AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದ ದೀಪ್ತಿ ಶರ್ಮಾ

Deepti Sharma world record: 2026ರ ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ತಂಡ ಥೈಲ್ಯಾಂಡ್‌ ವಿರುದ್ಧ 94 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ದೀಪ್ತಿ ಶರ್ಮಾ ಕೇವಲ 1.1 ಓವರ್‌ಗಳಲ್ಲಿ ರನ್‌ ನೀಡದೆ 3 ವಿಕೆಟ್ ಕಬಳಿಸಿ ಮಿಂಚಿದರು. ಇದು ಅವರ 150ನೇ T20 ಪಂದ್ಯವಾಗಿದ್ದು, ಅಂತರರಾಷ್ಟ್ರೀಯ ಮಹಿಳಾ T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಗೂ ಅವರು ಭಾಜನರಾಗಿದ್ದಾರೆ.

ಪೃಥ್ವಿಶಂಕರ
|

Updated on: Aug 31, 2026 | 4:56 PM

Share
2026 ರ ಮಹಿಳಾ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿ ಥೈಲ್ಯಾಂಡ್‌ ತಂಡವನ್ನು ಎದುರಿಸಿದ ಹರ್ಮನ್‌ಪ್ರೀತ್ ಪಡೆ 94 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 159 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಥೈಲ್ಯಾಂಡ್ 65 ರನ್​ಗಳಿಗೆ ಆಲೌಟ್ ಆಯಿತು. ಥೈಲ್ಯಾಂಡ್‌ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ದೀಪ್ತಿ ಶರ್ಮಾ ಪ್ರಮುಖ ಪಾತ್ರವಹಿಸಿದರು(PC-PTI).

1 / 5
ಈ ಪಂದ್ಯದಲ್ಲಿ ಕೇವಲ 1.1 ಓವರ್​ಗಳನ್ನು ಬೌಲ್ ಮಾಡಿದ ದೀಪ್ತಿ ಒಂದೇ ಒಂದು ರನ್ ನೀಡಿದೆ ಪ್ರಮುಖ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಈ ಪಂದ್ಯವನ್ನು ಸ್ಮರಣೀಯಗೊಳಿಸಿದರು. ವಾಸ್ತವವಾಗಿ ಈ ಪಂದ್ಯ ದೀಪ್ತಿ ಶರ್ಮಾ ಅವರಿಗೆ ಸ್ಮರಣೀಯವಾಗಿತ್ತು. ಏಕೆಂದರೆ ಇದು ಅವರ 150 ನೇ ಅಂತರರಾಷ್ಟ್ರೀಯ ಟಿ20  ಪಂದ್ಯವಾಗಿತ್ತು(PC-PTI).

2 / 5
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಭಾರತದ ಮಹಿಳಾ ಆಟಗಾರ್ತಿಯರಲ್ಲಿ ದೀಪ್ತಿ ಮೂರನೇ ಸ್ಥಾನಕ್ಕೇರಿದರು. ದೀಪ್ತಿಗಿಂತ ಮೊದಲು ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನ ಈ ಸಾಧನೆ ಮಾಡಿದ್ದರು. ಇದರ ಜೊತೆಗೆ ದೀಪ್ತಿ ತಮ್ಮ ಬೌಲಿಂಗ್​ನಲ್ಲೂ ಇತಿಹಾಸ ಸೃಷ್ಟಿಸಿದರು(PC-PTI).

3 / 5
ಥೈಲ್ಯಾಂಡ್‌ ವಿರುದ್ಧ 3 ವಿಕೆಟ್‌ಗಳನ್ನು ಕಬಳಿಸಿದ ದೀಪ್ತಿ ಅಂತರರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್​ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಇದೀಗ ಅಗ್ರಸ್ಥಾನಕ್ಕೇರಿದ್ದಾರೆ. ಏಷ್ಯಾಕಪ್ ಆರಂಭಕ್ಕೂ ಮುನ್ನ ದೀಪ್ತಿ ಮತ್ತು ಥೈಲ್ಯಾಂಡ್‌ ತಂಡದ ಆಟಗಾರ್ತಿ ತಿಪಾಚಾ ತಲಾ 168 ವಿಕೆಟ್‌ಗಳೊಂದಿಗೆ ಸಮಬಲ ಸಾಧಿಸಿದ್ದರು. ಆದರೆ ದೀಪ್ತಿ ಥೈಲ್ಯಾಂಡ್‌ ವಿರುದ್ಧ 3 ವಿಕೆಟ್ ಕಬಳಿಸುವ ಮೂಲಕ ತಿಪಾಚಾ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದರು(PC-PTI).

4 / 5
ದೀಪ್ತಿ ಶರ್ಮಾ ಈಗ ಮಹಿಳಾ ಟಿ20ಕ್ರಿಕೆಟ್​ನಲ್ಲಿ ಒಟ್ಟು 171 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ತಿಪಾಚಾ ಪುಟ್ಟವಾಂಗ್ ಒಟ್ಟು 170 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.ಮೂರನೇ ಸ್ಥಾನದಲ್ಲಿರುವ ಹೆನ್ರಿಯೆಟ್ ಇಶಿಮ್ವೆ ಒಟ್ಟು 164 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದುವರೆಗೆ ಒಟ್ಟು 154 ವಿಕೆಟ್‌ಗಳನ್ನು ಪಡೆದಿರುವ ಸೋಫಿ ಎಕ್ಲೆಸ್ಟೋನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಕ್ಯಾರಿ ಚಾನ್ 153 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ(PC-PTI).

5 / 5
Follow Us
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು

ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK

ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ

ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ

ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ

ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ

CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ

ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ

ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ