ಎಮ್ಮೆ ಸಗಣಿಯನ್ನೂ ಬಿಡದ ಪಾಕ್ ಸರ್ಕಾರ!: ಇನ್ಮುಂದೆ ಎಲ್ಲ ರೈತರು ಸಗಣಿ ತೆರಿಗೆ ನೀಡುವುದು ಕಡ್ಡಾಯ

ಪಾಕಿಸ್ತಾನದ ಪಂಜಾಬ್‌ನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಎಮ್ಮೆಗಳಿಗೆ ದಿನಕ್ಕೆ 30 ಪಾಕ್ ರೂಪಾಯಿ 'ಗೋಬರ್ ತೆರಿಗೆ' ವಿಧಿಸಲಾಗಿದೆ. 'ಸುತ್ರಾ ಪಂಜಾಬ್' ಯೋಜನೆಯಡಿ ಬಯೋಗ್ಯಾಸ್ ಉತ್ಪಾದನೆಗೆ ಸಗಣಿ ಬಳಸಲು ಈ ನಿರ್ಧಾರ ಕೈಗೊಂಡಿದೆ. ಆದರೆ, ಆಹಾರ ಮತ್ತು ವಿದ್ಯುತ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಣ್ಣ ರೈತರಿಗೆ ಇದು ಭಾರಿ ಆರ್ಥಿಕ ಹೊರೆಯಾಗಿದೆ. ವಿರೋಧ ಪಕ್ಷಗಳು ಇದನ್ನು ಸರ್ಕಾರದ ದಿವಾಳಿತನದ ಪರಮಾವಧಿ ಎಂದು ಟೀಕಿಸಿವೆ.

ಎಮ್ಮೆ ಸಗಣಿಯನ್ನೂ ಬಿಡದ ಪಾಕ್ ಸರ್ಕಾರ!: ಇನ್ಮುಂದೆ ಎಲ್ಲ ರೈತರು ಸಗಣಿ ತೆರಿಗೆ ನೀಡುವುದು ಕಡ್ಡಾಯ
ಸಾಂದರ್ಭಿಕ ಚಿತ್ರ

Updated on: Apr 04, 2026 | 12:50 PM

ಲಾಹೋರ್, ಏ. 04: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಎಷ್ಟು ತಾರಕಕ್ಕೇರಿದೆ ಎಂದರೆ, ಅಲ್ಲಿನ ಸರ್ಕಾರ ಈಗ ಜಾನುವಾರುಗಳ ತ್ಯಾಜ್ಯಕ್ಕೂ ತೆರಿಗೆ ವಿಧಿಸಲು ಮುಂದಾಗಿದೆ. ಮುಖ್ಯಮಂತ್ರಿ ಮರಿಯಮ್ ನವಾಜ್ ನೇತೃತ್ವದ ಆಡಳಿತವು ಪ್ರತಿ ಎಮ್ಮೆಗೆ ದಿನಕ್ಕೆ 30 ಪಾಕಿಸ್ತಾನಿ ರೂಪಾಯಿ (PKR 30) ‘ಗೋಬರ್ ಟ್ಯಾಕ್ಸ್’ (ಸಗಣಿ ತೆರಿಗೆ) ವಿಧಿಸುವುದಾಗಿ ಘೋಷಿಸಿದೆ.

ಸರ್ಕಾರವು ಈ ಕ್ರಮವನ್ನು ‘ಸುತ್ರಾ ಪಂಜಾಬ್’ (ಸ್ವಚ್ಛ ಪಂಜಾಬ್) ಬಯೋಗ್ಯಾಸ್ ಕಾರ್ಯಕ್ರಮದ ಅಡಿಯಲ್ಲಿ ಜಾರಿಗೆ ತರುತ್ತಿದೆ. ಪ್ರಾಂತ್ಯದಾದ್ಯಂತ ಇರುವ 168 ಜಾನುವಾರು ಕಾಲನಿಗಳನ್ನು ಗುರುತಿಸಲಾಗಿದ್ದು, ಅಲ್ಲಿನ ಪ್ರತಿ ಎಮ್ಮೆಯ ಸಗಣಿಯನ್ನು ಸಂಗ್ರಹಿಸಿ ಬಯೋಗ್ಯಾಸ್ ಉತ್ಪಾದಿಸಲು ಮತ್ತು ನಗರದ ನೈರ್ಮಲ್ಯ ಕಾಪಾಡಲು ಈ ತೆರಿಗೆಯನ್ನು ಬಳಸಲಾಗುವುದು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಈ ಹೊಸ ತೆರಿಗೆಯು ರೈತರಿಗೆ ಭಾರಿ ಹೊರೆಯಾಗಲಿದೆ. ಒಂದು ಎಮ್ಮೆಗೆ ದಿನಕ್ಕೆ 30 ರೂಪಾಯಿಯಂತೆ ಲೆಕ್ಕ ಹಾಕಿದರೆ, ವರ್ಷಕ್ಕೆ ಸುಮಾರು 11,000 ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಈಗಾಗಲೇ ಪಶು ಆಹಾರದ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮತ್ತು ಹಣದುಬ್ಬರದಿಂದ ಕಂಗಾಲಾಗಿರುವ ಸಣ್ಣ ರೈತರು ಈ ನಿರ್ಧಾರದಿಂದ ಕಂಗೆಟ್ಟಿದ್ದಾರೆ.

ಇದನ್ನೂ ಓದಿ: ಆಮೇಲೆ ಶಾಂತಿ ಜಪ ಮಾಡಿ, ಮೊದಲು ನಮ್ಮ ಸಾಲ ವಾಪಸ್ ಕೊಡಿ ಎಂದು ಪಾಕಿಸ್ತಾನವನ್ನು ಕೇಳಿದ ಯುಎಇ

“ಇದು ಸರ್ಕಾರದ ದಿವಾಳಿತನದ ಪರಮಾವಧಿ” ಎಂದು ವಿರೋಧ ಪಕ್ಷಗಳು ಟೀಕಿಸಿವೆ. ರಾಜ್ಯದಲ್ಲಿ ಆದಾಯ ಸಂಗ್ರಹಿಸಲು ಬೇರೆ ಯಾವುದೇ ದಾರಿ ಇಲ್ಲದೆ ಈಗ ಎಮ್ಮೆಗಳ ಸಗಣಿಯನ್ನು ಅಳತೆ ಮಾಡುವ ಸ್ಥಿತಿಗೆ ಸರ್ಕಾರ ತಲುಪಿದೆ ಎಂದು ಲೇವಡಿ ಮಾಡಲಾಗಿದೆ. ಶ್ರೀಮಂತ ರಾಜಕಾರಣಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರೆ, ಬಡ ರೈತನ ಮೇಲೆ ಈ ರೀತಿ ತೆರಿಗೆ ಹೇರಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us