AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಕ್ಸಿಕೋದಲ್ಲಿ ಭೀಕರ ಅಪಘಾತ; ಡಬಲ್ ಡೆಕ್ಕರ್ ಬಸ್​, ಟ್ರಕ್​ ಮುಖಾಮುಖಿ, 19 ಜನರ ಸಾವು

ವಾಯುವ್ಯ ಮೆಕ್ಸಿಕೋದ ಸಿನಾಲೋವಾ ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ 19 ಜನ ಮೃತಪಟ್ಟಿದ್ದು 22 ಜನರಿಗೆ ಗಾಯಗಳಾಗಿವೆ. ಡಬಲ್ ಡೆಕ್ಕರ್ ಬಸ್​, ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ವಾಹನಗಳ ನಡುವೆ ಬೆಂಕಿ ಹೊತ್ತಿಕೊಂಡಿದೆ.

ಮೆಕ್ಸಿಕೋದಲ್ಲಿ ಭೀಕರ ಅಪಘಾತ; ಡಬಲ್ ಡೆಕ್ಕರ್ ಬಸ್​, ಟ್ರಕ್​ ಮುಖಾಮುಖಿ, 19 ಜನರ ಸಾವು
ಮೆಕ್ಸಿಕೋದಲ್ಲಿ ಭೀಕರ ಅಪಘಾತ
ಆಯೇಷಾ ಬಾನು
|

Updated on: Jan 31, 2024 | 7:00 AM

Share

ಮೆಕ್ಸಿಕೋ, ಜ.31: ಮೆಕ್ಸಿಕೋದಲ್ಲಿ ಭೀಕರ (Mexico Accident) ಅಪಘಾತ ಸಂಭವಿಸಿದ್ದು 19 ಜನ ದುರ್ಮರಣ ಹೊಂದಿದ್ದಾರೆ (Death). ವಾಯುವ್ಯ ಮೆಕ್ಸಿಕೋದ ಸಿನಾಲೋವಾ ಎಂಬಲ್ಲಿ ಮಂಗಳವಾರ ಮುಂಜಾನೆ ಡಬಲ್ ಡೆಕ್ಕರ್ ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಭೀಕರ ಅಪಘಾತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು 22 ಮಂದಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಡಬಲ್ ಡೆಕ್ಕರ್ ಬಸ್ ಮತ್ತು ಟ್ರಕ್ ಡಿಕ್ಕಿಯಾದ ರಭಸಕ್ಕೆ ವಾಹನಗಳ ನಡುವೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ. ಮಜಟ್ಲಾನ್ ಮತ್ತು ಲಾಸ್ ಮೊಚಿಸ್ ಅನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. 19 ಜನರ ಸುಟ್ಟ ದೇಹಗಳನ್ನು ಗುರುತಿಸಲಾಗಿದೆ ಎಂದು ಸಿನಾಲೋವಾ ರಾಜ್ಯದ ಅಟಾರ್ನಿ ಜನರಲ್ ಸಾರಾ ಕ್ವಿನೋನೆಜ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದರು. ಇನ್ನು ಅಪಘಾತದ ನಂತರ ಸ್ಥಳದಲ್ಲೇ ಬಸ್‌ ಹೊತ್ತಿ ಉರಿದಿದ್ದು, ಸ್ಥಳಕ್ಕೆ ತುರ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಕುಗ್ಗುತ್ತಿದ್ದಾನೆ ಚಂದಿರ; ಚಂದ್ರನಲ್ಲಿ ಹೆಚ್ಚಿನ ಕಂಪನ, ಕುಸಿತ ಸಂಭವಿಸುವ ಎಚ್ಚರಿಕೆ

ಪಶ್ಚಿಮ ರಾಜ್ಯ ಜಲಿಸ್ಕೋದ ಗ್ವಾಡಲಜಾರಾ ನಗರದಿಂದ ಸಿನಾಲೋವಾದ ಲಾಸ್ ಮೋಚಿಸ್‌ಗೆ ಚಲಿಸುತ್ತಿದ್ದ ಬಸ್​ನಲ್ಲಿ 50 ಜನ ಪ್ರಯಾಣಿಕರಿದ್ದರು. ಬಸ್​ ಮತ್ತು ಟ್ರಕ್ ಮುಖಾಮುಖಿಯಾಗಿದ್ದು ಬೆಂಕಿ ಹೊತ್ತಿಕೊಂಡಿತು ಎಂದು ಸಿನಾಲೋವಾ ನಾಗರಿಕ ಸಂರಕ್ಷಣಾ ನಿರ್ದೇಶಕ ರಾಯ್ ನವರೆಟೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೆಕ್ಸಿಕೋದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ, ಆಗಾಗ ಹೆಚ್ಚಿನ ವೇಗ, ಚಾಲಕನ ನಿರ್ಲಕ್ಷ್ಯ, ವಾಹನಗಳ ಕಳಪೆ ಮಟ್ಟದಿಂದ ಅಪಘಾತ ಸಂಭವಿಸುತ್ತದೆ. ದೇಶದ ಹೆದ್ದಾರಿಗಳಲ್ಲಿ ಸರಕು ಸಾಗಣೆ ಟ್ರಕ್‌ಗಳನ್ನು ಒಳಗೊಂಡ ಅಪಘಾತಗಳೂ ಹೆಚ್ಚಿವೆ. ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಅಪಘಾತಗಳಲ್ಲಿ, ಜುಲೈ 2023 ರಲ್ಲಿ ನಡೆದ ಅಪಘಾತ ಭೀಕರವಾಗಿತ್ತು. ಈ ಅಪಘಾತದಲ್ಲಿ ಕನಿಷ್ಠ 29 ಜನರು ಸಾವನ್ನಪ್ಪಿದರು, ಪ್ರಯಾಣಿಕರಿದ್ದ ಬಸ್ ಪರ್ವತದ ರಸ್ತೆಯಿಂದ ಕೆಳಗಿಳಿದು ದಕ್ಷಿಣ ರಾಜ್ಯವಾದ ಓಕ್ಸಾಕಾದಲ್ಲಿ ಕಂದರಕ್ಕೆ ಬಿದ್ದಿತು.

ವಿದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ