ಇಸ್ಲಾಮಾಬಾದ್ ಸೆಪ್ಟೆಂಬರ್ 21:ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಜನವರಿ 2024 ರ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ (Pakistan) ಚುನಾವಣಾ ಆಯೋಗವು (Election commission) ಗುರುವಾರ ಹೇಳಿದೆ. ಕ್ಷೇತ್ರಗಳ ವಿಂಗಡಣೆಯ
(delimitation )ಕೆಲಸವನ್ನು ತಾನು ಪರಿಶೀಲಿಸಿದ್ದು, ಕ್ಷೇತ್ರಗಳ ವಿಂಗಡಣೆಯ ಆರಂಭಿಕ ಪಟ್ಟಿಯನ್ನು ಸೆಪ್ಟೆಂಬರ್ 27 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಲಿಸಿದ ನಂತರ ನವೆಂಬರ್ 30 ರಂದು ಅಂತಿಮ ಪಟ್ಟಿಯನ್ನು ನೀಡಲಾಗುವುದು ಎಂದು ಅದು ಹೇಳಿದೆ.
2024ರ ಜನವರಿ ಕೊನೆಯ ವಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಆಗಸ್ಟ್ 9 ರಂದು ಅಕಾಲಿಕವಾಗಿ ವಿಸರ್ಜನೆಯಾದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ ನಂತರ 90 ದಿನಗಳಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಹಿಂದಿನ ಸರ್ಕಾರವು ತನ್ನ ಅವಧಿ ಮುಗಿಯುವ ಕೆಲವೇ ದಿನಗಳ ಮೊದಲು ಹೊಸ ಜನಗಣತಿ ಪೂರ್ಣಗೊಂಡ ನಂತರ ಮತ್ತು ಹೊಸ ಕ್ಷೇತ್ರಗಳ ಗಡಿಯನ್ನು ರಚಿಸಿದ ನಂತರವೇ ಚುನಾವಣೆ ನಡೆಸಬಹುದು ಎಂದು ಘೋಷಿಸಿತು.
ಈ ಕ್ರಮವು 90 ದಿನಗಳೊಳಗೆ ನಡೆಯಬೇಕಿದ್ದ ಚುನಾವಣೆಯು ಮುಂದಿನ ವರ್ಷಕ್ಕೆ ವಿಳಂಬವಾಗಬಹುದು ಎಂಬ ಆತಂಕವನ್ನು ಉಂಟುಮಾಡಿದೆ. ಏಕೆಂದರೆ ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮಾರು ನಾಲ್ಕು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.
ಆದಷ್ಟು ಬೇಗನೆ ಚುನಾವಣೆಗಳಿಗೆ ಒತ್ತಾಯಿಸಿದ ಹಲವಾರು ರಾಜಕೀಯ ಪಕ್ಷಗಳಿಂದ ಇಸಿಪಿ ಮೇಲೆ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಡಿಲಿಮಿಟೇಶನ್‌ನ ಅವಧಿಯನ್ನು ಕಡಿಮೆ ಮಾಡುವ ನಿರ್ಧಾರವು ಬಂದಿದೆ.
ಇದನ್ನೂ ಓದಿ: ಅದ್ದೂರಿ ಮದುವೆ, ಬಾಲಿವುಡ್ ಸೆಲಬ್ರಿಟಿಗಳ ಪಾತ್ರ, ಪಾಕಿಸ್ತಾನದ ನಂಟು; ಬೆಟ್ಟಿಂಗ್ ಮಾದೇವನ ಕರ್ಮಕಾಂಡ
ಇಸಿಪಿ 120 ದಿನಗಳಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸಂವಿಧಾನವು ಹೇಳುತ್ತದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ