ದಕ್ಷಿಣ ಆಫ್ರಿಕಾದ ಕಾಂಗೋ ನದಿಯಲ್ಲಿ ಇತ್ತೀಚೆಗೆ ಹಡಗೊಂದು ಮಗುಚಿದ ಪರಿಣಾಮ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 70 ಜನರು ಕಾಣೆಯಾಗಿದ್ದಾರೆ. ಅವರನ್ನು ಪತ್ತೆ ಮಾಡುವ ಕಾರ್ಯ ನಡೆಯುತ್ತಲೇ ಇದೆ ಎಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದುವರೆಗೆ ಒಟ್ಟು 51 ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ, ಇನ್ನೂ 70 ಮಂದಿಯನ್ನು ಹುಡುಕಬೇಕು. ಯಾರೂ ಬದುಕಿರುವ ಸಾಧ್ಯತೆ ಇಲ್ಲ ಎಂದು ಮೊಂಗಾಲಾದ ವಾಯುವ್ಯ ಪ್ರಾಂತ್ಯದ ಗವರ್ನರ್ ಕಚೇರಿಯ ವಕ್ತಾರರು ಇಂದು ಮಾಹಿತಿ ನೀಡಿದ್ದಾರೆ.
ಈ ವಾರದ ಪ್ರಾರಂಭದಲ್ಲೇ ಹಡಗು ಮುಳುಗಿದೆ. ಅಲ್ಲಿಂದ ಇಲ್ಲಿಯವರೆಗೆ 39 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಹಡಗಿನಲ್ಲಿ ಎಷ್ಟು ಮಂದಿ ಪ್ರಯಾಣ ಮಾಡುತ್ತಿದ್ದರು ಎಂಬುದಕ್ಕೆ ನಿಖರ ಮಾಹಿತಿ ಇಲ್ಲ. ಆ ಹಡಗಿನ ಸಾಮರ್ಥ್ಯದ ಆಧಾರದ ಮೇಲೆ ಅಂದಾಜು ಮಾಡಲಾಗಿದೆ ಎಂದೂ ಹೇಳಲಾಗಿದೆ. ಹಾಗೇ, ಹಡಗು ಮಗುಚಲು ಅದರಲ್ಲಿ ವಿಪರೀತ ಜನರು ಇದ್ದಿದ್ದೇ ಕಾರಣ. ಅಂದು ವಾತಾವರಣವೂ ಕೆಟ್ಟದಾಗಿತ್ತು. ಆದರೂ ನಿಖರ ಕಾರಣ ಪತ್ತೆ ಮಾಡಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ. ಹಾಗೇ ಮೊಂಗಾಲಾ ಪ್ರಾಂತ್ಯದಲ್ಲಿ ಮೂರು ದಿನ ಶೋಕಾಚರಣೆಯನ್ನೂ ನಡೆಸಲಾಗಿದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಭಕ್ತರು ಅರ್ಪಿಸುವ ಬಂಗಾರ ಶೇಖರಣೆಯಾದರೆ ಕೆಜಿಎಫ್ನಲ್ಲಿರೋದೇ ಬಂಗಾರ ತಿಮ್ಮಪ್ಪ!
ರಾಯಲ್ ಎನ್ಫೀಲ್ಡ್ ಮತ್ತು ಕೆಟಿಎಮ್ 250 ಒಂದಿಗೆ ಸ್ಪರ್ಧೆಗೆ ಬೀಳಲು ಬಂತು ಹಿರೋ ಎಕ್ಸ್ಪಲ್ಸ್ 200 4ವಿ!