ಮಗಳೊಂದಿಗೆ ಇದ್ದಾಗಲೇ ತಾಯಿಯ ಕೊಲೆ: ಕತ್ತು ಕೊಯ್ದು ಶಿಕ್ಷಕಿಯ ಹತ್ಯೆಗೈದ ಮೂವರು ಹಂತಕರು

ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿ ಮನೆಯಲ್ಲಿ ಮಗಳ ಜೊತೆ ಇದ್ದಾಗಲೇ ತಾಯಿಯನ್ನು ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಮೂರು ದುರುಳರಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈಯಲಾಗಿದೆ. ಶಿಕ್ಷಕಿ ಕೊಲೆಯಿಂದ ಸದ್ಯ ಮುಳಬಾಗಿಲು ಜನರು ಬೆಚ್ಚಿಬಿದಿದ್ದಾರೆ. ಶಾಸಕ ಸಮೃದ್ಧಿ ಮಂಜುನಾಥ್ ಕೂಡ ಭೇಟಿ ನೀಡಿದ್ದಾರೆ.

ಮಗಳೊಂದಿಗೆ ಇದ್ದಾಗಲೇ ತಾಯಿಯ ಕೊಲೆ: ಕತ್ತು ಕೊಯ್ದು ಶಿಕ್ಷಕಿಯ ಹತ್ಯೆಗೈದ ಮೂವರು ಹಂತಕರು
ಮಗಳೊಂದಿಗೆ ಇದ್ದಾಗಲೇ ತಾಯಿಯ ಕೊಲೆ: ಕತ್ತು ಕೊಯ್ದು ಶಿಕ್ಷಕಿಯ ಹತ್ಯೆಗೈದ ಮೂವರು ಹಂತಕರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 14, 2024 | 9:29 PM

ಕೋಲಾರ, ಆಗಸ್ಟ್​ 14: ಮೂವರು ಹಂತಕರಿಂದ ಶಿಕ್ಷಕಿಯ (teacher) ಕತ್ತು ಕೊಯ್ದು ಬರ್ಬರವಾಗಿ ಕೊಲೆ (murder) ಮಾಡಿರುವಂತಹ ಘಟನೆ ಜಿಲ್ಲೆಯ ಮುಳಬಾಗಿಲಿನ ಮುತ್ಯಾಲಪೇಟೆ ಲೇಔಟ್​ನಲ್ಲಿ ನಡೆದಿದೆ. ದಿವ್ಯಶ್ರೀ (42) ಕೊಲೆಯಾದ ಶಿಕ್ಷಕಿ. ಮನೆಯಲ್ಲಿ ಮಗಳ ಜೊತೆ ಇದ್ದಾಗ ಕೊಲೆ ಮಾಡಲಾಗಿದೆ. ಮಗಳನ್ನೂ ಹತ್ಯೆಗೈಯಲು ಯತ್ನಿಸಿದ್ದು ಅದೃಷ್ಟವಶಾತ್ ಬಚಾವ್​ ಆಗಿದ್ದಾರೆ. ಘಟನಾ ಸ್ಥಳಕ್ಕೆ ಕೋಲಾರ ಎಸ್​ಪಿ ನಿಖಿಲ್​.ಬಿ, ಎಫ್​ಎಸ್​ಎಲ್‌ ಹಾಗೂ ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದೆ.

ಮೃತ ದಿವ್ಯಶ್ರೀ ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತಿ ಪದ್ಮನಾಭ್ ಉದ್ಯಮಿ ಆಗಿದ್ದಾರೆ. ಶಿಕ್ಷಕಿ ಕೊಲೆಯಿಂದ ಸದ್ಯ ಮುಳಬಾಗಿಲು ಜನರು ಬೆಚ್ಚಿಬಿದಿದ್ದಾರೆ. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕೂಡ ಭೇಟಿ ನೀಡಿದ್ದಾರೆ.

ಶಾರ್ಟ್ ಸರ್ಕೀಟ್​ನಿಂದ ಅಗ್ನಿ ಅವಘಡ: 78 ಕುರಿಗಳು ಬೆಂಕಿಗಾಹುತಿ

ಉತ್ತರ ಕನ್ನಡ: ಶಾರ್ಟ್ ಸರ್ಕೀಟ್​ನಿಂದ 78 ಕುರಿಗಳು ಬೆಂಕಿಗಾಹುತಿ ಆಗಿರುವಂತಹ ಘಟನೆ ಜಿಲ್ಲೆಯ ಮುಂಡಗೋಡ ಪಟ್ಟಣದ ಹೊರವಲಯದಲ್ಲಿರುವ ಕುರಿಸಾಕಾಣಿಕಾ ಕೇಂದ್ರದಲ್ಲಿ ನಡೆದಿದೆ. ನಜೀರ್ ಅಹ್ಮದ ದರ್ಗಾವಾಲೆ ಎಂಬುವವರಿಗೆ ಕುರಿಸಾಕಾಣಿಕಾ ಕೇಂದ್ರ ಸೇರಿದೆ. ಮಧ್ಯಾಹ್ನದವರೆಗೆ ತೋಟದಲ್ಲಿದ್ದ ನಜೀರ್ ಊಟಕ್ಕೆಂದು ಮನೆಗೆ ಬಂದ ಬಳಿಕ ಅವಘಡ ಸಂಭವಿಸಿದೆ.

ಇದನ್ನೂ ಓದಿ: ನೆಲಮಂಗಲ: ಟೆಂಪೊ ಮತ್ತು ಕ್ಯಾಂಟರ್ ನಡುವೆ ಡಿಕ್ಕಿ, ಮೂವರು ದುರ್ಮರಣ

ಕುರಿಗಳ ಎಷ್ಟೆ ಅರಚಿದರು ಯಾರೂ ಬರದ ಹಿನ್ನೆಲೆ ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾಗಿವೆ. ಬೆಂಕಿಯನ್ನು ಕಂಡು ಸ್ಥಳಿಯರು ಅಗ್ನಿಶಾಮಕ ಇಲಾಖೆಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ಬೆಂಕಿ ಆರಿಸುವಷ್ಟರಲ್ಲಿ ಎಲ್ಲ ಕುರಿಗಳು ಸುಟ್ಟು ಭಸ್ಮ ಆಗಿದ್ದವು. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಂದಾಯ ಇಲಾಖೆ, ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ನೈಸ್ ರಸ್ತೆಯಲ್ಲಿ ಬೈಕ್ ಅಪಘಾತಕ್ಕೀಡಾಗಿ ಸವಾರ ಸಾವು

ಬೆಂಗಳೂರು: ಬ್ರಿಡ್ಜ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್​ ಸವಾರ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರಿನ ಜ್ಞಾನಭಾರತಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ಯಾನೆ ಮಾರಿಯೋ ಸಂತೋಷ್(19) ಮೃತ ಸವಾರ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.