ಪಾಕಿಸ್ತಾನದಲ್ಲಿ ಶಿಕ್ಷಕ-ಶಿಕ್ಷಕಿಯರಿಗೊಂದು ಕಟ್ಟುನಿಟ್ಟಿನ ನಿಯಮ ಜಾರಿ; ತಾಲಿಬಾನ್​ನಂತೆ ಆಯ್ತು ಎಂದ ನೆಟ್ಟಿಗರು

TV9kannada Web Team

TV9kannada Web Team | Edited By: Lakshmi Hegde

Updated on: Sep 09, 2021 | 9:58 AM

Pakistan: ಪ್ರತಿ ಶಿಕ್ಷಕರ ದೈಹಿಕ ನೋಟ ಶಿಸ್ತಿನಿಂದ ಇರಬೇಕು. ಅದರಲ್ಲಿ ಪ್ರತಿದಿನ ಸ್ನಾನ ಮಾಡಿ, ಉತ್ತಮವಾದ ಪರ್​ಫ್ಯೂಮ್​ ಹಾಕಿ ಶಾಲೆಗೆ ಹೋಗಬೇಕು. ಉಗುರುಗಳೆಲ್ಲ ಸರಿಯಾಗಿ ಕತ್ತರಿಸಿರಬೇಕು.

ಪಾಕಿಸ್ತಾನದಲ್ಲಿ ಶಿಕ್ಷಕ-ಶಿಕ್ಷಕಿಯರಿಗೊಂದು ಕಟ್ಟುನಿಟ್ಟಿನ ನಿಯಮ ಜಾರಿ; ತಾಲಿಬಾನ್​ನಂತೆ ಆಯ್ತು ಎಂದ ನೆಟ್ಟಿಗರು
ಪಾಕಿಸ್ತಾನ ಶಾಲೆಯೊಂದರ ಚಿತ್ರ

ಇನ್ನುಮುಂದೆ ಶಾಲಾ-ಕಾಲೇಜುಗಳ ಶಿಕ್ಷಕಿಯರು ಜೀನ್ಸ್ ಪ್ಯಾಂಟ್​ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸುವಂತಿಲ್ಲ ಎಂದು ಪಾಕಿಸ್ತಾನದ ಫೆಡರಲ್​ ಶಿಕ್ಷಣ ನಿರ್ದೇಶನಾಲಯ (FDE) ಅಧಿಸೂಚನೆ ಹೊರಡಿಸಿದೆ. ಇದು ಪುರುಷ ಶಿಕ್ಷಕರಿಗೂ ಅನ್ವಯ. ಅವರೂ ಕೂಡ ಬಿಗಿಯಾದ ಟಿ-ಶರ್ಟ್, ಜೀನ್ಸ್​ ಪ್ಯಾಂಟ್​ಗಳನ್ನು ಧರಿಸಿ ಶಾಲಾ-ಕಾಲೇಜಿಗೆ ಬರುವಂತಿಲ್ಲ. ಈ ಅಧಿಸೂಚನೆಯನ್ನು ಎಫ್​ಡಿಇ ಎಲ್ಲ ಶಾಲಾ-ಕಾಲೇಜುಗಳ ಪ್ರಿನ್ಸಿಪಲ್​, ಆಡಳಿತ ಮಂಡಳಿಗೂ ಕಳಿಸಿಕೊಟ್ಟಿದೆ. ‘ಇನ್ನು ಮುಂದೆ ಪ್ರತಿ ಶಿಕ್ಷಕರೂ ಶಿಸ್ತು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಸರಿಯಾಗಿ ಪಾಲನೆ ಮಾಡಬೇಕು. ಆ ಬಗ್ಗೆ ಗಮನ ಇಡಲಾಗವುದು’ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದಾಗಿ  ಎಂದು ಪಾಕ್​ ಪತ್ರಿಕೆ ಡಾನ್ ವರದಿ ಮಾಡಿದೆ.  

ಪ್ರತಿ ಶಿಕ್ಷಕರ ದೈಹಿಕ ನೋಟ ಶಿಸ್ತಿನಿಂದ ಇರಬೇಕು. ಅದರಲ್ಲಿ ಪ್ರತಿದಿನ ಸ್ನಾನ ಮಾಡಿ, ಉತ್ತಮವಾದ ಪರ್​ಫ್ಯೂಮ್​ ಹಾಕಿ ಶಾಲೆಗೆ ಹೋಗಬೇಕು. ಉಗುರುಗಳೆಲ್ಲ ಸರಿಯಾಗಿ ಕತ್ತರಿಸಿರಬೇಕು. ಇನ್ನು ಪುರುಷರು ತಮ್ಮ ಗಡ್ಡಗಳನ್ನು ಆಗಾಗ ಟ್ರಿಮ್​ ಮಾಡಿ, ಶಿಸ್ತಿನಿಂದ ಇಟ್ಟುಕೊಳ್ಳಬೇಕು. ತಲೆಕೂದಲು ಬಿಡುವಂತಿಲ್ಲ ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಶಿಕ್ಷಕರು ತಮ್ಮ ಶಾಲಾ ಅವಧಿಯಲ್ಲಿ, ಶಾಲಾ-ಕಾಲೇಜುಗಳ ಕ್ಯಾಂಪಸ್​​ನಲ್ಲಿ ಇನ್ಯಾವುದೇ ಕಾರಣಕ್ಕೆ ಇದ್ದಾಗ ಮತ್ತು ಸಭೆಗಳಲ್ಲಿ ಪಾಲ್ಗೊಳ್ಳುವಾಗ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಮಹಿಳೆಯರ ಉಡುಪು ಹೇಗಿರಬೇಕು? ಮಹಿಳಾ ಶಿಕ್ಷಕರು ಜೀನ್ಸ್​ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸಿ ಬರುವಂತಿಲ್ಲ. ಸರಳವಾದ, ಶಿಸ್ತಿನಿಂದ ಇರುವ ಸಲ್ವಾರ್​ ಕಮೀಜ್​, ಪೈಜಾಮಾ ಮಾದರಿಯ ಪ್ಯಾಂಟ್​, ಸಡಿಲವಾದ ಶರ್ಟ್​ ಬಳಸಬಹುದು. ದುಪ್ಪಟ್ಟಾ, ಶಾಲುಗಳು ಇರಬೇಕು. ಹಿಜಾಬ್​, ಬುರ್ಕಾ ಧರಿಸಬಹುದು. ಚಳಿಗಾಲಲ್ಲಿ ಸ್ವೆಟರ್​, ಬ್ಲೇಜರ್​, ಕೋಟ್​ ಇತ್ಯಾದಿಗಳನ್ನು ಧರಿಸಬಹುದು. ಇದು ಪುರುಷರಿಗೂ ಅನ್ವಯ ಆಗಲಿದೆ.  ಆದರೆ ಪಾಕಿಸ್ತಾನದ ಈ ಹೊಸ ನಿಯಮಗಳು ನೆಟ್ಟಿಗರಿಂದ ಆಕ್ರೋಶಕ್ಕೆ ಗುರಿಯಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಮಾಡಿದಂತೆ, ಇಲ್ಲೂ ಕೂಡ ನಿರ್ಬಂಧ ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಆಟೋ ರಾಜ’, ‘ನಾ ನಿನ್ನ ಬಿಡಲಾರೆ’ ಚಿತ್ರಗಳ ನಿರ್ಮಾಪಕ ಸಿ. ಜಯರಾಮ್​ ನಿಧನ

Ganesh Chaturthi 2021: ಗಣೇಶ ಚತುರ್ಥಿಗೆ ಗಣಪತಿಯನ್ನು ಸಿಂಗರಿಸಲು ಇಲ್ಲಿದೆ ಸರಳ ಉಪಾಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada