4 ದಿನದ ಅವಳಿ ಶಿಶುಗಳ ಜನನ ಪ್ರಮಾಣಪತ್ರ ಮಾಡಿಸಲು ಹೋದಾಗ ಬಾಂಬ್​ ಸ್ಫೋಟ, ಮಕ್ಕಳು ಸಾವು

ಅವಳಿ ಶಿಶುಗಳ ಜನನ ಪ್ರಮಾಣಪತ್ರ ಮಾಡಿಸುತ್ತಿದ್ದಾಗ ಬಾಂಬ್​ ಸ್ಫೋಟಗೊಂಡು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಗಾಜಾದಲ್ಲಿ ನಡೆದಿದೆ. ಇಬ್ಬರು ಮಕ್ಕಳ ಜನನವನ್ನು ನೋಂದಾಯಿಸಲು ಅವರು ಸರ್ಕಾರಿ ಕಚೇರಿಗೆ ತೆರಳಿದ್ದರು, ಅಲ್ಲಿ ಇಸ್ರೇಲ್​ ವೈಮಾನಿಕ ದಾಳಿ ನಡೆಸಿದ್ದು, ಮೊಹಮ್ಮದ್ ಅಬು ಅಲ್ ಕುಮ್ಸನ್​ ಅವರ ಎರಡು ಶಿಶುಗಳು, ಪತ್ನಿ, ಅತ್ತೆ, ಮಗ ಅಸ್ರ್​ ಮಗಳು ಐಸಲ್ ಕೂಡ ಮೃತಪಟ್ಟಿದ್ದಾರೆ.

4 ದಿನದ ಅವಳಿ ಶಿಶುಗಳ ಜನನ ಪ್ರಮಾಣಪತ್ರ ಮಾಡಿಸಲು ಹೋದಾಗ ಬಾಂಬ್​ ಸ್ಫೋಟ, ಮಕ್ಕಳು ಸಾವು
ಶಿಶುಗಳ ಸಾವುImage Credit source: Thelallanntop.com
Follow us
ನಯನಾ ರಾಜೀವ್
|

Updated on:Aug 14, 2024 | 10:20 AM

ನಾಲ್ಕು ದಿನದ ಅವಳಿ ಶಿಶುಗಳ ಜನನ ಪ್ರಮಾಣಪತ್ರ ಮಾಡಿಸುತ್ತಿದ್ದಾಗ ಬಾಂಬ್​ ಸ್ಫೋಟಗೊಂಡು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಗಾಜಾದಲ್ಲಿ ನಡೆದಿದೆ. ಇಬ್ಬರು ಮಕ್ಕಳ ಜನನವನ್ನು ನೋಂದಾಯಿಸಲು ಅವರು ಸರ್ಕಾರಿ ಕಚೇರಿಗೆ ತೆರಳಿದ್ದರು, ಅಲ್ಲಿ ಇಸ್ರೇಲ್​ ವೈಮಾನಿಕ ದಾಳಿ ನಡೆಸಿದ್ದು, ಮೊಹಮ್ಮದ್ ಅಬು ಅಲ್ ಕುಮ್ಸನ್​ ಅವರ ಎರಡು ಶಿಶುಗಳು, ಪತ್ನಿ, ಅತ್ತೆ, ಮಗ ಅಸ್ರ್​ ಮಗಳು ಐಸಲ್ ಕೂಡ ಮೃತಪಟ್ಟಿದ್ದಾರೆ.

ಕುಮ್ಸನ್ ಸರ್ಕಾರಿ ಕಚೇರಿಯಲ್ಲಿದ್ದಾಗ ಅಕ್ಕಪಕ್ಕದ ಮನೆಯವರು ಕರೆ ಮಾಡಿ ಬಾಲಾಹ್​ನಲ್ಲಿರುವ ನಿಮ್ಮ ಮನೆಯ ಮೇಲೆ ಬಾಂಬ್​ ದಾಳಿ ನಡೆದಿದೆ ಎನ್ನುವ ವಿಚಾರ ಕೇಳಿದಾಗ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧದಲ್ಲಿ 115 ನವಜಾತ ಶಿಶುಗಳು ಸಾವನ್ನಪ್ಪಿವೆ. ಕುಮ್ಸನ್ ಮನೆಯ ಮೇಲೆ ಶೆಲ್ ಬಿದ್ದಿದೆ. ಯುದ್ಧದ ಆರಂಭಿಕ ವಾರಗಳಲ್ಲಿ, ಕುಮ್ಸನ್ ಹಿಂದೆ ವಾಸಿಸುತ್ತಿದ್ದ ಸ್ಥಳವನ್ನು ಬಿಟ್ಟು ಬೇರೆಡೆಗೆ ಬಂಂದಿದ್ದರು. ಇಸ್ರೇಲಿ ಸೇನೆಯ ಸೂಚನೆ ಮೇರೆಗೆ ಗಾಜಾ ಪಟ್ಟಿಯ ಕೇಂದ್ರ ಭಾಗದಲ್ಲಿ ಆಶ್ರಯ ಪಡೆದರು.

ಮತ್ತಷ್ಟು ಓದಿ: ಹಮಾಸ್‌ನ ರಾಕೆಟ್ ದಾಳಿ ವಿಫಲವಾದ ಬಳಿಕ ಇಸ್ರೇಲಿ ಮಿಲಿಟರಿ ಸೈಟ್‌ಗಳ ಮೇಲೆ ವೈಮಾನಿಕ ದಾಳಿ ಮಾಡಿದ ಇರಾನ್

ಗಾಜಾ ನಗರದಲ್ಲಿ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯಾದವರಿಗೆ ಆಶ್ರಯ ನೀಡುವ ಶಾಲೆಯ ಮೇಲೆ ದಾಳಿ ನಡೆಸಲಾಯಿತು. ಈ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಶಾಲೆಯು ಹಮಾಸ್‌ನ ಸಕ್ರಿಯ ಸೇನಾ ಕೇಂದ್ರವಾಗಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ. ಆದರೆ, ಹಮಾಸ್ ಇದನ್ನು ನಿರಾಕರಿಸಿದೆ.

ಅಕ್ಟೋಬರ್ 7, 2023 ರಂದು, ಹಮಾಸ್ ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿತು. ಮತ್ತು ಸರಿಸುಮಾರು 1,200 ಜನರನ್ನು ಕೊಂದರು. ಅವರಲ್ಲಿ ಹೆಚ್ಚಿನವರು ನಾಗರಿಕರು ಮತ್ತು ಸುಮಾರು 250 ಜನರನ್ನು ಅಪಹರಿಸಲಾಯಿತು. ಇದು ಯುದ್ಧದ ಆರಂಭವಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:19 am, Wed, 14 August 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್