ಭಾರತದೆದುರು ಬಾಗಿದ ಯುಕೆ: ಕೊವಿಶೀಲ್ಡ್ 2 ಡೋಸ್ ಲಸಿಕೆ ಪಡೆದು ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲವೆಂದ ಇಂಗ್ಲೆಂಡ್ ಸರ್ಕಾರ
ಇಂಗ್ಲೆಂಡ್ ಸರ್ಕಾರದ ಮಾರ್ಗಸೂಚಿಗೆ ಸಂಬಂಧಪಟ್ಟಂತೆ ಭಾರತ ಸರ್ಕಾರ ನಿರಂತರ ಮಾತುಕತೆ ನಡೆಸಿದಾಗ್ಯೂ ಕೂಡ ಯುಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯದೆ ಇದ್ದಾಗ ಭಾರತ ಕೂಡ ಇದೇ ನಿಯಮವನ್ನು ಜಾರಿಗೊಳಿಸಿತ್ತು.
ಭಾರತದ ಕೊವಿಶೀಲ್ಡ್ ಲಸಿಕೆ (Covishield Vaccine)ಯನ್ನು ನಾವು ಅನುಮೋದಿಸುತ್ತೇವೆ. ಆದರೂ ಭಾರತದಿಂದ ನಮ್ಮ ದೇಶಕ್ಕೆ ಬರುವವರು ಕಡ್ಡಾಯವಾಗಿ 10 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕು ಎಂಬ ನೀತಿಯನ್ನು ಜಾರಿಮಾಡಿದ್ದ ಯುಕೆ (ಇಂಗ್ಲೆಂಡ್) ಸರ್ಕಾರ ಇದೀಗ ಅದನ್ನು ಹಿಂಪಡೆದಿದೆ. ಅಕ್ಟೋಬರ್ 11ರಿಂದ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿಯನ್ನು ಯುಕೆ ಬಿಡುಗಡೆ ಮಾಡಿದ್ದು, ಕೊವಿಶೀಲ್ಡ್ ಎರಡೂ ಡೋಸ್ ಲಸಿಕೆ ಮತ್ತು ಯುಕೆ ಸರ್ಕಾರ (UK Government) ಅನುಮೋದನೆ ನೀಡಿರುವ ಯಾವುದೇ ಲಸಿಕೆಯನ್ನು ಪಡೆದು ಭಾರತದಿಂದ ಇಂಗ್ಲೆಂಡ್ಗೆ ಬರುವ ಪ್ರಯಾಣಿಕರು ಕ್ವಾರಂಟೈನ್ಗೆ ಒಳಗಾಗಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಸಂಬಂಧ ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಅಲೆಕ್ಸ್ ಎಲ್ಲಿಸ್, ಭಾರತದ ಕೊವಿಶೀಲ್ಡ್ ಲಸಿಕೆಯನ್ನು ಎರಡೂ ಡೋಸ್ ಪಡೆದವರು ಹಾಗೂ ಯುಕೆ ಸರ್ಕಾರ ಅನುಮೋದನೆ ನೀಡಿರುವ ಯಾವುದೇ ಕೊವಿಡ್ 19 ಲಸಿಕೆ ಪಡೆದವರು ಭಾರತದಿಂದ ಇಂಗ್ಲೆಂಡ್ಗೆ ಬಂದರೆ ಕ್ವಾರಂಟೈನ್ಗೆ ಒಳಗಾಗುವುದು ಬೇಡ ಎಂದಿದ್ದಾರೆ. ಇನ್ನು ಬ್ರಿಟನ್ ಸರ್ಕಾರ ಈ ಹಿಂದೆ ಕೊವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಲು ಹಿಂದೇಟು ಹಾಕಿತ್ತು. ಆದರೆ ಭಾರತ ತನ್ನು ನಿಲುವನ್ನು ಕಠಿಣವಾಗಿಸಿದ ಮೇಲೆ ಸೆಪ್ಟೆಂಬರ್ 22ರಂದು ಲಸಿಕೆಗೆ ಅನುಮೋದನೆ ನೀಡಿತ್ತು. ಆದರೆ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಭಾರತ ನೀಡುತ್ತಿರುವ ಸರ್ಟಿಫಿಕೇಟ್ ಬಗ್ಗೆ ನಮಗೆ ಆಕ್ಷೇಪವಿದೆ ಎಂದು ಹೇಳಿತ್ತು. ಅದರಲ್ಲಿ ಜನ್ಮದಿನಾಂಕದ ಉಲ್ಲೇಖವಿಲ್ಲ ಎಂದು ಹೇಳಿತ್ತು. ನಂತರ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಆವೃತ್ತಿಯ ಕೊವಿಡ್ 19 ಲಸಿಕೆಯನ್ನೂ ಭಾರತ ಬಿಡುಗಡೆ ಮಾಡಿತ್ತು. ಅಷ್ಟಾದರೂ ಯುಕೆ ಸರ್ಕಾರ ಭಾರತದ ಪ್ರಯಾಣಿಕರಿಗೆ 10 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಿತ್ತು.
ಭಾರತದಿಂದಲೂ ಇದೇ ನಿಯಮ ಜಾರಿ ಇಂಗ್ಲೆಂಡ್ ಸರ್ಕಾರದ ಮಾರ್ಗಸೂಚಿಗೆ ಸಂಬಂಧಪಟ್ಟಂತೆ ಭಾರತ ಸರ್ಕಾರ ನಿರಂತರ ಮಾತುಕತೆ ನಡೆಸಿದಾಗ್ಯೂ ಕೂಡ ಯುಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯದೆ ಇದ್ದಾಗ ಭಾರತ ಕೂಡ ಇದೇ ನಿಯಮವನ್ನು ಜಾರಿಗೊಳಿಸಿತ್ತು. ಇಂಗ್ಲೆಂಡ್ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೂ 10 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯ. ಭಾರತ ಪ್ರಯಾಣಕ್ಕೆ 72 ಗಂಟೆ ಮುಂಚಿತವಾಗಿ RT-PCR ಪರೀಕ್ಷೆಗೆ ಒಳಗಾಗಬೇಕು. ಭಾರತಕ್ಕೆ ಬಂದ ತಕ್ಷಣವೇ ಏರ್ ಪೋರ್ಟ್ ನಲ್ಲಿ RT-PCR ಪರೀಕ್ಷೆಗೆ ಒಳಗಾಗಬೇಕು. ಲಸಿಕೆ ಪಡೆದಿರಲಿ, ಪಡೆಯದೇ ಇರಲಿ, RT-PCR ಪರೀಕ್ಷೆ, ಕ್ವಾರಂಟೈನ್ ಕಡ್ಡಾಯ ಎಂದು ಹೇಳಿತ್ತು.
ಭಾರತ ಹಾಕಿ ತಂಡಗಳಿಂದಲೂ ತಿರುಗೇಟು ಈ ಮಧ್ಯೆ ಇನ್ನೊಂದು ಮಹತ್ವದ ಬೆಳವಣಿಗೆಯಾಗಿತ್ತು. ಇಂಗ್ಲೆಂಡ್ನ ಬರ್ಮಿಂಗ್ಹ್ಯಾಂನಲ್ಲಿ ಬರುವ ವರ್ಷದ ಜುಲೈ-ಆಗಸ್ಟ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ಭಾರತದ ಹಾಕಿ ತಂಡಗಳನ್ನು (ಪುರುಷ ಮತ್ತು ಮಹಿಳೆ) ಕಳಿಸದೆ ಇರಲು ಭಾರತ ನಿರ್ಧರಿಸಿತ್ತು. ಇದಕ್ಕೆ ಕಾರಣ ಯುಕೆ ವಿಧಿಸಿರುವ ಕ್ವಾರಂಟೈನ್ ನಿಯಮ ಎಂದೇ ಹೇಳಲಾಗಿತ್ತು. ಅದಕ್ಕೂ ಮೊದಲು ಇಂಗ್ಲೆಂಡ್ ಭಾರತದಲ್ಲಿ ನಡೆಯಲಿರುವ ಜ್ಯೂನಿಯರ್ ಹಾಕಿ ವರ್ಲ್ಡ್ಕಪ್ ಟೂರ್ನಿಯಿಂದ ಹಿಂದೆ ಸರಿದಿತ್ತು. ಅದಕ್ಕೆ ತಿರುಗೇಟು ಎಂಬಂತೆ ಭಾರತ ಹಾಕಿ ತಂಡಗಳು ಕಾಮನ್ವೆಲ್ತ್ ಗೇಮ್ಸ್ನಿಂದ ಹಿಂದೆ ಸರಿದಿದ್ದವು.
No quarantine for Indian ?? travellers to UK ?? fully vaccinated with Covishield or another UK-approved vaccine from 11 October.
Thanks to Indian government for close cooperation over last month. pic.twitter.com/cbI8Gqp0Qt
— Alex Ellis (@AlexWEllis) October 7, 2021
ಇದನ್ನೂ ಓದಿ: Coal shortage in RTPS: ಆರ್ಟಿಪಿಎಸ್ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ; ಕತ್ತಲಲ್ಲಿ ಮುಳುಗಲಿದೆ ಅರ್ಧ ರಾಜ್ಯ