ಪಾಕಿಸ್ತಾನ: ಬೆಲ್ಜಿಯಂ ಮಹಿಳೆ ಮೇಲೆ 5 ದಿನ ಅತ್ಯಾಚಾರ ನಡೆಸಿ ಕೈಕಾಲು ಕಟ್ಟಿ ರಸ್ತೆಗೆ ಎಸೆದು ಹೋಗಿದ್ದ ಪಾಪಿಗಳು

|

Updated on: Aug 15, 2024 | 10:18 AM

ಪಾಕಿಸ್ತಾನದಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಇಸ್ಲಾಮಾಬಾದ್​ನಲ್ಲಿ ಆಗಸ್ಟ್​ 14ರಂದು ಪಾಕಿಸ್ತಾನದ ಸ್ವಾತಂತ್ರ್ಯಾ ದಿನದಂದು ಮಹಿಳೆ ಗಾಯಗೊಂಡ ಸ್ಥಿತಿಯಲ್ಲಿ ರಸ್ತೆಯಲ್ಲಿ ಪತ್ತೆಯಾಗಿದ್ದಳು. ಆಕೆಯ ಕೈಕಾಲುಗಳನ್ನು ಕಟ್ಟಲಾಗಿತ್ತು, ದೇಹದ ಮೇಲೆ ಗಾಯದ ಗುರುತುಗಳಿದ್ದವು, ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಪಾಕಿಸ್ತಾನ: ಬೆಲ್ಜಿಯಂ ಮಹಿಳೆ ಮೇಲೆ 5 ದಿನ ಅತ್ಯಾಚಾರ ನಡೆಸಿ ಕೈಕಾಲು ಕಟ್ಟಿ ರಸ್ತೆಗೆ ಎಸೆದು ಹೋಗಿದ್ದ ಪಾಪಿಗಳು
ಮಹಿಳೆ
Follow us on

ಪಾಕಿಸ್ತಾನದಲ್ಲಿ 28 ವರ್ಷದ ಬೆಲ್ಜಿಯಂ ಮಹಿಳೆಯ ಮೇಲೆ ಐದು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇಸ್ಲಾಮಾಬಾದ್​ನಲ್ಲಿ ಆಗಸ್ಟ್​ 14ರಂದು ಪಾಕಿಸ್ತಾನದ ಸ್ವಾತಂತ್ರ್ಯಾ ದಿನದಂದು ಮಹಿಳೆ ಗಾಯಗೊಂಡ ಸ್ಥಿತಿಯಲ್ಲಿ ರಸ್ತೆಯಲ್ಲಿ ಪತ್ತೆಯಾಗಿದ್ದಳು. ಆಕೆಯ ಕೈಕಾಲುಗಳನ್ನು ಕಟ್ಟಲಾಗಿತ್ತು, ದೇಹದ ಮೇಲೆ ಗಾಯದ ಗುರುತುಗಳಿದ್ದವು, ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಪಾಕಿಸ್ತಾನಿ ಮಾಧ್ಯಮಗಳ ಮಾಹಿತಿ ಪ್ರಕಾರ, ಅತ್ಯಾಚಾರವೆಸಗಿದ ನಂತರ ಮಹಿಳೆಯ ಕೈಗಳನ್ನು ಕಟ್ಟಿ ಇಸ್ಲಾಮಾಬಾದ್​ನ ಜಿ-6 ಸೆಕ್ಟರ್​ನಲ್ಲಿ ಎಸೆಯಲಾಗಿತ್ತು. ಸಂತ್ರಸ್ತೆಯನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಪೊಲೀಸರು ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

ತನ್ನನ್ನು ಒತ್ತೆಯಾಳಾಗಿರಿಸಿಕೊಂಡು ಐದು ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಆರೋಪ ದೃಢಪಟ್ಟಿದೆ. ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಮತ್ತಷ್ಟು ಓದಿ: ಮಗಳೊಂದಿಗೆ ಇದ್ದಾಗಲೇ ತಾಯಿಯ ಕೊಲೆ: ಕತ್ತು ಕೊಯ್ದು ಶಿಕ್ಷಕಿಯ ಹತ್ಯೆಗೈದ ಮೂವರು ಹಂತಕರು

ಆರೋಪಿಯನ್ನು ತಮಿಜುದ್ದೀನ್ ಎಂದು ಗುರುತಿಸಲಾಗಿದೆ. ಆರೋಪಿಯು ವಿಚಾರಣೆಯ ಸಮಯದಲ್ಲಿ ಮಹಿಳೆ ಮಾನಸಿಕವಾಗಿ ಅಸ್ಥಿರಳಾಗಿದ್ದಾಳೆ ಮತ್ತು ಆಕೆಯ ಗುರುತು ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿಲ್ಲ ಎಂದು ವಾದಿಸಿದರು. ಹೆಚ್ಚಿನ ತನಿಖೆಗಾಗಿ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.

ಕೆಲ ಸಮಯದ ಹಿಂದೆ ಪಾಕಿಸ್ತಾನದಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಹಿಂದೂ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಸುದ್ದಿ ಬಂದಿತ್ತು. ಈ ಪ್ರಕರಣವು ಪಾಕಿಸ್ತಾನದ ದಕ್ಷಿಣ ಪ್ರಾಂತ್ಯದ ಸಿಂಧ್‌ನ ಉಮರ್‌ಕೋಟ್ ಜಿಲ್ಲೆಯ ಸಮರೋ ಪ್ರದೇಶದಲ್ಲಿ ನಡೆದಿತ್ತು.

ಇಲ್ಲಿ ಮೊದಲು ವಿವಾಹಿತ ಹಿಂದೂ ಮಹಿಳೆಯನ್ನು ಕೆಲವರು ಅಪಹರಿಸಿದ್ದರು. ಇದಾದ ನಂತರ ಮಹಿಳೆಯನ್ನು ಬಲವಂತವಾಗಿ ಇಸ್ಲಾಂ ಧರ್ಮ ಸ್ವೀಕರಿಸುವಂತೆ ಕೇಳಲಾಯಿತು. ಆಕೆ ನಿರಾಕರಿಸಿದಾಗ ಆರೋಪಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ.

ಇದಕ್ಕೂ ಮೊದಲು ಜುಲೈ 26 ರಂದು ಹಫೀಜಾಬಾದ್ ಪ್ರದೇಶದಲ್ಲಿ ಕೆಲವು ದರೋಡೆಕೋರರು ಪತಿ ಮತ್ತು ಮೂರು ವರ್ಷದ ಮಗಳ ಮುಂದೆ ಬಂದೂಕು ತೋರಿಸಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

2023 ರಲ್ಲಿ ಪಾಕಿಸ್ತಾನದಲ್ಲಿ 6,624 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಹೆಚ್ಚಿನ ಘಟನೆಗಳು ಫೈಸಲಾಬಾದ್‌ನಲ್ಲಿ ನಡೆದಿವೆ. 2017 ಮತ್ತು 2021 ರ ನಡುವೆ ದೇಶಾದ್ಯಂತ 21,900 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ವರದಿ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ