ಮಾನವೀಯತೆಯ ಹಾದಿ ರೂಪಿಸುವ ಎಐ ಯುಗದ ಆರಂಭದಲ್ಲಿದ್ದೇವೆ; ಪ್ಯಾರಿಸ್​ನಲ್ಲಿ ಪ್ರಧಾನಿ ಮೋದಿ

|

Updated on: Feb 11, 2025 | 4:40 PM

ನಾವು ಮಾನವೀಯತೆಯ ಹಾದಿಯನ್ನು ರೂಪಿಸುವ ಎಐ (ಕೃತಕ ಬುದ್ಧಿಮತ್ತೆ) ಯುಗದ ಉದಯದಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫ್ರಾನ್ಸ್​ನಲ್ಲಿ ಆಯೋಜಿಸಿದ್ದ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರ ಮೋದಿ, ಭಾರತ ತನ್ನದೇ ಆದ ದೊಡ್ಡ ಭಾಷಾ ಮಾದರಿಯನ್ನು ನಿರ್ಮಿಸುತ್ತಿದೆ. ಈ ಜಗತ್ತು ಮಾನವೀಯತೆಯ ಹಾದಿಯನ್ನು ರೂಪಿಸುವ ಎಐ ಯುಗದ ಉದಯದಲ್ಲಿದೆ ಎಂದು ಹೇಳಿದ್ದಾರೆ.

ಮಾನವೀಯತೆಯ ಹಾದಿ ರೂಪಿಸುವ ಎಐ ಯುಗದ ಆರಂಭದಲ್ಲಿದ್ದೇವೆ; ಪ್ಯಾರಿಸ್​ನಲ್ಲಿ ಪ್ರಧಾನಿ ಮೋದಿ
Modi In Global Ai Summit
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಎಐ (AI) ಕ್ರಿಯಾ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎಐನಿಂದಾಗಿ ಉದ್ಯೋಗ ನಷ್ಟವಾಗುತ್ತದೆ, ನಿರುದ್ಯೋಗ ಹೆಚ್ಚಾಗುತ್ತದೆ ಎಂಬ ಆತಂಕ ಎಲ್ಲೆಡೆ ಹರಡಿದೆ. ಆದರೆ, ಅದು ಭ್ರಮೆ. ಈ ಹೊಸ ತಂತ್ರಜ್ಞಾನವು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಮೋದಿ ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ ಜಾಗತಿಕವಾಗಿ ನಿರುದ್ಯೋಗಕ್ಕೆ ಕಾರಣವಾಗುವುದಿಲ್ಲ ಎಂಬ ವಿಶ್ವಾಸವಿದೆ. ಎಐ ಮಾನವೀಯತೆಯ ಕೋಡ್​ಗಳನ್ನು ಬರೆಯುತ್ತಿದೆ ಎಂದು ಪಿಎಂ ಮೋದಿ ಹೇಳಿದ್ದಾರೆ.

ಎಐ ಮಾದರಿಗಳು ಗಾತ್ರ, ಡೇಟಾ ಅಗತ್ಯತೆಗಳು ಮತ್ತು ಸಂಪನ್ಮೂಲದ ಅವಶ್ಯಕತೆಗಳಲ್ಲಿಯೂ ಸಹ ಪರಿಣಾಮಕಾರಿ ಮತ್ತು ಸುಸ್ಥಿರವಾಗಿರಬೇಕು ಎಂದು ಮೋದಿ ಹೇಳಿದ್ದಾರೆ. ನಮ್ಮ ಇಂದಿನ ಜಗತ್ತು ಮಾನವಕುಲದ ಹಾದಿಯನ್ನು ರೂಪಿಸುವ ಎಐ ಯುಗದ ಉದಯದಲ್ಲಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಕ್ರಿಯಾ ಶೃಂಗಸಭೆಯ ಮೂರನೇ ಆವೃತ್ತಿಯ ಸಹ-ಅಧ್ಯಕ್ಷತೆ ವಹಿಸಲು ಪ್ರಧಾನಿ ಮೋದಿ ಪ್ಯಾರಿಸ್‌ಗೆ ತೆರಳಿದ್ದಾರೆ.

ಇದನ್ನೂ ಓದಿ: India AI: ಪ್ಯಾರಿಸ್​ನಲ್ಲಿ ಎಐ ಆ್ಯಕ್ಷನ್ ಸಮಿಟ್ 2025: ಭಾರತದಿಂದ ‘ಅಭಿವೃದ್ಧಿಗೆ ದತ್ತಾಂಶ’

ಎಐ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ವೈವಿಧ್ಯತೆಯನ್ನು ಬಳಸಿಕೊಂಡು ಭಾರತ ತನ್ನದೇ ಆದ ದೊಡ್ಡ ಭಾಷಾ ಮಾದರಿಯನ್ನು ನಿರ್ಮಿಸುತ್ತಿದೆ. ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಸೌರ ಒಕ್ಕೂಟದಂತಹ ಉಪಕ್ರಮಗಳ ಮೂಲಕ ಭಾರತ ಮತ್ತು ಫ್ರಾನ್ಸ್ ಹಲವು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡಿವೆ ಎಂದು ಹೇಳಿದ್ದಾರೆ. ಸುಸ್ಥಿರ ಎಐ ಎಂದರೆ ಶುದ್ಧ ಶಕ್ತಿಯನ್ನು ಬಳಸುವುದು ಎಂದರ್ಥವಲ್ಲ. ಎಐ ಮಾದರಿಗಳು ಗಾತ್ರ, ಡೇಟಾ ಅಗತ್ಯತೆಗಳು ಮತ್ತು ಸಂಪನ್ಮೂಲಗಳ ಅವಶ್ಯಕತೆಗಳಲ್ಲಿಯೂ ಸಹ ಪರಿಣಾಮಕಾರಿ ಮತ್ತು ಸುಸ್ಥಿರವಾಗಿರಬೇಕು ಎಂದು ಮೋದಿ ಹೇಳಿದ್ದಾರೆ.


ಪ್ಯಾರಿಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆಯ ಅಪಾಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಶ್ಲಾಘಿಸಿದ್ದಾರೆ. ಹಾಗೇ, ಪ್ರತಿಕೂಲ ರಾಷ್ಟ್ರಗಳು ಎಐ ಅನ್ನು ಶಸ್ತ್ರಾಸ್ತ್ರಗಳಾಗಿ ಬಳಸಿಕೊಂಡಿವೆ ಎಂದು ಎಚ್ಚರಿಸಿದ್ದಾರೆ.


ಮಾನವರ ದೈನಂದಿನ ಜೀವನದಲ್ಲಿ ಕೃತಕ ಬುದ್ಧಿಮತ್ತೆ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂಬುದರ ಕುರಿತು ಮೋದಿ ಮಾತನಾಡಿದ್ದಾರೆ. ಆದರೆ, ಕೃತಕ ಬುದ್ಧಿಮತ್ತೆಯಲ್ಲಿನ ಪಕ್ಷಪಾತಗಳ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: 8 ಎಪಿಸೋಡ್​ಗಳಲ್ಲಿ ಪ್ರಸಾರವಾಗಲಿದೆ ಪರೀಕ್ಷಾ ಪೇ ಚರ್ಚೆ; ಮಿಸ್ ಮಾಡದೆ ನೋಡಿ ಎಂದ ಮೋದಿ

ಭಾರತದಲ್ಲಿ AI ಕ್ರಾಂತಿಯ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದು, “ಭಾರತವು 1.4 ಶತಕೋಟಿಗೂ ಹೆಚ್ಚು ಜನರಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ನಿರ್ಮಿಸಿದೆ. ನಾವು ಡಿಜಿಟಲ್ ವಾಣಿಜ್ಯವನ್ನು ಪ್ರಜಾಪ್ರಭುತ್ವ ಮತ್ತು ಎಲ್ಲರಿಗೂ ಪ್ರವೇಶಿಸುವಂತೆ ಮಾಡಿದ್ದೇವೆ. ಈ ದೃಷ್ಟಿಕೋನವು ಭಾರತದ ರಾಷ್ಟ್ರೀಯ ಎಐ ಮಿಷನ್‌ನ ಅಡಿಪಾಯವಾಗಿದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ