AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಗೆಳೆಯರಿಗಿಂತ ಹೆಚ್ಚಾಗಿ ಸಹೋದರರು; ಮೋದಿ ಬಗ್ಗೆ ಇಸ್ರೇಲ್ ಸಂಸತ್​​ನಲ್ಲಿ ಪ್ರಧಾನಿ ನೆತನ್ಯಾಹು ಬಣ್ಣನೆ

ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ್ದಾರೆ. ಇದು ಇಸ್ರೇಲ್​ಗೆ ಮೋದಿ ಅವರ 2ನೇ ಭೇಟಿಯಾಗಿದೆ. ಈ ಹಿಂದಿನ ಅಧಿಕಾರಾವಧಿಯಲ್ಲಿ 2017ರಲ್ಲಿ ಪ್ರಧಾನಿ ಮೋದಿ ಇಸ್ರೇಲ್​ಗೆ ಭೇಟಿ ನೀಡಿದ್ದರು. ಇಂದು ಪ್ರಧಾನಿ ಮೋದಿ ಇಸ್ರೇಲ್​ ಸಂಸತ್​​ನಲ್ಲಿ ಭಾಷಣ ಮಾಡಲಿದ್ದಾರೆ. ಇದಕ್ಕೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂಸತ್​ನಲ್ಲಿ ಮಾತನಾಡಿದ್ದು, ‘ಪ್ರಧಾನಿ ಮೋದಿ ಸ್ನೇಹಿತನಿಗಿಂತ ಹೆಚ್ಚು, ಅವರು ನನ್ನ ಸಹೋದರನಿದ್ದಂತೆ’ ಎಂದು ಹೇಳಿದ್ದಾರೆ.

ನಾವು ಗೆಳೆಯರಿಗಿಂತ ಹೆಚ್ಚಾಗಿ ಸಹೋದರರು; ಮೋದಿ ಬಗ್ಗೆ ಇಸ್ರೇಲ್ ಸಂಸತ್​​ನಲ್ಲಿ ಪ್ರಧಾನಿ ನೆತನ್ಯಾಹು ಬಣ್ಣನೆ
Netanyahu With Pm Modi
ಸುಷ್ಮಾ ಚಕ್ರೆ
|

Updated on:Feb 25, 2026 | 9:24 PM

Share

ಟೆಲ್ ಅವಿವ್, ಫೆಬ್ರವರಿ 25: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಮಾನ ನಿಲ್ದಾಣಕ್ಕೇ ಆಗಮಿಸಿ ಆತ್ಮೀಯವಾಗಿ ಸ್ವಾಗತ ನೀಡಿದರು. ಇಂದು ಪ್ರಧಾನಿ ಮೋದಿ (PM Modi in Israel) ಇಸ್ರೇಲ್ ಸಂಸತ್​​ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯೆಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಲಿದ್ದಾರೆ. ಅದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನೆತನ್ಯಾಹು ಪ್ರಧಾನಿ ಮೋದಿಯನ್ನು ತಮ್ಮ ಸಹೋದರನಿದ್ದಂತೆ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಭಾರತ ಮತ್ತು ಇಸ್ರೇಲ್ ನಡುವಿನ ಗೆಳೆತನ, ಬಾಂಧವ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ್ದಾರೆ.

ಈ ಸ್ನೇಹದ ಪ್ರತಿಬಿಂಬವಾಗಿ, ಭಾರತ ಮತ್ತು ಇಸ್ರೇಲ್ ತಮ್ಮ ವ್ಯಾಪಾರವನ್ನು ದ್ವಿಗುಣಗೊಳಿಸಿದೆ. ಎರಡೂ ದೇಶಗಳ ನಡುವಿನ ಸಹಕಾರ 3 ಪಟ್ಟು ಹೆಚ್ಚಾಗಿದೆ, ಎರಡೂ ದೇಶಗಳ ನಡುವಿನ ತಿಳುವಳಿಕೆ 4 ಪಟ್ಟು ಹೆಚ್ಚಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ. “ಇದು ನಮಗೆ ಹೆಮ್ಮೆಯ ಕ್ಷಣ. ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ನನ್ನ ಗೆಳೆಯ ಎನ್ನುವುದಕ್ಕಿಂತಲೂ ಸಹೋದರ ಎಂದರೂ ತಪ್ಪಾಗಲಾರದು. ಭಾರತದೊಂದಿಗಿನ ವ್ಯಾಪಾರ ದ್ವಿಗುಣಗೊಂಡಿದೆ ಮತ್ತು ಸಹಕಾರ 4 ಪಟ್ಟು ಹೆಚ್ಚಾಗಿದೆ” ಎಂದು ಮೋದಿ ಹೇಳಿದ್ದಾರೆ.

ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿ ಎರಡನೇ ಬಾರಿಗೆ ಇಸ್ರೇಲ್‌ಗೆ ಆಗಮಿಸಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅವರ ಪತ್ನಿ ಪ್ರಧಾನಿಯನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಇಸ್ರೇಲ್ ಸಂಸತ್ತಿನಲ್ಲಿ “ಮೋದಿ, ಮೋದಿ” ಎಂಬ ಘೋಷಣೆಗಳು ಕೇಳಿಬಂದವು. ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ “ಇದು ನಮಗೆ ಹೆಮ್ಮೆಯ ಕ್ಷಣ” ಎಂದು ಹೇಳಿದರು. ಅವರು ಪ್ರಧಾನಿಯನ್ನು “ನಮಸ್ತೆ” ಯೊಂದಿಗೆ ಸ್ವಾಗತಿಸಿದರು. ಈ ವೇಳೆ ಸಂಸತ್​​ನ ಎಲ್ಲ ಸದಸ್ಯರೂ ಎದ್ದುನಿಂತು ಕೈ ಜೋಡಿಸಿ ನಮಸ್ಕಾರ ಮಾಡಿ ಮೋದಿಯನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:23 pm, Wed, 25 February 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More