ಪಾಕಿಸ್ತಾನದ ನವಾಬ್ಶಾಹ್ನಲ್ಲಿ ಹಳಿ ತಪ್ಪಿದ ರೈಲು, 15 ಮಂದಿ ಸಾವು, 50 ಮಂದಿಗೆ ಗಂಭೀರ ಗಾಯ
ಪಾಕಿಸ್ತಾನದ ನವಾಬ್ಶಾಹ್ನಲ್ಲಿ ಹಜಾರಾ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ್ದು, 50 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕರಾಚಿಯಿಂದ ರಾವಲ್ಪಿಂಡಿಗೆ ಹೋಗುತ್ತಿದ್ದ ಹಜಾರಾ ಎಕ್ಸ್ಪ್ರೆಸ್ ರೈಲಿನ 8 ಬೋಗಿಗಳು ಹಳಿತಪ್ಪಿದೆ.
ಪಾಕಿಸ್ತಾನದ ನವಾಬ್ಶಾಹ್ನಲ್ಲಿ ಹಜಾರಾ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ್ದು, 50 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕರಾಚಿಯಿಂದ ರಾವಲ್ಪಿಂಡಿಗೆ ಹೋಗುತ್ತಿದ್ದ ಹಜಾರಾ ಎಕ್ಸ್ಪ್ರೆಸ್ ರೈಲಿನ 8 ಬೋಗಿಗಳು ಹಳಿತಪ್ಪಿದೆ. ಈ ಅಪಘಾತದಲ್ಲಿ ಇದುವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 50 ಮಂದಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಸಹಾರಾ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಈ ನಿಲ್ದಾಣವು ಶಹಜಾದ್‌ಪುರ ಮತ್ತು ನವಾಬ್‌ಶಾಹ್ ನಡುವೆ ಇದೆ. ರೈಲು ಹಳಿ ತಪ್ಪಲು ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮೀಪದ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Sun, 6 August 23