COP26 Summit: ಒನ್ ಸನ್, ಒನ್ ವರ್ಲ್ಡ್, ಒನ್ ಗ್ರಿಡ್; ಸೌರಶಕ್ತಿ ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಲಹೆ
Narendra Modi: ಪಳೆಯುಳಿಕೆ ಇಂಧನಗಳು ಕೆಲವು ದೇಶಗಳನ್ನು ಸಮೃದ್ಧಗೊಳಿಸಿತು. ಆದರೆ ಭೂಮಿಯ ವಾತಾವರಣವನ್ನು ಕಳಪೆ ಆಗಿಸಿತು. ಪಳೆಯುಳಿಕೆ ಇಂಧನಕ್ಕಾಗಿ ಉಂಟಾದ ಸ್ಪರ್ಧೆ ಕೂಡ ಬೌಗೋಳಿಕವಾಗಿ ಹಾಗೂ ರಾಜಕೀಯ ಒತ್ತಡಕ್ಕೆ ಕಾರಣವಾಗಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗ್ಲಾಸ್ಗೊ: ನೈಸರ್ಗಿಕ ಸಂಪತ್ತಿನಿಂದ ಮಾತ್ರ ಗ್ರಹವನ್ನು ರಕ್ಷಿಸಬಹುದು. ಮನುಕುಲದ ಅಗತ್ಯಗಳಿಗೆ ಸೌರ ಶಕ್ತಿ ಬಳಸಿಕೊಳ್ಳಬೇಕು. ಸೌರಶಕ್ತಿ ಸಂಪೂರ್ಣ ಶುದ್ಧ ಮತ್ತು ಸಮರ್ಥನೀಯವಾಗಿದೆ. ಸವಾಲು ಎಂದರೆ ಸೌರಶಕ್ತಿ ಹಗಲಿನಲ್ಲಿ ಮಾತ್ರ ಲಭ್ಯವಿರುತ್ತೆ. ಸೌರಶಕ್ತಿ ಹವಾಮಾನದ ಮೇಲೆ ಅವಲಂಬಿತವಿರುತ್ತದೆ. ಇದಕ್ಕೆ ಒನ್ ಸನ್, ಒನ್ ವರ್ಲ್ಡ್, ಒನ್ ಗ್ರಿಡ್ ಪರಿಹಾರ ಎಂದು ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸ್ಕಾಟ್ಲೆಂಡ್ನ ಗ್ಲಾಸ್ಕೋದಲ್ಲಿ ನಡೆಯುತ್ತಿರುವ ಕೋಪ್ 26 ನಾಯಕರ ಸಮ್ಮೇಳನದಲ್ಲಿ ಅವರು ಮಾತನಾಡಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋ ಸೋಲಾರ್ ಕ್ಯಾಲ್ಕುಲೇಟರ್ ಅಪ್ಲಿಕೇಷನ್ ಅನ್ನು ವಿಶ್ವಕ್ಕೆ ನೀಡಲಿದೆ ಎಂದು ಮೋದಿ ಹೇಳಿದ್ದಾರೆ. ಪಳೆಯುಳಿಕೆ ಇಂಧನಗಳು ಕೆಲವು ದೇಶಗಳನ್ನು ಸಮೃದ್ಧಗೊಳಿಸಿತು. ಆದರೆ ಭೂಮಿಯ ವಾತಾವರಣವನ್ನು ಕಳಪೆ ಆಗಿಸಿತು. ಪಳೆಯುಳಿಕೆ ಇಂಧನಕ್ಕಾಗಿ ಉಂಟಾದ ಸ್ಪರ್ಧೆ ಕೂಡ ಬೌಗೋಳಿಕವಾಗಿ ಹಾಗೂ ರಾಜಕೀಯ ಒತ್ತಡಕ್ಕೆ ಕಾರಣವಾಗಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒನ್ ಸನ್, ಒನ್ ವರ್ಲ್ಡ್ ಮತ್ತು ಒನ್ ಗ್ರಿಡ್ ಪರಿಹಾರವು ಶಕ್ತಿಯ ಸಂಗ್ರಹಕ್ಕೆ ವ್ಯಯಿಸಬೇಕಾದ ಸಾಮರ್ಥ್ಯದ ಅಗತ್ಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕಾರ್ಬನ್ ಫೂಟ್ಪ್ರಿಂಟ್ನ್ನು ಮತ್ತು ಇಂಧನ ಬೆಲೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ವಿವಿಧ ದೇಶ ಮತ್ತು ಪ್ರದೇಶಗಳ ಸಹಕಾರವೂ ಹೆಚ್ಚುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Speaking at the session on ‘Accelerating Clean Technology Innovation and Deployment.’ https://t.co/4bvexwZswy
— Narendra Modi (@narendramodi) November 2, 2021
ಒನ್ ಸನ್, ಒನ್ ವರ್ಲ್ಡ್ ಮತ್ತು ಒನ್ ಗ್ರಿಡ್ ಹಾಗೂ ಗ್ರೀನ್ ಗ್ರಿಡ್ ಸಹಕಾರದಿಂದ ಒಗ್ಗಟ್ಟಾದ ಮತ್ತು ಬಲವಾದ ಭೌಗೋಳಿಕ ಶಕ್ತಿಕೇಂದ್ರ ಅಭಿವೃದ್ಧಿ ಆಗಬಹುದು ಎಂದು ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: COP26 Summit: ಸರ್ವೇ ಜನಾಃ ಸುಖಿನೋ ಭವಂತು ಎಂದ ಭಾರತದ ಪ್ರತಿನಿಧಿಯಾಗಿ ಇಲ್ಲಿದ್ದೇನೆ: ಪ್ರಧಾನಿ ಮೋದಿ ಭಾಷಣ
ಇದನ್ನೂ ಓದಿ: PM Narendra Modi: ವಾರಾಣಸಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ಗೆ ಪ್ರಧಾನಿ ಮೋದಿ ಚಾಲನೆ