ಪಾಕಿಸ್ತಾನ ರೇಡಿಯೋಗಳಲ್ಲಿ ಭಾರತೀಯ ಹಾಡುಗಳ ಪ್ರಸಾರಕ್ಕೆ ನಿರ್ಬಂಧ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯು ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೊಮ್ಮೆ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ. ಒಂದೆಡೆ, ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತು. ಈಗ ಪಾಕಿಸ್ತಾನದಲ್ಲಿ, ಪಾಕಿಸ್ತಾನ ಪ್ರಸಾರಕರ ಸಂಘವು ದೇಶಾದ್ಯಂತ ಭಾರತೀಯ ಹಾಡುಗಳನ್ನು ನಿಷೇಧಿಸಿದೆ. ಅನೇಕ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಕಾಣಿಸುತ್ತಿಲ್ಲ. ಭಾರತವು ಮಹಿರಾ ಖಾನ್, ಸಜಲ್ ಅಲಿಯಿಂದ ಹಿಡಿದು ಹನಿಯಾ ಆಮಿರ್ ವರೆಗಿನ ಅನೇಕ ತಾರೆಯರ ಖಾತೆಗಳನ್ನು ನಿಷೇಧಿಸಿದೆ.

ಪಾಕಿಸ್ತಾನ ರೇಡಿಯೋಗಳಲ್ಲಿ ಭಾರತೀಯ ಹಾಡುಗಳ ಪ್ರಸಾರಕ್ಕೆ ನಿರ್ಬಂಧ
ಎಫ್​ಎಂ ರೇಡಿಯೋ
Image Credit source: iStock

Updated on: May 02, 2025 | 7:43 AM

ಇಸ್ಲಾಮಾಬಾದ್, ಮೇ 02: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌(Pahalgam)ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಭಯೋತ್ಪಾದಕರ ಈ ಕೃತ್ಯದ ನಂತರ ಜನರ ರಕ್ತ ಕುದಿಯುತ್ತಿದೆ. ಮತ್ತೊಂದೆಡೆ, ಸಾಮಾಜಿಕ ಮಾಧ್ಯಮಗಳಲ್ಲಿ ಎರಡೂ ದೇಶಗಳ ನಡುವೆ ವಿಭಿನ್ನ ರೀತಿಯ ಯುದ್ಧ ನಡೆಯುತ್ತಿದ್ದು, ಇದು ಎರಡೂ ದೇಶಗಳ ಮನರಂಜನಾ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿದೆ.

ಅನೇಕ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಕಾಣಿಸುತ್ತಿಲ್ಲ. ಭಾರತವು ಮಹಿರಾ ಖಾನ್, ಸಜಲ್ ಅಲಿಯಿಂದ ಹಿಡಿದು ಹನಿಯಾ ಆಮಿರ್ ವರೆಗಿನ ಅನೇಕ ತಾರೆಯರ ಖಾತೆಗಳನ್ನು ನಿಷೇಧಿಸಿದೆ.

ಹಾಗೆಯೇ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್​ಗಳನ್ನು ಕೂಡ ಭಾರತದಲ್ಲಿ ನಿಷೇಧಿಸಲಾಗಿದೆ. ಏತನ್ಮಧ್ಯೆ, ಪಾಕಿಸ್ತಾನ ಕೂಡ ಭಾರತೀಯ ಹಾಡುಗಳ ಪ್ರಸಾರವನ್ನು ನಿಷೇಧಿಸಿದೆ. ಪಾಕಿಸ್ತಾನಿ ಪ್ರಸಾರಕರ ಸಂಘ ಅಂದರೆ ಪಿಬಿಎ ಪಾಕಿಸ್ತಾನಿ ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ಭಾರತೀಯ ಹಾಡುಗಳ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿದೆ.

ಇದನ್ನೂ ಓದಿ
WITT 2025: ಪ್ರಧಾನಿಯನ್ನು ಶ್ಲಾಘಿಸಿದ ಟಿವಿ9 ನೆಟ್ವರ್ಕ್ ಸಿಇಒ
WITT 2025: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಮೋದಿ ಭಾಷಣ
WITT 2025: ಪಿಎಂ ಮೋದಿ ಭಾಗಿ; ನೇರಪ್ರಸಾರ ವೀಕ್ಷಿಸಿ
ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು?

ಮತ್ತಷ್ಟು ಓದಿ: ಭಾರತ-ಪಾಕಿಸ್ತಾನ ಉದ್ವಿಗ್ನತೆ ನಡುವೆ ಯಾರೊಂದಿಗೆ ಯುದ್ಧಕ್ಕೆ ಸಜ್ಜಾಯ್ತು ಬಾಂಗ್ಲಾದೇಶ?

ಪಾಕಿಸ್ತಾನ ಸರ್ಕಾರ ಈ ಕ್ರಮವನ್ನು ರಾಷ್ಟ್ರೀಯ ಹಿತಾಸಕ್ತಿಗಾಗಿ ತೆಗೆದುಕೊಂಡ ನಿರ್ಧಾರ ಎಂದು ಬಣ್ಣಿಸಿದೆ. ಪಾಕಿಸ್ತಾನ ಸರ್ಕಾರ ಭಾರತೀಯ ಹಾಡುಗಳನ್ನು FM ನಲ್ಲಿ ಕೇಳಲು ಸಾಧ್ಯವಿಲ್ಲ ಎಂದು ಹೇಳಿದೆ. ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪಾಕಿಸ್ತಾನ ಸರ್ಕಾರ ಮೇ 1 ರಂದು ಈ ಕುರಿತು ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ಈಗ ಪಾಕಿಸ್ತಾನದಲ್ಲಿ ಬಾಲಿವುಡ್ ಹಾಡುಗಳನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿತ್ತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಇನ್ನು ಮುಂದೆ ಪಾಕಿಸ್ತಾನದ ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ಭಾರತೀಯ ಹಾಡುಗಳನ್ನು ಪ್ರಸಾರ ಮಾಡಲಾಗುವುದಿಲ್ಲ ಎಂದು ಹೇಳಿದೆ.

ದೇಶಾದ್ಯಂತ ಪಾಕಿಸ್ತಾನಿ ಎಫ್‌ಎಂ ರೇಡಿಯೋ ಕೇಂದ್ರಗಳಿಂದ ಭಾರತೀಯ ಹಾಡುಗಳನ್ನು ಪ್ರಸಾರ ಮಾಡುವುದನ್ನು ಪಿಬಿಎ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸಿದೆ ಎಂದು ಪಾಕಿಸ್ತಾನ ಪ್ರಸಾರ ಸಂಘದ (ಪಿಬಿಎ) ಪ್ರಧಾನ ಕಾರ್ಯದರ್ಶಿ ಶಕೀಲ್ ಮಸೂದ್ ಹೇಳಿದ್ದಾರೆ.

ಭಾರತೀಯ ಹಾಡುಗಳು, ವಿಶೇಷವಾಗಿ ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತು ಮುಖೇಶ್ ಅವರಂತಹ ಶ್ರೇಷ್ಠ ಗಾಯಕರ ಹಾಡುಗಳು ಪಾಕಿಸ್ತಾನಿಗಳಲ್ಲಿ ಜನಪ್ರಿಯವಾಗಿವೆ ಮತ್ತು ಇಲ್ಲಿನ ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ಪ್ರತಿದಿನ ಪ್ರಸಾರವಾಗುತ್ತಿದ್ದವು.

ಪಹಲ್ಗಾಮ್​ನಲ್ಲಿ ನಡೆದಿದ್ದೇನು?
ಪಹಲ್ಗಾಮ್ ಬೈಸರನ್ ಕಣಿವೆಯಲ್ಲಿ ಕೆಲವು ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರು . ಈ ಘಟನೆಯಲ್ಲಿ ಸುಮಾರು 26 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, ಅನೇಕ ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯ ನಂತರ, ದೇಶಾದ್ಯಂತ ಭಾರೀ ಆಕ್ರೋಶ ಭುಗಿಲೆದ್ದಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ