ಒಮಿಕ್ರಾನ್ ರೂಪಾಂತರಿ ಡೆಲ್ಟಾದಂತೆ 2 ವಂಶಾವಳಿಗಳಾಗಿ ವಿಭಜಿಸಿದೆ; ತಜ್ಞರು ಏನಂತಾರೆ?

Omicron variant ನವೆಂಬರ್ 8 ರಂದು ದಕ್ಷಿಣ ಆಫ್ರಿಕಾದಲ್ಲಿ ಸುಮಾರು 50 ರೂಪಾಂತರಗಳೊಂದಿಗೆ ಒಮಿಕ್ರಾನ್ ಪತ್ತೆಯಾದಾಗಿನಿಂದ ಅದು ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಹರಡಿತು. ರೂಪಾಂತರಗಳು ಆಗಾಗ್ಗೆ ಸಂಭವಿಸುತ್ತವೆ, ಆದರೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ (CDC) ಪ್ರಕಾರ ಕೆಲವೊಮ್ಮೆ ವೈರಸ್ ಗುಣಲಕ್ಷಣಗಳನ್ನು ಬದಲಾಯಿಸುತ್ತವೆ.

ಒಮಿಕ್ರಾನ್ ರೂಪಾಂತರಿ ಡೆಲ್ಟಾದಂತೆ 2 ವಂಶಾವಳಿಗಳಾಗಿ ವಿಭಜಿಸಿದೆ; ತಜ್ಞರು ಏನಂತಾರೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 08, 2021 | 11:41 AM

ಒಮಿಕ್ರಾನ್ (Omicron variant) ರೂಪಾಂತರಿಯನ್ನು (B.1.1.529), ವಿಶ್ವ ಆರೋಗ್ಯ ಸಂಸ್ಥೆ(WHO)  ಕಾಳಜಿಯ ರೂಪಾಂತರಿ ಎಂದು  ಹೇಳಿದೆ. ವರದಿಯ  ಪ್ರಕಾರ ಇದನ್ನು BA.1 ಮತ್ತು BA.2 ಎಂಬ ಎರಡು ವಂಶಾವಳಿಗಳಾಗಿ ವಿಭಜಿಸಲಾಗಿದೆ. ಒಂದು ರೂಪಾಂತರವು ವೈರಲ್ ಜೀನೋಮ್ (genetic code) ಆಗಿದ್ದು ಅದು ಒಂದು ಅಥವಾ ಹೆಚ್ಚಿನ ರೂಪಾಂತರಗಳನ್ನು ಹೊಂದಿರಬಹುದು. ವಂಶಾವಳಿಯು ಸಾಮಾನ್ಯ ಪೂರ್ವಜರೊಂದಿಗೆ ನಿಕಟವಾಗಿ ಸಂಬಂಧಿಸಿರುವ ವೈರಸ್‌ಗಳ ಗುಂಪಾಗಿದೆ. ಆದರೆ ಸದ್ಯಕ್ಕೆ ಹೊಸ ವಂಶಾವಳಿಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಭರವಸೆ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.  ನವೆಂಬರ್ 8 ರಂದು ದಕ್ಷಿಣ ಆಫ್ರಿಕಾದಲ್ಲಿ ಸುಮಾರು 50 ರೂಪಾಂತರಗಳೊಂದಿಗೆ ಒಮಿಕ್ರಾನ್ ಪತ್ತೆಯಾದಾಗಿನಿಂದ ಅದು ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಹರಡಿತು. ರೂಪಾಂತರಗಳು ಆಗಾಗ್ಗೆ ಸಂಭವಿಸುತ್ತವೆ, ಆದರೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ (CDC)  ಪ್ರಕಾರ ಕೆಲವೊಮ್ಮೆ ವೈರಸ್ ಗುಣಲಕ್ಷಣಗಳನ್ನು ಬದಲಾಯಿಸುತ್ತವೆ. ಒಮಿಕ್ರಾನ್ ವಂಶಾವಳಿಯಲ್ಲಿನ ವಿಭಜನೆಯು ವಿಜ್ಞಾನಿಗಳಿಗೆ ಹೆಚ್ಚು ಆಸಕ್ತಿಯನ್ನುಂಟುಮಾಡುವುದರಿಂದ ಸಾಮಾನ್ಯ ಜನರು ಚಿಂತಿಸಬೇಕಾಗಿಲ್ಲ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಉತ್ತಮ ಸಾಂಕ್ರಾಮಿಕ ರೋಗಶಾಸ್ತ್ರದ ಕಣ್ಗಾವಲಿಗೆ ಸಹಾಯ ಮಾಡುತ್ತದೆ.

ಡೆಲ್ಟಾ ರೂಪಾಂತರವು ಸಹ ಮೊದಲು ಎರಡು ವಂಶಾವಳಿಗಳಾಗಿ ಮತ್ತು ನಂತರ ಡೆಲ್ಟಾ ಪ್ಲಸ್ ಸೇರಿದಂತೆ ಮೂರು ಆಗಿ ವಿಭಜಿಸಲ್ಪಟ್ಟಿತು. ಇದು ನಂತರ ಸುಮಾರು 100 ವಂಶಾವಳಿಗಳಾಗಿ ವಿಭಜನೆಯಾಯಿತು, ಆದರೆ ಇದು ಜನರಿಗೆ ಯಾವುದೇ ಗಮನಾರ್ಹ ಹಾನಿಯನ್ನು ಉಂಟುಮಾಡಲಿಲ್ಲ.

ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ (IGIB) ಯ ಹಿರಿಯ ವಿಜ್ಞಾನಿ ವಿನೋದ್ ಸ್ಕಾರಿಯಾ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು “B.1.1.529 ಒಮಿಕ್ರಾನ್ ವಂಶಾವಳಿಯನ್ನು ಈಗ BA.1 ಮತ್ತು BA.2 ಗೆ ವಿಭಜಿಸಲಾಗಿದೆ. BA.1 ಈಗ ಮೂಲ ವಂಶಾವಳಿಯನ್ನು ಹೊಂದಿರುತ್ತದೆ. BA.2 ಸುಮಾರು 24 ರೂಪಾಂತರಿಗಳನ್ನು ಹೊಂದಿದೆ. ವಿ.ಸೂ: ಇದು ಉತ್ತಮ ಸಾಂಕ್ರಾಮಿಕ ರೋಗಶಾಸ್ತ್ರದ ಕಣ್ಗಾವಲು ಮತ್ತು ಹೆದರಬೇಕಾಗಿಲ್ಲ ಎಂದಿದ್ದಾರೆ.

ರೂಪಾಂತರಗಳ ಆಧಾರದ ಮೇಲೆ ಎರಡು ವಂಶಾವಳಿಗಳನ್ನು ವರ್ಗೀಕರಿಸಲಾಗಿದೆ, ಅವುಗಳಲ್ಲಿ ಕೆಲವು ಎರಡೂ ರೂಪಾಂತರಗಳಿಗೆ ಸಾಮಾನ್ಯವಾಗಿದೆ. ಆದರೆ ಕೆಲವು ವ್ಯತ್ಯಸ್ತವಾಗಿದೆ. ಒಂದು ವಂಶಾವಳಿಯು (BA.1) S-ಜೀನ್ ಟಾರ್ಗೆಟ್ ವೈಫಲ್ಯ ಅಥವಾ SGTF ಅನ್ನು ನೀಡುತ್ತದೆ.  ಇದು ಅಸ್ತಿತ್ವದಲ್ಲಿರುವ RT-PCR ಪರೀಕ್ಷೆಯ ಮೂಲಕ ಒಮಿಕ್ರಾನ್ ರೂಪಾಂತರವನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತದೆ. ಇನ್ನೊಂದು (BA.2) SGTF ಅನ್ನು ನೀಡುವುದಿಲ್ಲ.

ಏತನ್ಮಧ್ಯೆ, ಪಿಸಿಆರ್ ಪರೀಕ್ಷೆಗಳನ್ನು ಬಳಸಿಕೊಂಡು ಇತರ ರೂಪಾಂತರಗಳಿಂದ ಪ್ರತ್ಯೇಕಿಸಲಾಗದ ಒಮಿಕ್ರಾನ್‌ನ “ರಹಸ್ಯ “( stealth) ಆವೃತ್ತಿಯನ್ನು ಅವರು ಗುರುತಿಸಿದ್ದಾರೆ ಎಂದು ವಿಜ್ಞಾನಿಗಳು ಹೇಳಿರುವುದಾಗಿ ಗಾರ್ಡಿಯನ್ ವರದಿ ಹೇಳಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಕೆನಡಾದಿಂದ ಇತ್ತೀಚಿನ ದಿನಗಳಲ್ಲಿ ಸಲ್ಲಿಸಲಾದ ಕೊವಿಡ್ ವೈರಸ್ ಜೀನೋಮ್‌ಗಳಲ್ಲಿ ಮೊದಲು ಗುರುತಿಸಲಾದ ಈ ರಹಸ್ಯ ಆವೃತ್ತಿಯು ನಿರ್ದಿಷ್ಟ ಆನುವಂಶಿಕ ಬದಲಾವಣೆಯನ್ನು ಹೊಂದಿಲ್ಲ, ಇದು ಲ್ಯಾಬ್-ಆಧಾರಿತ ಪಿಸಿಆರ್ ಪರೀಕ್ಷೆಗಳನ್ನು ಸಂಭವನೀಯ ಪ್ರಕರಣಗಳನ್ನು ಗಮನಹರಿಸುವ ಮೂಲಕ ಸ್ಥೂಲ ವಿಧಾನವಾಗಿ ಬಳಸಲು ಅನುಮತಿಸುತ್ತದೆ. ಯುಕೆಯಲ್ಲಿ ಪತ್ತೆಯಾದ ಮೂಲ ಒಮಿಕ್ರಾನ್ ರೂಪಾಂತರದ ಪ್ರಕರಣಗಳ ಸಂಖ್ಯೆಯು ಒಂದೇ ದಿನದಲ್ಲಿ 101 ರಿಂದ 437 ಕ್ಕೆ ಏರಿತು ಮತ್ತು ಸ್ಕಾಟ್ಲೆಂಡ್ ಮನೆಯಿಂದ ಕೆಲಸ ಮಾಡಲು ಅನುಮತಿಸಿತು .

ಇದನ್ನೂ ಓದಿ:  ರೋಗ ಲಕ್ಷಣಗಳಿಲ್ಲ, ನಾನು ಆರಾಮವಾಗಿಯೇ ಇದ್ದೇನೆ: ಪುಣೆಯಲ್ಲಿ ಮೊದಲು ಒಮಿಕ್ರಾನ್ ಸೋಂಕಿಗೊಳಗಾದ ವ್ಯಕ್ತಿಯ ಪ್ರತಿಕ್ರಿಯೆ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?