ಅಬ್ಬಬ್ಬಾ ಲಾಟರಿ! 45 ದಿನ ಪ್ರಧಾನಿಯಾಗಿದ್ದಕ್ಕೆ ಜೀವನಪೂರ್ತಿ ವರ್ಷಕ್ಕೆ ಕನಿಷ್ಠ 1 ಕೋಟಿ ರೂ ಸಂಬಳ ಸವಲತ್ತು ಭಾಗ್ಯ, ಏನಿದು ಲೆಕ್ಕಾಚಾರ?

Liz Truss: ಯುಕೆ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಅವರು ಪ್ರಧಾನಿ ಹುದ್ದೆ ತ್ಯಜಿಸಿದ್ದಾರೆ. ಆದರೆ ಈ 45 ಪ್ರಧಾನಿಯಾಗಿದ್ದ ಭಾಗ್ಯಕ್ಕೆ ಅವರಿಗೆ ಇನ್ನು ಮುಂದೆ ಜೀವನಪೂರ್ತಿ ವರ್ಷಕ್ಕೆ 1 ಕೋಟಿ ರೂ ಪ್ಲಸ್ ಸಂಬಳ ಸವಲತ್ತು ಭಾಗ್ಯ ಪಡೆದಿಕೊಂಡಿದ್ದಾರೆ. ಏನಿದು ಲೆಕ್ಕಾಚಾರ?

ಅಬ್ಬಬ್ಬಾ ಲಾಟರಿ! 45 ದಿನ ಪ್ರಧಾನಿಯಾಗಿದ್ದಕ್ಕೆ ಜೀವನಪೂರ್ತಿ ವರ್ಷಕ್ಕೆ ಕನಿಷ್ಠ 1 ಕೋಟಿ ರೂ ಸಂಬಳ ಸವಲತ್ತು ಭಾಗ್ಯ, ಏನಿದು ಲೆಕ್ಕಾಚಾರ?
45 ದಿನ ಪ್ರಧಾನಿಯಾಗಿದ್ದಕ್ಕೆ ಜೀವನಪೂರ್ತಿ ವರ್ಷಕ್ಕೆ ಕನಿಷ್ಠ 1 ಕೋಟಿ ರೂ ಸಂಬಳ ಸವಲತ್ತು ಭಾಗ್ಯImage Credit source: indiatoday
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 21, 2022 | 5:23 PM

Liz Truss: ಯುಕೆ ಪ್ರಧಾನಿ (UK Prime Minister) ಲಿಜ್ ಟ್ರಸ್ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಅವರು ಪ್ರಧಾನಿ ಹುದ್ದೆ ತ್ಯಜಿಸಿದ್ದಾರೆ. ಆದರೆ ಈ 45 ಪ್ರಧಾನಿಯಾಗಿದ್ದ ಭಾಗ್ಯಕ್ಕೆ ಅವರಿಗೆ ಇನ್ನು ಮುಂದೆ ಜೀವನಪೂರ್ತಿ ವರ್ಷಕ್ಕೆ 1 ಕೋಟಿ ರೂ ಪ್ಲಸ್ ಸಂಬಳ ಸವಲತ್ತು (£115,000) ಭಾಗ್ಯ ಪಡೆದಿಕೊಂಡಿದ್ದಾರೆ. ಏನಿದು ಲೆಕ್ಕಾಚಾರ?

ಕೇವಲ 45 ದಿನಗಳ ಕಾಲ ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರೂ ಸಹ, ಅತ್ಯಲ್ಪ ಅವಧಿಗೆ ಪ್ರಧಾನಿಯಾಗಿದ್ದವರು ಎಂಬ ಅಪಖ್ಯಾತಿಗೆ ಪಾತ್ರರಾಗಿದ್ದರೂ ಲಿಜ್ ಟ್ರಸ್ ಪ್ರತಿ ವರ್ಷಕ್ಕೆ £115,000 (ಸುಮಾರು ರೂ 1,06,36,463) ಭತ್ಯೆ ಸವಲತ್ತು ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ. ಟ್ರಸ್ ಅವರು ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ತೆರಿಗೆದಾರರ ಹಣದಿಂದ ಟ್ರಸ್ ಗೆ ಪಿಂಚಣಿ ಪಾವತಿ:

ದಿ ಇಂಡಿಪೆಂಡೆಂಟ್ ಪ್ರಕಾರ, ಟ್ರಸ್ ಪ್ರತಿ ವರ್ಷ ಜೀವನಕ್ಕಾಗಿ ಪಡೆಯುವ ಹಣವನ್ನು ತೆರಿಗೆದಾರರ ಹಣದಿಂದ ಪಾವತಿಸಲಾಗುತ್ತದೆ. ನಿರ್ಗಮ ಕನ್ಸರ್ವೇಟಿವ್ ಪಕ್ಷದ (Conservative leader) ನಾಯಕಿ ಇನ್ಮುಂದೆ ಸಾರ್ವಜನಿಕ ಕರ್ತವ್ಯ ವೆಚ್ಚ ಭತ್ಯೆ (Public Duty Costs Allowance -PDCA) ನಿಂದ ಹಣವನ್ನು ಪಡೆಯಲಿದ್ದಾರೆ. ಇನ್ಮುಂದೆ ಮಾಜಿ ಪ್ರಧಾನ ಮಂತ್ರಿ ಎಂದು ಕರೆಸಿಕೊಳ್ಳಲಿರುವ ಲಿಜ್ ಟ್ರಸ್ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿರುವುದಕ್ಕೆ ನೆರವಾಗಲು ಇಂತಹ ಭತ್ಯೆ ಕೊಡಮಾಡಲಾಗುವುದು. ಸರ್ಕಾರದ ಮಾರ್ಗದರ್ಶನದ ಪ್ರಕಾರ, ಈ ಭತ್ಯೆಯನ್ನು ಸಾರ್ವಜನಿಕ ಕರ್ತವ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ನೈಜ ವೆಚ್ಚವನ್ನು ಭರಿಸಲು ಮಾತ್ರ ಮಾಡಲಾಗುತ್ತದೆ.

1990 ರಲ್ಲಿ ಮಾರ್ಗರೆಟ್ ಥ್ಯಾಚರ್ ಅವರ ರಾಜೀನಾಮೆಯ ನಂತರ ಭತ್ಯೆಯನ್ನು ವ್ಯವಸ್ಥೆಗೊಳಿಸಲಾಯಿತು. ಇದನ್ನು ಅವರ ಹಿಂದಿನ ಪ್ರಧಾನಿ ಜಾನ್ ಮೇಜರ್ 1991 ರಲ್ಲಿ ಘೋಷಿಸಿದ್ದರು. ಯೋಜನೆಯನ್ನು ಮೊದಲು ಪರಿಚಯಿಸಿದಾಗಿನಿಂದ, ಈ ಹಿಂದೆ ಹಲವಾರು ಪ್ರಧಾನ ಮಂತ್ರಿಗಳು “ಸಾರ್ವಜನಿಕ ಜೀವನದಲ್ಲಿ ಅವರ ವಿಶೇಷ ಸ್ಥಾನ” ದ ಪರಿಣಾಮವಾಗಿ ಕಚೇರಿ ಮತ್ತು ಕಾರ್ಯದರ್ಶಿಯ ವೆಚ್ಚಗಳನ್ನು ಉಲ್ಲೇಖಿಸಿ ಮಿಲಿಯನ್‌ಗಟ್ಟಲೆ ಕ್ಲೈಮ್ ಮಾಡಿದ್ದಾರೆ ಎಂಬುದು ಗಮನಾರ್ಹ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ