ಪಾಕಿಸ್ತಾನದ ಖ್ಯಾತ ಪರಮಾಣು ವಿಜ್ಞಾನಿ ಡಾ. ಅಬ್ದುಲ್​ ಖಾದಿರ್​ ಖಾನ್ ನಿಧನ; ಇಮ್ರಾನ್​ ಖಾನ್​​ ಸಂತಾಪ

2006ರಲ್ಲಿ ಡಾ. ಖಾದಿರ್​ಗೆ ಪ್ರಾಸ್ಟೇಟ್​ ಕ್ಯಾನ್ಸರ್​ ಇರುವುದು ಗೊತ್ತಾಯ್ತು. ಕಳೆದ ಆಗಸ್ಟ್​​ನಲ್ಲಿ ಕೊವಿಡ್​ 19 ಸೋಂಕಿಗೂ ಒಳಗಾಗಿ, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.

ಪಾಕಿಸ್ತಾನದ ಖ್ಯಾತ ಪರಮಾಣು ವಿಜ್ಞಾನಿ ಡಾ. ಅಬ್ದುಲ್​ ಖಾದಿರ್​ ಖಾನ್ ನಿಧನ; ಇಮ್ರಾನ್​ ಖಾನ್​​ ಸಂತಾಪ
ಡಾ. ಖಾದಿರ್​ ಖಾನ್​
Follow us
TV9 Web
| Updated By: Lakshmi Hegde

Updated on: Oct 10, 2021 | 2:23 PM

ಪಾಕಿಸ್ತಾನದ ಖ್ಯಾತ ಪರಮಾಣು ವಿಜ್ಞಾನಿ, ಪರಮಾಣು ಕಾರ್ಯಸೂಚಿಯ ಪಿತಾಮಹ ಎಂದೇ ಕರೆಯಲ್ಪಟ್ಟಿದ್ದ ಡಾ. ಅಬ್ದುಲ್​ ಖಾದಿರ್​ ಖಾನ್ (Nuclear scientist Dr Abdul Qadeer Khan)​ ಇಂದು ಇಸ್ಲಮಾಬಾದ್​​ನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 85ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಡಾ. ಅಬ್ದುಲ್​ ಖಾದಿರ್​ ಖಾನ್​ ಆರೋಗ್ಯ ತುಂಬ ಹದಗೆಟ್ಟಿತ್ತು..ಅವರನ್ನು ಇಸ್ಲಮಾಬಾದ್​​ನ ಕೆಆರ್​ಎಲ್​ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮುಂಜಾಣೆ 7 ಗಂಟೆ ಹೊತ್ತಿಗೆ ಮೃತಪಟ್ಟಿದ್ದಾರೆ. ಡಾ.ಖಾದಿರ್​ ಸಾವಿಗೆ ಶ್ವಾಸಕೋಶದ ಸಮಸ್ಯೆ ಕಾರಣ ಎಂದು ವೈದ್ಯರು ಹೇಳಿದ್ದಾರೆ ಎಂದು ಪಾಕ್​​ನ ಜಿಯೋ ನ್ಯೂಸ್​ ಟಿವಿ ವರದಿ ಮಾಡಿದೆ.

ಖಾದಿರ್​ ಖಾನ್​ ಸಾವಿಗೆ ಸಂತಾಪ ಸೂಚಿಸಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಟ್ವೀಟ್​ ಮಾಡಿದ್ದಾರೆ. ಡಾ. ಎ.ಕ್ಯೂ ಖಾನ್​ (ಡಾ.ಖಾದಿರ್  ಖಾನ್​) ಸಾವಿನಿಂದ ನೋವಾಗಿದೆ. ಪಾಕಿಸ್ತಾನದ ಪರಮಾಣು ಕ್ಷೇತ್ರಕ್ಕೆ ಅವರು ನೀಡಿರುವ ಅಪಾರ ಕೊಡುಗೆಯಿಂದ ಇಡೀ ದೇಶಕ್ಕೇ ಪ್ರೀತಿ ಪಾತ್ರರಾಗಿದ್ದರು. ಪಾಕಿಸ್ತಾನದ ಜನರ ಪಾಲಿಗೆ ಅವರು ಈ ದೇಶದ ಐಕಾನ್​ ಆಗಿದ್ದರು ಎಂದು ಹೇಳಿದ್ದಾರೆ.  ಹಾಗೇ, ಪಾಕ್​​ನ ರಕ್ಷಣಾ ಸಚಿವ ಫರ್ವೇಜ್​ ಖಟ್ಟಕ್​ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಡಾ. ಖಾದಿರ್​ ಸಾವು ಪಾಕಿಸ್ತಾನಕ್ಕೆ ಬಹುದೊಡ್ಡ ನಷ್ಟ. ಅವರು ದೇಶಕ್ಕೆ ಸಲ್ಲಿಸಿದ ಸೇವೆ ಬಹುದೊಡ್ಡದು. ನಮ್ಮ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

2006 ರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್  ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ವಸ್ತುಗಳನ್ನು ಖರೀದಿಸಲು ಡಾ. ಖಾದಿರ್​ ಸಹಾಯ ಮಾಡಿದ್ದರು. ಅದನ್ನವರು 2004ರಲ್ಲಿ ಒಪ್ಪಿಕೊಂಡಿದ್ದರು. ನಂತರ ಅವರಿಗೆ ಗೃಹಬಂಧನ ವಿಧಿಸಲಾಗಿತ್ತು. ನಂತರ 2006ರಲ್ಲಿ ಡಾ. ಖಾದಿರ್​ಗೆ ಪ್ರಾಸ್ಟೇಟ್​ ಕ್ಯಾನ್ಸರ್​ ಇರುವುದು ಗೊತ್ತಾಯ್ತು. ಕಳೆದ ಆಗಸ್ಟ್​​ನಲ್ಲಿ ಕೊವಿಡ್​ 19 ಸೋಂಕಿಗೂ ಒಳಗಾಗಿದ್ದರು.

ಇದನ್ನೂ ಓದಿ: High Heels Side Effects: ನಿಮಗೆ ಹೈ ಹೀಲ್ಸ್ ಧರಿಸೋದು ಇಷ್ಟಾನಾ? ಆರೋಗ್ಯ ತೊಂದರೆಗಳಾಗಬಹುದು ಎಚ್ಚರ!

Tomato Rate Increase: ದಿಢೀರ್ ಏರಿಕೆ ಕಂಡ ಟೊಮೆಟೊ; ಕೆ.ಜಿಗೆ 60 ರಿಂದ 70 ರೂ