೆಬ್ರೇಷನ್​: ಗಗನಚುಂಬಿ ಕಟ್ಟಡ ಬುರ್ಜ್​ ಖಲೀಫಾ ಕಲರ್​ಫುಲ್

ದುಬೈನ್ ಬುರ್ಜ್​ ಖಲೀಫಾ ಬಳಿ ಹೊಸ ವರ್ಷಕ್ಕೆ ವರ್ಣರಂಜಿತ ವೆಲ್​ಕಮ್ ಸಿಕ್ಕಿದೆ. ಗಗನಚುಂಬಿ ಕಟ್ಟಡದ ಮೇಲೆ ಬಣ್ಣ ಬಣ್ಣದ ಲೈಟಿಂಗ್ಸ್​ ಬಿಡುವ ಮೂಲಕ 2020ನ್ನು ಬರ ಮಾಡಿಕೊಳ್ಳಲಾಯ್ತು. ಬಳಿಕ ಪಟಾಕಿ ಸಿಡಿಸೋ ಮೂಲಕ ಹೊಸ ವರ್ಷವನ್ನ ಸಂಭ್ರಮಿಸಲಾಯ್ತು. ಪಟಾಕಿಯ ರಂಗಿನಾಟ: ಥೈಲ್ಯಾಂಡ್​​ನ ಚಾವೋ ಫ್ರಾಯಾ ನದಿ ಬಳಿ ಹೊಸ ವರ್ಷವನ್ನ ಅದ್ಧೂರಿಯಾಗಿ ವೆಲ್​ಕಮ್ ಮಾಡಲಾಯ್ತು. ನ್ಯೂ ಇಯರ್ ಹಿನ್ನೆಲೆ ನದಿ ಬಳಿ ಸಿಡಿಸಿದ ಬಣ್ಣ ಬಣ್ಣದ ಪಟಾಕಿ ನೋಡುಗರ ಮನಸೋರೆಗೊಂಡಿತು. ಆಗಸದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಯ ರಂಗಿನಾಟ […]

ನ್ಯೂ ಇಯರ್ ಸೆಲೆಬ್ರೇಷನ್​: ಗಗನಚುಂಬಿ ಕಟ್ಟಡ ಬುರ್ಜ್​ ಖಲೀಫಾ ಕಲರ್​ಫುಲ್
ಸಾಧು ಶ್ರೀನಾಥ್​

Updated on: Jan 01, 2020 | 8:55 AM

ದುಬೈನ್ ಬುರ್ಜ್​ ಖಲೀಫಾ ಬಳಿ ಹೊಸ ವರ್ಷಕ್ಕೆ ವರ್ಣರಂಜಿತ ವೆಲ್​ಕಮ್ ಸಿಕ್ಕಿದೆ. ಗಗನಚುಂಬಿ ಕಟ್ಟಡದ ಮೇಲೆ ಬಣ್ಣ ಬಣ್ಣದ ಲೈಟಿಂಗ್ಸ್​ ಬಿಡುವ ಮೂಲಕ 2020ನ್ನು ಬರ ಮಾಡಿಕೊಳ್ಳಲಾಯ್ತು. ಬಳಿಕ ಪಟಾಕಿ ಸಿಡಿಸೋ ಮೂಲಕ ಹೊಸ ವರ್ಷವನ್ನ ಸಂಭ್ರಮಿಸಲಾಯ್ತು.

ಪಟಾಕಿಯ ರಂಗಿನಾಟ:
ಥೈಲ್ಯಾಂಡ್​​ನ ಚಾವೋ ಫ್ರಾಯಾ ನದಿ ಬಳಿ ಹೊಸ ವರ್ಷವನ್ನ ಅದ್ಧೂರಿಯಾಗಿ ವೆಲ್​ಕಮ್ ಮಾಡಲಾಯ್ತು. ನ್ಯೂ ಇಯರ್ ಹಿನ್ನೆಲೆ ನದಿ ಬಳಿ ಸಿಡಿಸಿದ ಬಣ್ಣ ಬಣ್ಣದ ಪಟಾಕಿ ನೋಡುಗರ ಮನಸೋರೆಗೊಂಡಿತು. ಆಗಸದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಯ ರಂಗಿನಾಟ ಕಣ್ಣಿಗೆ ಹಬ್ಬದಂತಿತ್ತು.

ಪಾಕ್​ಗೆ ಸೇನಾ ಮುಖ್ಯಸ್ಥ ವಾರ್ನಿಂಗ್:
ನೆರೆಯ ದೇಶ ಪಾಕಿಸ್ತಾನ ಭಯೋತ್ಪಾದನೆಯನ್ನೇ ತನ್ನ ರಾಷ್ಟ್ರ ನೀತಿಯನ್ನಾಗಿ ಮಾಡಿಕೊಂಡಿದೆ. ಒಂದ್ವೇಳೆ ನಮ್ಮ ಮೇಲೆ ದಾಳಿ ನಡೆಸಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಅಂತ ನೂತನ ಸೇನಾ ಮುಖ್ಯಸ್ಥ ಮನೋಜ್‌ ಮುಕುಂದ್ ನರಾವಣೆ ಎಚ್ಚರಿಸಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us