ಪಾಕಿಸ್ತಾನದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿ ಇತಿಹಾಸ ಸೃಷ್ಟಿಸಿದ ಸಿಖ್ ಅಧಿಕಾರಿ ಹರ್ಚರಣ್ ಸಿಂಗ್

ಸಿಖ್ ಅಧಿಕಾರಿಯಾದ ಮೇಜರ್ ಹರ್ಚರಣ್ ಸಿಂಗ್ ಪಾಕಿಸ್ತಾನದ ಇತಿಹಾಸದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ಪಡೆದ ಮೊದಲ ಸಿಖ್ ಸೈನಿಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಮೊದಲ ಸಿಖ್ ಅಧಿಕಾರಿ ಕರ್ನಲ್ ಹುದ್ದೆಗೆ ಏರಿದಂತಾಗಿದೆ. 2025ರ ಕೊನೆಯಲ್ಲಿ ನಡೆಸಿದ ಆಯ್ಕೆ ಮಂಡಳಿಯ ಮೌಲ್ಯಮಾಪನದ ನಂತರ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಆಗಿ ಬಡ್ತಿ ನೀಡಲಾಯಿತು.

ಪಾಕಿಸ್ತಾನದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿ ಇತಿಹಾಸ ಸೃಷ್ಟಿಸಿದ ಸಿಖ್ ಅಧಿಕಾರಿ ಹರ್ಚರಣ್ ಸಿಂಗ್
Harcharan Singh
Image Credit source: x

Updated on: Feb 12, 2026 | 6:02 PM

ಇಸ್ಲಮಾಬಾದ್, ಫೆಬ್ರವರಿ 12: ಪಾಕಿಸ್ತಾನಿ ಸೇನೆಯಲ್ಲಿ ಉನ್ನತ ಸ್ಥಾನ ಪಡೆಯುವ ಮೂಲಕ ಸಿಖ್ ಅಧಿಕಾರಿಯೊಬ್ಬರು ಇತಿಹಾಸ ನಿರ್ಮಿಸಿದ್ದಾರೆ. ಪಾಕಿಸ್ತಾನದ (Pakistan) ಸಿಖ್ ಸಮುದಾಯದ ಮೇಜರ್ ಹರ್ಚರಣ್ ಸಿಂಗ್ ಈಗ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಈ ಮೂಲಕ ಈ ಹುದ್ದೆಗೇರಿದ ಮೊದಲ ಸಿಖ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುರುನಾನಕ್ ಅವರ ಜನ್ಮಸ್ಥಳವಾದ ನಂಕಾನಾ ಸಾಹಿಬ್‌ನಲ್ಲಿ 1987ರಲ್ಲಿ ಜನಿಸಿದ ಹರ್ಚರಣ್ ಸಿಂಗ್ ಅವರಿಗೆ 2025ರಲ್ಲಿ ನಡೆದ ಬಡ್ತಿ ಮಂಡಳಿಯ ಮೌಲ್ಯಮಾಪನ ಪ್ರಕ್ರಿಯೆಯ ನಂತರ ಲೆಫ್ಟಿನೆಂಟ್ ಕರ್ನಲ್ ಆಗಿ ಬಡ್ತಿ ನೀಡಲಾಯಿತು.

ಅಲ್ಪಸಂಖ್ಯಾತರು ಹಅನೇಕ ಸವಾಲುಗಳನ್ನು ಎದುರಿಸುವ ದೇಶವಾದ ಪಾಕಿಸ್ತಾನದಲ್ಲಿ ಹರ್ಚರಣ್ ಸಿಂಗ್ ಅವರ ಈ ಬಡ್ತಿಯು ಅರ್ಹತೆ ಆಧಾರಿತ ಒಂದು ದೊಡ್ಡ ಪ್ರಬಲ ಉದಾಹರಣೆಯಾಗಿದೆ. ಪಂಜಾಬ್‌ನ ಅಲ್ಪಸಂಖ್ಯಾತ ವ್ಯವಹಾರಗಳ ಪ್ರಾಂತೀಯ ಸಚಿವ ರಮೇಶ್ ಸಿಂಗ್ ಅರೋರಾ ಈ ಬಗ್ಗೆ ಮಾಹಿತಿ ನೀಡಿದ್ದು, “ಅನೇಕ ಕ್ರಿಶ್ಚಿಯನ್ನರು ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರೂ, ಯಾವುದೇ ಹಿಂದೂ ಅಥವಾ ಸಿಖ್ ಈ ಹಿಂದೆ ಈ ಉನ್ನತ ಹುದ್ದೆಗೆ ಅರ್ಹತೆ ಪಡೆದಿರಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಿಂದ ವಲಸೆ ಬಂದ ದಲಿತ ಹಿಂದೂಗಳಿಗೆ ವಸತಿ ಕಲ್ಪಿಸಿ; ಸುಪ್ರೀಂ ಕೋರ್ಟ್ ಆದೇಶ

ಹರ್ಚರಣ್ ಸಿಂಗ್ 2007ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಕ್ಯಾಪ್ಟನ್ ಆಗಿ ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ಸೇರಿದರು. ಅವರು ಆರ್ಡನೆನ್ಸ್ ಕಾರ್ಪ್ಸ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದು ಬಲೂಚ್ ರೆಜಿಮೆಂಟ್‌ನ 12ನೇ ಬೆಟಾಲಿಯನ್‌ಗೆ ವರ್ಗಾವಣೆಗೆ ಕಾರಣವಾಯಿತು. ಮೇಜರ್ ಹುದ್ದೆಯನ್ನು ಅಲಂಕರಿಸುವಾಗ ಅವರು ಅನೇಕ ಕಾರ್ಯಾಚರಣೆಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:02 pm, Thu, 12 February 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us