ಕ್ಲಾಡಿಯಾ ಗೋಲ್ಡಿನ್ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ನೀಡಲಾಗುತ್ತದೆ. ಅರ್ಥಶಾಸ್ತ್ರದಲ್ಲಿ ತಮ್ಮದೇ ಆಗಿರುವ ಅನಮ್ಯ ಸಾಧನೆಗಾಗಿ ಮತ್ತು ಆರ್ಥಿಕ ಕ್ಷೇತ್ರದ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ ಕ್ಲಾಡಿಯಾ ಗೋಲ್ಡಿನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಆರ್ಥಿಕ ವಿಜ್ಞಾನಕ್ಕೆ 1969 ರಿಂದ 2022 ರವರೆಗೆ ಒಟ್ಟು 54 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. 92 ಪುರಸ್ಕೃತರ ಪೈಕಿ 25 ಮಂದಿ ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಇನ್ನು ಮಹಿಳೆಯರ ಪೈಕಿ ಇಬ್ಬರು ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಆಗಿದ್ದರು. 2009ರಲ್ಲಿ ಎಲಿನಾರ್ ಓಸ್ಟ್ರೋಮ್. 2019ರಲ್ಲಿ ಎಸ್ತರ್ ಡುಫ್ಲೋ. ಇದೀಗ ಈ ಪ್ರಶಸ್ತಿಯನ್ನು ಪಡೆದ ಮೂರನೇ ಮಹಿಳೆ ಎಂಬ ಗೌರವಕ್ಕೆ ಕ್ಲಾಡಿಯಾ ಗೋಲ್ಡಿನ್ ಪಾತ್ರರಾಗಿದ್ದಾರೆ.
ನೊಬೆಲ್ ಪ್ರಶಸ್ತಿಯನ್ನು ಅಕ್ಟೋಬರ್ 2ರಿಂದ ನೀಡಲಾಗುತ್ತಿದೆ. ಇನ್ನು ಆರ್ಥಿಕ ವಿಜ್ಞಾನ ಕ್ಷೇತ್ರಕ್ಕೆ ಇದು ಈ ವರ್ಷದ ಕೊನೆಯ ಪ್ರಶಸ್ತಿಯಾಗಿದೆ. ಔಷಧ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಮತ್ತು ಶಾಂತಿಗೆ ಸಂಬಂಧಿಸಿದಂತೆ ಈ ವಾರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.
BREAKING NEWS
The Royal Swedish Academy of Sciences has decided to award the 2023 Sveriges Riksbank Prize in Economic Sciences in Memory of Alfred Nobel to Claudia Goldin “for having advanced our understanding of women’s labour market outcomes.”#NobelPrize pic.twitter.com/FRAayC3Jwb— The Nobel Prize (@NobelPrize) October 9, 2023
ಕಳೆದ ವರ್ಷದ ಆರ್ಥಿಕ ವಿಜ್ಞಾನಗಳ ಪ್ರಶಸ್ತಿಯನ್ನು ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್ಗೆ ನೀಡಲಾಗಿತ್ತು. ಬ್ಯಾಂಕ್ ವೈಫಲ್ಯಗಳು ಮತ್ತು 2007-2008 ರ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಅಧ್ಯಯನಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.
Published On - 3:36 pm, Mon, 9 October 23