Amazon Forest: ವಿಮಾನ ಅಪಘಾತವಾಗಿ 1 ತಿಂಗಳಾಯ್ತು, ಅಮೆಜಾನ್​ ಕಾಡಿನಲ್ಲಿ 4 ಮಕ್ಕಳಿಗಾಗಿ ನಿರಂತರ ಹುಡುಕಾಟ, ಬದುಕಿರಬಹುದೆಂಬ ಭರವಸೆ

|

Updated on: May 30, 2023 | 8:07 AM

ಸುಮಾರು ಒಂದು ತಿಂಗಳ ಹಿಂದೆ ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

Amazon Forest: ವಿಮಾನ ಅಪಘಾತವಾಗಿ 1 ತಿಂಗಳಾಯ್ತು, ಅಮೆಜಾನ್​ ಕಾಡಿನಲ್ಲಿ 4 ಮಕ್ಕಳಿಗಾಗಿ ನಿರಂತರ ಹುಡುಕಾಟ, ಬದುಕಿರಬಹುದೆಂಬ ಭರವಸೆ
ಅಮೆಜಾನ್ ಕಾಡು
Follow us on

ಸುಮಾರು ಒಂದು ತಿಂಗಳ ಹಿಂದೆ ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಾಲ್ಕು ಮಕ್ಕಳ ಶವ ದೊರೆತಿರಲಿಲ್ಲ. ಅವರ ಜತೆ 11 ತಿಂಗಳ ಮಗು ಕೂಡ ಇತ್ತು ಎನ್ನಲಾಗಿದೆ. ಅರ್ಧ ತಿಂದಿರುವ ಹಣ್ಣು, ಮಗುವಿನ ಡೈಪರ್, ಒಂದು ಜತೆ ಶೂ ಪತ್ತೆಯಾಗಿದೆ. ಹಾಗಾಗಿ ಒಂದು ತಿಂಗಳಾದರೂ ಮಕ್ಕಳು ಬದುಕಿರಬಹುದು ಎನ್ನುವ ಭರವಸೆ ಒಂದೆಡೆ ಇದೆ. ಒಂದೊಮ್ಮೆ ಮೃತಪಟ್ಟಿದ್ದರೆ ಶ್ವಾನಗಳು ಅವರನ್ನು ಪತ್ತೆಹಚ್ಚುತ್ತವೆ.

ಮೇ 1 ರಂದು ಕೊಲಂಬಿಯಾದ ಆಗ್ನೇಯದಲ್ಲಿ ಲಘು ವಿಮಾನ ಅಪಘಾತ ಸಂಭವಿಸಿತ್ತು,ಮೂವರು ಪ್ರಾಣಬಿಟ್ಟಿದ್ದರು. ಅಂದು ಸೆಸ್ನಾ 206 ವಿಮಾನವು ಕೊಲಂಬಿಯಾದ ಅಮೆಜಾನ್​ನಲ್ಲಿರುವ ಸ್ಯಾನ್ ಜೋಸ್​ ಡೆಲ್​ ಗುವಿಯಾರ್ ಪಟ್ಟಣಕ್ಕೆ ಹೊರಟಿತ್ತು, ಕೆಲವೇ ನಿಮಿಷಗಳಲ್ಲಿ ಎಂಜಿನ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು, ವಿಮಾನವು ರಾಡಾರ್​ನಿಂದ ಕಣ್ಮರೆಯಾಗಿತ್ತು.

ಮೇ15, 16 ರಂದು ಮೂರು ಜವವನ್ನು ಮಿಲಿಟರಿ ಪತ್ತೆ ಮಾಡಿದೆ. ಮಕ್ಕಳಾದ ಲೆಸ್ಲಿ(13), ಸೊಲಿನಿ(9), ಟಿಯೆನ್ ನೊರಿಯಲ್(4) ಮತ್ತು 11 ತಿಂಗಳ ಮಗು ಕ್ರಿಸ್ಟಿನ್ ನಾಪತ್ತೆಯಾಗಿದ್ದಾರೆ.

ಮತ್ತಷ್ಟು ಓದಿ: Plane Crash: ಅಮೆಜಾನ್ ದಟ್ಟ​ ಕಾಡಿನಲ್ಲಿ ವಿಮಾನ ಪತನ, ಪವಾಡವೆಂಬಂತೆ ಬದುಕುಳಿದ 4 ಮಕ್ಕಳು, 2 ವಾರಗಳ ಬಳಿಕ ಪತ್ತೆ

ಸುಮಾರು 200 ಸೈನಿಕರು ಶೋಧಕಾರ್ಯ ಮುಂದುವರೆಸಿದ್ದಾರೆ. ಮೇ 17 ರಂದು ಮಕ್ಕಳು ಸಿಕ್ಕದಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದರು, ಬಳಿಕ ಅಧ್ಯಕ್ಷ ಗುಸ್ಟಾವೊ ಕ್ಷಮೆಯಾಚಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ