ಶ್ರೀಲಂಕಾದ (Sri Lanka) ಅಧ್ಯಕ್ಷ ಗೊಟಬಯ ರಾಜಪಕ್ಸ(Gotabaya Rajapaksa) ಅವರನ್ನು ಖಾಸಗಿ ಭೇಟಿಗಾಗಿ ನಮ್ಮ ದೇಶಕ್ಕೆ ಅನುಮತಿಸಲಾಗಿದೆ ಎಂದು ಸಿಂಗಾಪುರ (Singapore) ಸರ್ಕಾರ ಗುರುವಾರ ಹೇಳಿದೆ. ಅವರು ಆಶ್ರಯಕ್ಕಾಗಿ ನಮ್ಮಲ್ಲಿ ಕೇಳಿಲ್ಲ, ನಾವು ಆಶ್ರಯ ನೀಡುವುದಾಗಿ ಅನುಮತಿಸಿಲ್ಲ. ಸಿಂಗಾಪುರ ಸಾಮಾನ್ಯವಾಗಿ ಆಶ್ರಯದ ಮನವಿ ಸ್ವೀಕರಿಸುವುದಿಲ್ಲ ಎಂದು ಸಿಂಗಾಪುರದ ವಿದೇಶಾಂಗ ಸಚಿವಾಲಯ ಹೇಳಿದೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಹಿನ್ನಲೆಯಲ್ಲಿ ಜನಾಕ್ರೋಶ ಸಿಡಿದೆದ್ದಾಗ ಗೊಟಬಯ ಶ್ರೀಲಂಕಾದಿಂದ ಪಲಾಯನ ಮಾಡಿ ಮಾಲ್ಡೀವ್ಸ್ ನಲ್ಲಿ ನೆಲೆಸಿದ್ದರು. ರಾಜಪಕ್ಸ ಅವರು ಮಾಲ್ಡೀವ್ಸ್ ನಿಂದ ಸೌದಿ ಏರ್ ಲೈನ್ ವಿಮಾನ ಎಸ್ ವಿ788ನಲ್ಲಿ ಸಿಂಗಾಪುರಕ್ಕೆ ಹೋಗಿದ್ದಾರೆ. 73ರ ಹರೆಯದ ಗೊಟಬಯ ದೇಶದಿಂದ ಪಲಾಯನ ಮಾಡಿದ ಮೇಲೆ ಬುಧವಾರದಂದು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಸದ್ಯ ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದು ಮುಂದಿನ ಅಧ್ಯಕ್ಷರ ಆಯ್ಕೆ ವರೆಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಗೊಟಬಯ ಅವರು ಬುಧವಾರ ಸೌದಿ ಏರ್ ಲೈನ್ಸ್ ವಿಮಾನ ಹತ್ತಿದ್ದು, ಅವರು ಸಿಂಗಾಪುರಕ್ಕೆ ಹೋಗಲಿದ್ದಾರೆ. ಅಲ್ಲಿಂದ ಅವರು ಜೆದ್ದಾ ನಂತರ ಸೌದಿ ಅರೇಬಿಯಾಕ್ಕೆ ಹೋಗಲಿದ್ದಾರೆ ಎಂದು ಹೆಸರು ಹೇಳಲು ಬಯಸದ ಮಾಲ್ಡೀವ್ಸ್ ಸರ್ಕಾರದ ಅಧಿಕಾರಿಗಳು ಹೇಳಿದ್ದರು.
ರಾಜಪಕ್ಸ ಅವರು ಗುರುವಾರ ಮಧ್ಯಾಹ್ನ ಸೌದಿಯಾ ಏರ್ ಲೈನ್ಸ್ ವಿಮಾನದಲ್ಲಿ ಬಂದಿಳಿದಿದ್ದಾರೆ. ಲಂಕಾ ಅಧ್ಯಕ್ಷರು ಮಂಗಳವಾರ ಸಂಜೆ ಕೊಲಂಬೊದಿಂದ ಮಾಲ್ಡೀನ್ಸ್ ಗೆ ಪ್ರಯಾಣ ಬೆಳೆಸಿದ್ದರು.
ರಾಜಪಕ್ಸ ಅವರು ಗುರುವಾರ ಮಧ್ಯಾಹ್ನ ಸೌದಿಯಾ ಏರ್ ಲೈನ್ಸ್ ವಿಮಾನದಲ್ಲಿ ಬಂದಿಳಿದಿದ್ದಾರೆ. ಲಂಕಾ ಅಧ್ಯಕ್ಷರು ಮಂಗಳವಾರ ಸಂಜೆ ಕೊಲಂಬೊದಿಂದ ಮಾಲ್ಡೀನ್ಸ್ ಗೆ ಪ್ರಯಾಣ ಬೆಳೆಸಿದ್ದರು. ನಿನ್ನೆ ರಾತ್ರಿ ಅವರು ಮಾಲ್ಡೀವ್ಸ್ ಸರ್ಕಾರಕ್ಕೆ ಮನವಿ ಮಾಡಿ ಸಿಂಗಾಪುರಕ್ಕೆ ಹೋಗಲು ಖಾಸಗಿ ವಿಮಾನ ವ್ಯವಸ್ಥೆ ಮಾಡುವಂತೆ ಕೇಳಿದ್ದರು ಎಂದು ಮೂಲಗಳು ಹೇಳಿವೆ. ಕೊಲಂಬೊದಿಂದ ಹೊರ ಹೋಗುವಾಗ ಅವರು ಬುಧವಾರ ರಾತ್ರಿಯೊಳಗೆ ರಾಜೀನಾಮೆ ಸಲ್ಲಿಸುತ್ತೇನ ಎಂದು ಹೇಳಿದ್ದರು. ಆದರೆ ಅವರು ಇಲ್ಲಿಯವರೆಗೆ ರಾಜೀನಾಮೆ ಸಲ್ಲಿಸಿಲ್ಲ.
ರಾಜೀನಾಮೆ ನೀಡಿ ಇಲ್ಲವೇ ನಾವು ಬೇರೆ ಆಯ್ಕೆ ಕಂಡುಕೊಳ್ಳುತ್ತೇವೆ: ಸ್ಪೀಕರ್
ಅಧ್ಯಕ್ಷ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡುವುದಾಗಿ ಹೇಳಿದ್ದ ಗೊಟಬಯ ರಾಜಪಕ್ಸ ಇನ್ನೂ ರಾಜೀನಾಮೆ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಲಂಕಾ ಸ್ಪೀಕರ್ ಮಹಿಂದಾ ಯಾಪ ಅಬೇವರ್ಧೆನಾ ಆದಷ್ಟು ಬೇಗ ರಾಜೀನಾಮೆ ಸಲ್ಲಿಸಿ ಇಲ್ಲವೇ ನಾವು ನಿಮ್ಮನ್ನು ಹುದ್ದೆಯಿಂದ ಕಿತ್ತು ಹಾಕುವ ಆಯ್ಕೆ ಪರಿಗಣಿಸುತ್ತೇವೆ ಎಂದು ಹೇಳಿರುವುದಾಗಿ ನ್ಯೂಸ್ ಫಸ್ಟ್ ಲಂಕಾ ವರದಿ ಮಾಡಿದೆ.
Published On - 6:25 pm, Thu, 14 July 22