AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ನಡೆಸಿದ ಆಪರೇಷನ್​ ಸಿಂದೂರ್​ ದಾಳಿಯಲ್ಲಿ ಹತರಾದ ಉಗ್ರರ ಹೆಸರು, ಹಿಸ್ಟ್ರಿ ಬಹಿರಂಗ

ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು "ಆಪರೇಷನ್ ಸಿಂದೂರ್" ಹೆಸರಿನಲ್ಲಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಐವರು ಉಗ್ರಗಾಮಿಗಳು ಹತ್ಯೆಯಾಗಿದ್ದಾರೆ. ಹತ್ಯೆಯಾದ ಉಗ್ರಗಾಮಿಗಳ ಗುರುತು ಮತ್ತು ಅವರ ಸಂಘಟನೆಗಳೊಂದಿಗಿನ ಸಂಬಂಧ ಬಹಿರಂಗಗೊಂಡಿದೆ.

ಭಾರತ ನಡೆಸಿದ ಆಪರೇಷನ್​ ಸಿಂದೂರ್​ ದಾಳಿಯಲ್ಲಿ ಹತರಾದ ಉಗ್ರರ ಹೆಸರು, ಹಿಸ್ಟ್ರಿ ಬಹಿರಂಗ
ಆಪರೇಷನ್​ ಸಿಂದೂರ್​
ವಿವೇಕ ಬಿರಾದಾರ
|

Updated on:May 10, 2025 | 3:05 PM

Share

ನವದೆಹಲಿ, ಮೇ 10: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ (Pahalgam Terror Attack) ಪ್ರತೀಕಾರವಾಗಿ ಭಾರತೀಯ ಸೇನೆ ಬುಧವಾರ (ಮೇ.07) ರ ತಡರಾತ್ರಿ ಪಾಕಿಸ್ತಾನದಲ್ಲಿನ (Pakistan) ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು “ಆಪರೇಷನ್​ ಸಿಂದೂರ್​” (Operation Sindoor) ಹೆಸರಿನಲ್ಲಿ ದಾಳಿ ಮಾಡಿತು. ಈ ದಾಳಿಯಲ್ಲಿ ಹತರಾಗಿರುವ ಉಗ್ರಗಾಮಿಗಳ ಹೆಸರುಗಳು ಇದೀಗ ಬಹಿರಂಗಗೊಂಡಿವೆ.

  1. ಲಷ್ಕರ್-ಎ-ತೈಬಾದ ಉಸ್ತುವಾರಿ​ ಮುದಾಸರ್ ಖಾಡಿಯನ್ ಖಾಸ್ ಹತ್ಯೆಯಾಗಿದ್ದಾನೆ.
  2. ಜೈಶ್​ ಎ ಮೊಹಮ್ಮದ್ ಉಗ್ರ ಹಫೀಜ್ ಮೊಹಮ್ಮದ್ ಜಮೀಲ್ ಹತ್ಯೆಯಾಗಿದ್ದಾನೆ.
  3. ಸುಭಾನಲ್ಲಾದ ಉಸ್ತುವಾರಿ​ ಆಗಿದ್ದ ಜಮೀಲ್​ ಹತ್ಯೆಯಾಗಿದ್ದಾನೆ.
  4. ಜೈಶ್​ ಎ ಮೊಹಮ್ಮದ್ ಉಗ್ರ ಮೊಹಮ್ಮದ್ ಯೂಸುಫ್ ಅಜರ್ ಹತ್ಯೆಯಾಗಿದ್ದಾನೆ.
  5. ಲಷ್ಕರ್-ಎ-ತೈಬಾ ಸಂಘಟನೆಯ ಉಗ್ರ ಖಾಲಿದ್ ಹತ್ಯೆಯಾಗಿದ್ದಾನೆ.

ಮುದಾಸರ್ ಖಾಡಿಯನ್ ಖಾಸ್

ಮುದಾಸರ್ ಖಾಡಿಯನ್ ಖಾಸ್ ಅಲಿಯಾಸ್​ ಮುದಾಸರ್ ಅಲಿಯಾಸ್​ ಅಬು ಜುಂದಾಲ್ ಲಷ್ಕರ್-ಎ-ತೈಬಾ ಜೊತೆ ಸಂಬಂಧ ಹೊಂದಿದ್ದನು. ಇವನ ಅಂತ್ಯಕ್ರಿಯೆಯನ್ನು ಸರ್ಕಾರಿ ಶಾಲೆಯಲ್ಲಿ ನಡೆಸಲಾಗಿದೆ. ಪಾಕ್ ಸೇನೆಯ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಪೊಲೀಸ್ ಐಜಿ ಈತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಭಾರತದ ಗಡಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾ ಎಂಬ ಭಯೋತ್ಪಾದಕ ಶಿಬಿರದ ಉಸ್ತುವಾರಿ ವಹಿಸಿದ್ದನು. ಇದು ಎಲ್‌ಇಟಿಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. 2008 ರ ಮುಂಬೈ ದಾಳಿಯ ಸಮಯದಲ್ಲಿ ಜೀವಂತವಾಗಿ ಸಿಕ್ಕಿಬಿದ್ದ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್, ಈ ಶಿಬಿರದಲ್ಲಿ ತರಬೇತಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದ. 26/11 ರಲ್ಲಿ ಭಾಗಿಯಾಗಿರುವ ಮತ್ತೊಬ್ಬ ಭಯೋತ್ಪಾದಕ ಡೇವಿಡ್ ಹೆಡ್ಲಿ ಕೂಡ ಇಲ್ಲಿ ತರಬೇತಿ ಪಡೆದಿದ್ದಾನೆ ಎಂದು ವರದಿಯಾಗಿದೆ.

ಹಫೀಜ್ ಮುಹಮ್ಮದ್ ಜಮೀಲ್

ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧ ಹೊಂದಿದ್ದನು. ಈತ ಮೌಲಾನಾ ಮಸೂದ್ ಅಜರ್ ಅವರ ಹಿರಿಯ ಸೋದರ ಮಾವನಾಗಿದ್ದನು.

ಮೊಹಮ್ಮದ್ ಯೂಸುಫ್ ಅಜರ್

ಮೊಹಮ್ಮದ್ ಯೂಸುಫ್ ಅಜರ್ ಅಲಿಯಾಸ್​ ಉಸ್ತಾದ್ ಜಿ ಅಲಿಯಾಸ್​ ಮೊಹಮ್ಮದ್ ಸಲೀಮ್ ಅಲಿಯಾಸ್​ ಘೋಸಿ ಸಹಾಬ್ ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧ ಹೊಂದಿದ್ದನು. ಈತ ಮೌಲಾನಾ ಮಸೂದ್ ಅಜರ್​ನ ಸೋದರ ಮಾವನಾಗಿದ್ದಾನೆ. ಈತ ಐಸಿ -814 ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದನು.

ಖಾಲಿದ್ ಅಲಿಯಾಸ್​ ಅಬು ಆಕಾಶ

ಈತ ಲಷ್ಕರ್-ಎ-ತೈಬಾ ಜೊತೆ ಸಂಬಂಧ ಹೊಂದಿದ್ದನು. ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದನು. ಮತ್ತು ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದನು. ಈತನ ಅಂತ್ಯಕ್ರಿಯೆಯನ್ನು ಫೈಸಲಾಬಾದ್‌ನಲ್ಲಿ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಗಳು ಮತ್ತು ಫೈಸಲಾಬಾದ್‌ನ ಉಪ ಆಯುಕ್ತರು ಭಾಗವಹಿಸಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ಸುಳ್ಳಿನ ಸರಮಾಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಭಾರತ

ಮೊಹಮ್ಮದ್ ಹಸನ್ ಖಾನ್

ಈತ ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧ ಹೊಂದಿದ್ದಾನೆ. ಈತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಜೆಇಎಂನ ಕಾರ್ಯಾಚರಣಾ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿಯ ಮಗನಾಗಿದ್ದನು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದನು.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Sat, 10 May 25