ಅಬ್ಬಬ್ಬಾ..ಅದೆಷ್ಟು ಸಪೂರ ಆಗಿದ್ದಾರೆ ಉತ್ತರ ಕೊರಿಯಾ ನಾಯಕ ಕಿಮ್​ ಜಾಂಗ್​ ಉನ್​; ಈ ವಿಡಿಯೋ ನೋಡಿ ಕಳವಳ ವ್ಯಕ್ತಪಡಿಸಿದ ನೆಟ್ಟಿಗರು

37ವರ್ಷದ ಕಿಮ್​ ಜಾಂಗ್​ ಉನ್​ ಗಮನಾರ್ಹ ರೀತಿಯಲ್ಲಿ ತೂಕ ಕಳೆದುಕೊಂಡಿದ್ದಾಗಿ ವಿದೇಶಿ ವಿಶ್ಲೇಷಕರೂ ಸಹ ಹೇಳಿದ್ದಾಗಿ ರಾಯಿಟರ್ಸ್​ ವರದಿ ಮಾಡಿದೆ. ಇನ್ನು ಉತ್ತರ ಕೊರಿಯಾ ಜನರಂತೂ ತಮ್ಮ ನಾಯಕನನ್ನು ನೋಡಿ ಕಂಗಾಲಾಗಿ ಹೋಗಿದ್ದಾರೆ.

ಅಬ್ಬಬ್ಬಾ..ಅದೆಷ್ಟು ಸಪೂರ ಆಗಿದ್ದಾರೆ ಉತ್ತರ ಕೊರಿಯಾ ನಾಯಕ ಕಿಮ್​ ಜಾಂಗ್​ ಉನ್​; ಈ ವಿಡಿಯೋ ನೋಡಿ ಕಳವಳ ವ್ಯಕ್ತಪಡಿಸಿದ ನೆಟ್ಟಿಗರು
ತೂಕ ಕಳೆದುಕೊಂಡಿರುವ ಕಿಮ್ ಜಾಂಗ್​ ಉನ್​
Edited By:

Updated on: Jun 28, 2021 | 11:32 AM

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್ ಉನ್​ ಕಳೆದವರ್ಷದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಹಿಂದಿನ ವರ್ಷ ಅವರು ಏಕಾಏಕಿ ನಾಪತ್ತೆಯಾಗಿದ್ದರು. ಆಗ ಅದೆಷ್ಟೋ ಆಯಾಮಗಳ ಸುದ್ದಿಹುಟ್ಟಿಕೊಂಡಿತ್ತು. ಅವರಿಗೇನೋ ಕಾಯಿಲೆಯಂತೆ..ಬದುಕೇ ಇಲ್ಲವಂತೆ..ಹೀಗೆ ವಿವಿಧ ರೀತಿಯ ಸುದ್ದಿಗಳು ಹರಿದಾಡಿದ್ದವು. ಆದರೆ ಮತ್ತೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ್ದರು. ಅದೇನೋ ಗೊತ್ತಿಲ್ಲ ಅದರಿಂದಾಚೆ ಒಂದಿಲ್ಲೊಂದು ಕಾರಣಕ್ಕೆ ಕಿಮ್ ಜಾಂಗ್​ ಉನ್​ ಸುದ್ದಿಯಾಗುತ್ತಾರೆ. ಈಗಂತೂ ಅವರು ತೂಕ ಕಳೆದುಕೊಂಡಿದ್ದು ಜಾಗತಿಕ ಮಟ್ಟದ ಸುದ್ದಿ. ಮೊದಲು ಗುಂಡಗೆ, ಕೆನ್ನೆ, ಗದ್ದಗಳೆಲ್ಲ ತುಂಬಿಕೊಂಡಂತಿದ್ದ ಕಿಮ್​ ಜಾಂಗ್​ ಉನ್​ ಈಗಂತೂ ಸಿಕ್ಕಾಪಟೆ ಸಣ್ಣ ಆಗಿದ್ದಾರೆ. ಅವರು ಮೊದಲಿದ್ದಾಗಿನ ಮತ್ತು ಈಗ ಸಪೂರ ಆಗಿರುವಾಗಿನ ವ್ಯತ್ಯಾಸ ತಿಳಿಸುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

ನೆಟ್ಟಿಗರಂತೂ ಸಿಕ್ಕಾಪಟೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಕಿಮ್​ ಜಾಂಗ್​ ಉನ್ ಡಯಟ್ ಮಾಡುತ್ತಿರಬಹುದು ಎಂದು ಒಂದಷ್ಟು ಜನರು ಅಂದಾಜಿಸಿದ್ದರೆ, ಇಲ್ಲ ಅವರಿಗೇನೋ ಆರೋಗ್ಯ ಸಮಸ್ಯೆಯಾಗಿದೆ. ಹಾಗಾಗೇ ಸಪೂರ ಆಗಿದ್ದಾರೆ ಎಂದೂ ಹಲವರು ಹೇಳುತ್ತಿದ್ದಾರೆ. ವೈರಲ್ ಆಗಿರವು ಫೋಟೋ, ವಿಡಿಯೋ ನೋಡಿದರೆ ಅವರ ದೇಹದಲ್ಲಿ ಉಂಟಾದ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತಿದೆ.

37ವರ್ಷದ ಕಿಮ್​ ಜಾಂಗ್​ ಉನ್​ ಗಮನಾರ್ಹ ರೀತಿಯಲ್ಲಿ ತೂಕ ಕಳೆದುಕೊಂಡಿದ್ದಾಗಿ ವಿದೇಶಿ ವಿಶ್ಲೇಷಕರೂ ಸಹ ಹೇಳಿದ್ದಾಗಿ ರಾಯಿಟರ್ಸ್​ ವರದಿ ಮಾಡಿದೆ. ಇನ್ನು ಉತ್ತರ ಕೊರಿಯಾ ಜನರಂತೂ ತಮ್ಮ ನಾಯಕನನ್ನು ನೋಡಿ ಕಂಗಾಲಾಗಿ ಹೋಗಿದ್ದಾರೆ. ಕಿಮ್​ ಜಾಂಗ್​ ಉನ್​ ಆರೋಗ್ಯದ ಬಗ್ಗೆಯೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದರಲ್ಲಿ ಸಿಯೋಲ್ ಮೂಲದ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿ, ಕಿಮ್​ ಜಾಂಗ್​ ಉನ್​ ಕೈಯಲ್ಲಿರುವ ವಾಚ್​ ಇದೀಗ ಸಡಿಲವಾಗಿದೆ. ಮೊದಲು ಬಿಗಿಯಾಗಿ ಮಣಿಕಟ್ಟಿನ ಸುತ್ತಲೂ ಕುಳಿತುಕೊಳ್ಳುತ್ತಿತ್ತು ಎಂದು ಹೇಳಿದೆ.

ಸದ್ಯ ಕಿಮ್​ ಜಾಂಗ್​ ಉನ್​ ಸಪೂರ ಆಗಿರುವ ವಿಡಿಯೋ ವೈರಲ್ ಆಗುತ್ತಿದ್ದು, ಈಗಾಗಲೇ 1 ಲಕ್ಷ ವೀವ್ಸ್​ ಪಡೆದಿದೆ. ನೆಟ್ಟಿಗರಂತೂ ವಿವಿಧ, ವಿಚಿತ್ರ ರೂಪದ ಮೀಮ್ಸ್​ಗಳ ಮೂಲಕ ಕಾಮೆಂಟ್​ ಮಾಡಿದ್ದಾರೆ. ಹಾಗೇ ಅನೇಕರು ಕಳವಳ, ಕಾಳಜಿಯನ್ನೂ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ ಮತ್ತು ನೆಟ್ಟಿಗರ ಮೀಮ್ಸ್​ಗಳು..

ಇದನ್ನೂ ಓದಿ: ಕಿಮ್​ ಜಾಂಗ್​ ಉನ್​ ತೂಕ ಕಳೆದುಕೊಂಡರೆ ಅಕ್ಕಪಕ್ಕದವರಿಗೆ ತಲೆಬಿಸಿ; 8 ಲಕ್ಷದ ವಾಚ್​ ಬಿಚ್ಚಿಟ್ಟ ಗುಟ್ಟಿನ ಹಿಂದೆ ದೊಡ್ಡ ಲೆಕ್ಕಾಚಾರ

(North Korean leader Kim Jong Un has visibly lost weight video went Viral)

Published On - 11:13 am, Mon, 28 June 21